Udupi: ಬಿಕಾಂ ಕಲಿತವ ‘ಆಯುರ್ವೇದಿಕ್ ಡಾಕ್ಟರ್’; ನಕಲಿ ಡಾಕ್ಟರ್ ಅರೆಸ್ಟ್!!!

Udupi: ಉಡುಪಿಯಲ್ಲಿ ಪರವಾನಗಿ ಇಲ್ಲದ ಲ್ಯಾಬ್‌, ಕ್ಲಿನಿಕ್‌ಗಳ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ. ಈ ವೇಳೆ ತಾನು ವೈದ್ಯನೆಂದು ಹೇಳಿ ಕ್ಲಿನಿಕ್‌ ಇಟ್ಟುಕೊಂಡ ಆಯುರ್ವೇದಿಕ್‌, ಆಲೋಪತಿ ಚಿಕಿತ್ಸೆ ನೀಡುತ್ತಿದ್ದ ಬಿಕಾಂ ಪದವೀಧರನೊಬ್ಬ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಸಂದೇಶ್‌ ರಾವ್‌ ಕುಂಜಾಲಿನಲ್ಲಿ ಶ್ರೀ ಸೂರ್ಯನಾರಾಯಣ ಸ್ವಾಮಿ ಎಂಬ ಹೆಸರಿನ ಆಯುರ್ವೇದಿಕ್‌ ಕೇಂದ್ರ ತೆರೆದು ಜನರಿಗೆ ಚಿಕಿತ್ಸೆ ನೀಡುತ್ತಿದ್ದ. ಆದರೆ ಯಾವಾಗ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದರೋ ಸಂದೇಶ್‌ ರಾವ್‌ ವೈದ್ಯ ಅಲ್ಲ ನಕಲಿ ವೈದ್ಯ ಎಂದು ತಿಳಿದು ಬಂದಿದೆ. ಇದೀಗ ಆರೋಪಿ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ. ಕ್ಲಿನಿಕನ್ನು ಆರೋಗ್ಯಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ಬಹಳ ಸದ್ದು ಮಾಡಿದ ಭ್ರೂಣ ಹತ್ಯೆ ಕೇಸ್‌ ಪತ್ತೆಯಾದಾಗಿನಿಂದ ಆರೋಗ್ಯಾಧಿಕಾರಿಗಳು ಜಿಲ್ಲೆಯ ಹಲವೆಡೆ ಲ್ಯಾಬ್‌, ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದ್ದ ಸಂದರ್ಭ ಈ ಪ್ರಕರಣ ಬೆಳಕಿಗೆ ಬಂದಿದೆ.

Leave A Reply

Your email address will not be published.