Puttur: ಹಿಂ.ಜಾ.ವೇ.ಕಾರ್ಯಕರ್ತ ಪ್ರವೀಶ್ ಬಂಟುಕಲ್ಲು ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಗಡಿಪಾರು ನೋಟೀಸ್ ಆರೋಪ : ದೇವರ ಮೊರೆಹೋದ ಕಾರ್ಯಕರ್ತರು

ಪುತ್ತೂರು : ಹಿಂದು ಜಾಗರಣ ವೇದಿಕೆ ಈಶ್ವರಮಂಗಲದ ಸಕ್ರೀಯ ಕಾರ್ಯಕರ್ತ ಮತ್ತು ಅಯ್ಯಪ್ಪ ವೃತಾದಾರಿ ಪ್ರವೀಶ್ ಬಂಟುಕಲ್ಲು ಅವರ ಮೇಲೆ ಸುಳ್ಳು ಪ್ರಕರಣವನ್ನು ದಾಖಲು ಮಾಡಿ ಗಡಿಪಾರು ನೋಟಿಸ್ ಜಾರಿ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

 

ಈ ಹಿನ್ನೆಲೆಯಲ್ಲಿ ಗಡಿಪಾರು ನೋಟಿಸ್ ಜಾರಿಮಾಡಿದ ಅಧಿಕಾರಿಗಳು ಮತ್ತು ಅದಕ್ಕೆ ಕುಮ್ಮಕ್ಕು ನೀಡಿದ ರಾಜಕೀಯ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯಾಗಲಿ ಎನ್ನುವ ನಿಟ್ಟಿನಲ್ಲಿ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರನ ಸನ್ನಿಧಿಯಲ್ಲಿ ನೂರಾರು ಅಯ್ಯಪ್ಪ ವೃತಾದಾರಿಗಳು,ಗ್ರಾಮದ ಭಕ್ತರು ಮತ್ತು ಸಂಘಟನೆಯ ಕಾರ್ಯಕರ್ತರು ಪ್ರಾತಃ ಕಾಲದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

Leave A Reply

Your email address will not be published.