Actor Chetan Ahimsa: ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನ ಪೋಸ್ಟ್‌; ಚೇತನ್‌ ವಿರುದ್ಧ ಎನ್‌ಸಿಆರ್‌!!

police news NCR Filed Against Actor Chetan Ahimsa For Disparaging Post On Nadaprabhu Kempegowda

Actor Chetan Ahimsa: ಸಾಮಾಜಿಕ ಜಾಲತಾಣಗಳಲ್ಲಿ ನಾಡಪ್ರಭು ಕೆಂಪೇಗೌಡರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ ಆರೋಪದ ಮೇಲೆ ನಟ ಚೇತನ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ವಕೀಲ ಆರ್‌.ಎಲ್‌.ಎನ್‌ ಮೂರ್ತಿ ಎಂಬುವವರು ದೂರು ದಾಖಲು ಮಾಡಿದ್ದಾರೆ.

ಚೇತನ್‌ ವಿರುದ್ಧ ಪೊಲೀಸರು ಎನ್‌ಸಿಆರ್‌ (ಗಂಭೀರ ಸ್ವರೂಪದಲ್ಲದ) ದಾಖಲು ಮಾಡಿದ್ದಾರೆ.

ಚೇತನ್‌ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ” ಕೆಂಪೇಗೌಡ-ಊಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದಾಗಿ ಈಗ ಪ್ರಮುಖ ಕರ್ನಾಟಕದ ಐಕಾನ್‌ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ. ಟಿಪ್ಪುಸುಲ್ತಾನ್‌ ಒಬ್ಬ ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ. ಅವರ ಜನ್ಮವು ಮುಸ್ಲಿಮರಾಗಿ ಅವರ ಇಂದಿನ ಮಾನ್ಯತೆಗೆ ಅಡ್ಡಿಯಾಗಿದೆ. ದುರದೃಷ್ಟವಶಾತ್‌, ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ/ಅವಳ ಸಾಮಾಜಿಕ ಕೊಡುಗೆಗಳಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ” ಎಂದು ಪೋಸ್ಟ್‌ ಮಾಡಿದ್ದರು.

ಈ ರೀತಿಯಾಗಿ ನಾಡಪ್ರಭು ಕೆಂಪೇಗೌಡರಿಗೆ ಅಗೌರವ ತೋರಿದ್ದರಿಂದ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ.

ಇದನ್ನು ಓದಿ: Interesting News: ನಗುವುದೋ ಅಳುವುದೋ? ಯಾವುದೂ ಮಾಡೋ ಹಾಗಿಲ್ಲ ಈ ಸುಂದರಿ, ವಿಷ್ಯ ಕೇಳಿದ್ರೆ ಶಾಕ್ ಆಗ್ತೀರ!

Leave A Reply

Your email address will not be published.