Ram Mandir: ಅಡ್ವಾಣಿ, ಜೋಶಿ ಬಳಿ ರಾಮ ಮಂದಿರ ಉದ್ಘಾಟನೆಗೆ ಬರಬೇಡಿ ಎಂದ ರಾಮ ಮಂದಿರ ಟ್ರಸ್ಟ್‌!!!

LK Advani and MM Joshi requested not to come to consecration Ram temple trust latest news

Ayodhya: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ದಿನ ಇನ್ನೇನು ಬಹಳ ಹತ್ತಿರದಲ್ಲಿದೆ. ಈ ಉದ್ಘಾಟನಾ ಸಮಾರಂಭಕ್ಕೆ ಹಾಜರಾಗದಂತೆ ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್‌ ಜೋಶಿ ಅವರಿಗೆ ಮನವಿ ಮಾಡಿದ್ದಾರೆಂದು ವರದಿಯಾಗಿದೆ.

ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಹಾಗೂ ಮುರಳಿಮನೋಹರ್‌ ಜೋಷಿ ಅವರು “ಪ್ರಾಣ ಪ್ರತಿಷ್ಠಾ” ಸಮಾರಂಭಕ್ಕೆ ಗೈರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಇದನ್ನು ಓದಿ: Silver and Platinum: ಬೆಳ್ಳಿ ಮತ್ತು ಪ್ಲಾಟಿನಂ ಎರಡರ ನಡುವಿನ ವ್ಯತ್ಯಾಸವೇನು? ಗುರುತಿಸುವ ರೀತಿ ಇಲ್ಲಿದೆ!!!

ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರು ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ. ವಯೋಸಹಜ ಕಾರಣಗಳಿಂದಾಗಿ ಮುರಳಿ ಮನೋಹತ್‌ ಜೋಶಿ ಮತ್ತು ಲಾಲ್‌ಕೃಷ್ಣ ಅಡ್ವಾಣಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಇಬ್ಬರೂ ಹಿರಿಯರಾಗಿರುವುದರಿಂದ ಅವರ ವಯಸ್ಸನ್ನು ಪರಿಗಣಿಸಿ ಬರದಂತೆ ಮನವಿ ಮಾಡಲಾಗಿದೆ. ಅದಕ್ಕೆ ಅವರಿಬ್ಬರು ಕೂಡಾ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

Leave A Reply

Your email address will not be published.