Big boss: ಬಿಗ್ಬಾಸ್ ಸ್ಪರ್ಧಿಗಳ ಫ್ಯಾನ್ಸ್ ನಡುವೆ ಜಟಾಪಟಿ! ವಾಹನಗಳ ಗಾಜು ಪುಡಿಪುಡಿ ಮಾಡಿದ ಅಭಿಮಾನಿಗಳು!

big boss news Attack on Bigg Boss Telugu 7 winner Pallavi Prashanth Filed a case against the fans

ಬಿಗ್ಬಾಸ್ ತೆಲುಗು ಸೀಸನ್ 7ರ ಗ್ರ್ಯಾಂಡ್ ಫಿನಾಲೆಯು ಡಿಸೆಂಬರ್ 17 ರಂದು ನಡೆದಿದ್ದು, ರೈತ ಹಾಗೂ ಯೂಟ್ಯೂಬರ್ ಆಗಿರುವ ಪಲ್ಲವಿ ಪ್ರಶಾಂತ್ ವಿನ್ನರ್ ಪಟ್ಟ ಗಳಿಸಿದ್ದಾರೆ. ಎರಡನೇ ಸ್ಥಾನವನ್ನು ಅಮರ್‌ದೀಪ್ ಚೌದ್ರಿ ಪಡೆದಿದ್ದಾರೆ. ನಿನ್ನೆ ಒಳಗೆ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದ ಸಂದರ್ಭದಲ್ಲಿ ಹೊರಗಡೆ ನಿಂತು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದ್ರೆ ವಿನ್ನರ್ ಹಾಗೂ ರನ್ನರ್ ಅನೌನ್ಸ್ ಆಗುತ್ತಿದ್ದರಂತೆ ಗಲಾಟೆ ಶುರುವಾಗಿದೆ. ಈ ಗಲಾಟೆಯ ಫೋಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದ್ದು, ಬಿಗ್ಬಾಸ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ನಡೆಯುತ್ತಿರುವ ತೆಲುಗು ಬಿಗ್ ಬಾಸ್ ಸೀಸನ್ 7ರ ಗ್ರ್ಯಾಂಡ್‌ ಫಿನಾಲೆ ನೋಡಲು ಪಲ್ಲವಿ ಪ್ರಶಾಂತ್ ಹಾಗೂ ಅಮರ್‌ದೀಪ್ ಅಭಿಮಾನಿಗಳು ಆಗಮಿಸಿದ್ದರು. ಈ ಸಂದರ್ಭ ವಿನ್ನರ್ ಘೋಷಣೆ ಆಗುತ್ತಿದ್ದಂತೆಯೇ ಪ್ರಶಾಂತ್ ಫ್ಯಾನ್ಸ್ ಸಂಭ್ರಮ ಹೊರಹಾಕಿದ್ದಾರೆ. ಅದೇ ಸಮಯದಲ್ಲಿ ಅಮರ್‌ದೀಪ್‌ ಅಭಿಮಾನಿಗಳು ಹಾಗೂ ಪ್ರಶಾಂತ್ ಫ್ಯಾನ್ಸ್ ನಡುವೆ ವಾಗ್ವಾದ ಉಂಟಾಗಿ ಅದು ವಿಕೋಪಕ್ಕೆ ತಿರುಗಿತ್ತು. ಎರಡೂ ಫ್ಯಾನ್ಸ್ ಗ್ರೂಪ್ ಪರಸ್ಪರ ಗುದ್ದಾಡಿ, ತಳ್ಳಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಲಾರಂಭಿಸಿದರು. ಅದೇ ವೇಳೆ ಕುಂದಾಪುರ- ಸಿಕಂದರ್‌ಬಾದ್‌ ಕಡೆ ಸಾಗುತ್ತಿದ್ದ ಆರ್‌ಟಿಸಿ ಬಸ್ ಮೇಲೆಯೂ ದಾಳಿ ಮಾಡಿದ ಫ್ಯಾನ್ಸ್ ಅವುಗಳ ಗಾಜು ಪುಡಿಪುಡಿ ಮಾಡಿದ್ದಾರೆ.

ರನ್ನರ್ ಟ್ರೋಫಿ ಹಿಡಿದ ಅಮರ್‌ದೀಪ್‌ ತನ್ನ ಕಾರಿನ ಸನಿಹ ಬರುತ್ತಿದ್ದಂತೆ ಅಭಿಮಾನಿಗಳ ಆಕ್ರೋಶ ಹೆಚ್ಚಾಗಿದ್ದು, ಅಮರ್‌ ನನ್ನು ಹೊರಬರಲು ಒತ್ತಾಯ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆತನಿದ್ದ ಕಾರಿನ ಗಾಜನ್ನ ಪುಡಿ ಪುಡಿ ಮಾಡಲಾಗಿದೆ. ಈ ವೇಳೆ ಕಾರಿನಲ್ಲಿ ಅಮರ್‌ದೀಪ್ ತಾಯಿ ಮತ್ತು ಪತ್ನಿ ಗಾಬರಿಗೊಂಡಿದ್ದು, ತಕ್ಷಣವೇ ಪೊಲೀಸರು ಆಗಮಿಸಿ ಸುರಕ್ಷಿತವಾಗಿ ಮನೆ ತಲುಪುವಂತೆ ಸಹಕರಿಸಿದ್ದಾರೆ. ಈರ್ವರೂ ಸ್ಪರ್ಧಿಗಳ ಅಭಿಮಾನಿಗಳ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಅಟವನ್ನು ಆಟದ ರೀತಿಯಲ್ಲಿ ನೋಡಬೇಕು, ಪರ್ಸನಲ್‌ ಆಗಿ ತೆಗೆದುಕೊಳ್ಳಬಾರದು ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಅಷ್ಟೇ ಅಲ್ಲದೆ ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಶ್ರೀ ಈ ವಿಡಿಯೋ ಹಾಗೂ ಘಟನೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ್ದಾರೆ.

Leave A Reply

Your email address will not be published.