Mangaluru: ಮಹೇಶ್‌ ಟ್ರಾವೆಲ್ಸ್‌ ಬಸ್ಸು ಚಾಲಕ ಆತ್ಮಹತ್ಯೆ; ಕಾರಣ ನಿಗೂಢ!!

Mangaluru: ಸೋಮೇಶ್ವರ ಕಡಲ ತೀರದಲ್ಲಿ ಇಂದು ಬೆಳಗ್ಗೆ ಮಹೇಶ್‌ ಟ್ರಾವೆಲ್ಸ್‌ ಬಸ್‌ ಚಾಲಕನ ಮೃತದೇಹವೊಂದು ದೊರಕಿದೆ. ರುದ್ರಪಾದೆಯಿಂದ ಜಿಗಿದು ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಜಗದೀಶ್‌ ಶೆಟ್ಟಿ (38) ಮೃತ ವ್ಯಕ್ತಿ. ಮಂಗಳೂರು-ತಲಪಾಡಿಯ ನಡುವೆ ಓಡಾಟ ನಡೆಸುತ್ತಿದ್ದ ಖಾಸಗಿ ಬಸ್‌ ರೂಟ್‌ ನಂ.43 ರ ಮಹೇಶ್‌ ಟ್ರಾವೆಲ್ಸ್‌ನಲ್ಲಿ ಚಾಲಕರಾಗಿದ್ದರು. ಇವರು ನಿನ್ನೆ ರಾತ್ರಿ ಮನೆಗೆ ತೆರಳದೆ ನಾಪತ್ತೆಯಾಗಿದ್ದರು ಎಂದು ವರದಿಯಾಗಿದೆ. ಇಂದು ಬೆಳಗ್ಗೆ ಇವರ ಮೃತದೇಹ ಸೋಮೇಶ್ವರ ಕಡಲಲ್ಲಿ ತೇಲುತ್ತಿದ್ದು, ಸ್ಥಳೀಯ ಮೀನುಗಾರರು ಕಂಡು, ಎಳೆದು ದಡಕ್ಕೆ ಹಾಕಿದ್ದಾರೆ.

ರುದ್ರಪಾದೆಯಲ್ಲಿ ಜಗದೀಶ್‌ ಅವರ ಚಪ್ಪಲ್‌, ಮೊಬೈಲ್‌, ಬೈಕ್‌ ಕೀ ಗೊಂಚಲು ದೊರಕಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಮಹೇಶ್‌ ಟ್ರಾವೆಲ್ಸ್‌ ಬಸ್ಸು ಮಾಲಕ ಪ್ರಕಾಶ್‌ ಶೇಖ ಅವರು ಕೂಡಾ ಆತ್ಮಹತ್ಯೆ ಮಾಡಿರುವ ಘಟನೆ ನಡೆದಿತ್ತು. ಜಗದೀಶ್‌ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಇದನ್ನು ಓದಿ: Food Tips: ಈ ಆಹಾರಗಳನ್ನು ತಿಂದ ನಂತರ ಯಾವುದೇ ಕಾರಣಕ್ಕೂ ನೀರು ಕುಡಿಯಲೇಬಾರಾದು, ತಿಳಿಯಲೇಬೇಕಾದ ವಿಚಾರವಿದು!

Leave A Reply

Your email address will not be published.