Rape Case: ಖ್ಯಾತ ಉದ್ಯಮಿ ಸಜ್ಜನ್‌ ಜಿಂದಾಲ್‌ ಮೇಲೆ ಅತ್ಯಾಚಾರ ಆರೋಪ ಕೇಸು ದಾಖಲು!

Mumbai Crime News; ದೇಶದ ಖ್ಯಾತ ಉದ್ಯಮಿ JSW ಗ್ರೂಪ್‌ನ (JSW Group) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಜ್ಜನ್‌ ಜಿಂದಾಲ್‌ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿರುವ ಕುರಿತು ವರದಿಯಾಗಿದೆ. ಮಹಿಳೆ ನೀಡಿದ ದೂರಿನ ಅನ್ವಯ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದೂರಿನ ಪ್ರಕಾರ, ಜನವರಿ 24, 2022 ರಂದು ಈ ಘಟನೆ ನಡೆದಿದೆ ಎಂದು ದೂರುದಾರ ಮಹಿಳೆ ಆರೋಪ ಮಾಡಿದ್ದಾರೆ. ದೂರುದಾರ ಮಹಿಳೆ ಈ ವರ್ಷದ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಪೊಲೀಸರಿಗೆ ಲಿಖಿತ ದೂರೊಂದನ್ನು ನೀಡಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಬಳಿಕ ನ್ಯಾಯಾಲಯದ ಮೊರೆ ಹೋಗಿದ್ದು, ಇದೀಗ ಜಿಂದಾಲ್‌ ವಿರುದ್ಧ FIR ದಾಖಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ ಎಂದು ವರದಿಯಾಗಿದೆ.

ಅಕ್ಟೋಬರ್ 2021 ಮತ್ತು ಜನವರಿ 2022 ರ ನಡುವೆ, ತನ್ನ ಮತ್ತು ಜಿಂದಾಲ್ ನಡುವೆ ಅನೇಕ ಬಾರಿ ಭೇಟಿಯಾಗಿದ್ದೇವೆ. ಜನವರಿ 24, 2022 ರಂದು, ಬಿಕೆಸಿಯಲ್ಲಿ ಜಿಂದಾಲ್ ಕಚೇರಿ ಇರುವ ಕಟ್ಟಡದ ಪೆಂಟ್‌ಹೌಸ್‌ ನಲ್ಲಿ ಜಿಂದಾಲ್ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಲಾಗಿದೆ. ಅನಂತರ ನಾನು ಫೆ.16, 2023 ರಂದು ಪೊಲೀಸರನ್ನು ಭೇಟಿ ಮಾಡಲು ಹೋದಾಗ ಜಿಂದಾಲ್‌ನ ಆಪ್ತರು ನನ್ನನ್ನು ಸಂಪರ್ಕ ಮಾಡಿದ್ದರು ಹಾಗೂ ರಾಜಿ ಸಂಧಾನ ಮಾಡಿ ದೂರು ಹಿಂಪಡೆಯುವಂತೆ ಕೋರಿದ್ದರು ಎಂದು ಆರೋಪಿಸಲಾಗಿದೆ.

ನ್ಯಾಯಾಲಯದ ಆದೇಶ ನೀಡಿದ ಒಂದು ದಿನದ ನಂತರ ಡಿ.13,2023 ರಂದು FIR ದಾಖಲು ಮಾಡಲಾಗಿದೆ. ಮಹಿಳೆ ನೀಡಿದ ದೂರಿನನ್ವಯ ಜಿಂದಾಲ್‌ ವಿರುದ್ಧ ಐಪಿಸಿಯ 376 ಮತ್ತು 354 ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.

Leave A Reply

Your email address will not be published.