Udupi: ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ : ಸಾಕು ಪುತ್ರಿ ,ಪ್ರಿಯಕರ ಸಹಿತ ಐವರು ಪೊಲೀಸ್ ವಶಕ್ಕೆ

udupi news leeladhara shetty and wife suicide case adopted daughter and her lover found latest news

Udupi : ಸಾಕು ಮಗಳು ಮನೆಯಿಂದ ನಾಪತ್ತೆಯಾದ ಕಾರಣ ಮನನೊಂದು ನೇಣಿಗೆ ಶರಣಾದ ಸಮಾಜ ಸೇವಕ ಕೆ.ಲೀಲಾಧರ ಶೆಟ್ಟಿ ದಂಪತಿಯ ಸಾವಿಗೆ ಕಾರಣರಾದ ಸಾಕು ಪುತ್ರಿಯನ್ನು ಕಾಪು ಪೊಲೀಸರು ಕುಂಬಳೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

Udupi

ಅಪ್ರಾಪ್ತ ವಯಸ್ಸಿನ ಸಾಕು ಮಗಳು, ಆಕೆಯ ಪ್ರಿಯಕರ ಮತ್ತು ಆತನಿಗೆ ನೆರವಾದ ಇತರ ಮೂವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

ಬಾಲಕಿಯ ಪ್ರಿಯಕರ ಶಿರ್ವ ನಿವಾಸಿ ಗಿರೀಶ್, ಆತನಿಗೆ ನೆರವಾದ ರೂಪೇಶ್, ಅಜೀಜ್ ಮತ್ತು ಜಯಂತ್ ಪೊಲೀಸ್ ಬಂಧಿತರು. ಬಂಧಿತರನ್ನು ತೀವ್ರ ವಿಚಾರಣೆಗೊಳಪಡಿಸಿರುವ ಪೊಲೀಸರು ಎರಡು ಸ್ಕೂಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಗಿರೀಶ್ ವಿರುದ್ದ ಅಪಹರಣ, ಅತ್ಯಾಚಾರ ಮತ್ತು ಪೋಕ್ಸೋ ಆಕ್ಟ್ ನಂತೆ ಪ್ರಕಾರ ದಾಖಲಾಗಿದ್ದು ಉಳಿದ ಮೂವರ ವಿರುದ್ದ ಆರೋಪಿಗೆ ಸಹಕರಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಾಪು ಪೊಲೀಸರು ತಿಳಿಸಿದ್ದಾರೆ.

ಉಡುಪಿ ಎಸ್ಪಿ ಡಾ.‌ ಅರುಣ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ, ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಕಾಪು ಎಸ್ಸೈ ಅಬ್ದುಲ್ ಖಾದರ್, ಕ್ರೈಂ‌ ಎಸ್ಸೈ ಪುರುಷೋತ್ತಮ್ ನೇತೃತ್ವದಲ್ಲಿ ಸಿಬಂದಿಗಳು ಕಾರ್ಯಾಚರಣೆ ನಡೆಸಿದ್ದರು.

ಇದನ್ನು ಓದಿ: Guidelines for New Year Celebrations: ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಸಿದ್ಧ; ಸಾರ್ವಜನಿಕರೇ ನೀವೇನು ಮಾಡಬಹುದು? ಮಾಡಬಾರದು? ಇಲ್ಲಿದೆ ಕಂಪ್ಲೀಟ್‌ ಮಾಹಿತಿ!!!

Leave A Reply

Your email address will not be published.