Nagpur: ಸ್ಫೋಟಕ ತಯಾರಿಕಾ ಘಟಕ ಬ್ಲಾಸ್ಟ್! 6 ಮಹಿಳೆಯರ ಸಹಿತ 9 ಬಲಿ!

ಸ್ಫೋಟಕ ಹಾಗೂ ರಕ್ಷಣಾ ಸಲಕರಣೆ ತಯಾರಿಕಾ ಕಂಪನಿಯೊಂದರಲ್ಲಿ ಸ್ಫೋಟಗೊಂಡ ಪರಿಣಾಮ 6 ಮಹಿಳೆಯರು ಸೇರಿ 9 ಜನ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಭೀಕರ ಘಟನೆ ಯೊಂದು ನಡೆದಿದೆ. ದುರಂತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ.

ಮಹಾರಾಷ್ಟ್ರದ ನಾಗ್ಪುರದ ಬಜಾರ್‌ಗಾಂವ್‌ ಗ್ರಾಮದಲ್ಲಿರುವ ‘ಸೋಲಾರ್‌ ಎಕ್ಸ್‌ಪ್ಲೋಸಿವ್’ ಎಂಬ ಸೋಲಾರ್‌ ಕಂಪನಿಯ ಬೂಸ್ಟರ್‌ ಘಟಕದಲ್ಲಿ ಭಾನುವಾರ ಮುಂಜಾನೆ 9 ಗಂಟೆ ಸುಮಾರಿಗೆ ಉತ್ಪನ್ನವೊಂದನ್ನು ಸೀಲ್‌ ಮಾಡುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಭಾರೀ ಸ್ಫೋಟ ಸಂಭವಿಸಿದೆ. ಆದರೆ ಸ್ಫೋಟಕ್ಕೆ ನಿಖರವಾದ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಘಟನಾ ಸಂದರ್ಭ ಸ್ಥಳದಲ್ಲಿ 12 ಮಂದಿ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ, ಘಟಕದೊಳಗೆ ಇನ್ನೂ ಹಲವರು ಸಿಲುಕಿಕೊಂಡಿರಬಹುದೆಂಬ ಶಂಕೆ ಉಂಟಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇನ್ನು ಘಟನೆಯ ಕುರಿತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಬೇಸರ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ: Actor Chetan Ahimsa: ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನ ಪೋಸ್ಟ್‌; ಚೇತನ್‌ ವಿರುದ್ಧ ಎನ್‌ಸಿಆರ್‌!!

Leave A Reply

Your email address will not be published.