Suicide case: 2 ನಿಮಿಷ ಮತಾಡ್ತೀನಿ ಅಂತ ಫೋನ್ ಮಾಡಿದ್ದ ಪತಿ, ಪತ್ನಿಯ ಧ್ವನಿ ಕೇಳಿದ ಕೂಡ್ಲೆ ಸೂಸೈಡ್!

Suicide case husband committed suicide after hearing his wife's voice

ಪತ್ನಿಯ ಜೊತೆ ಜಗಳವಾಡಿ ಮನನೊಂದ ಗಂಡನೊಬ್ಬ ಆತನ ಹೆಂಡತಿಗೆ ಕರೆ ಮಾಡಿ, ಆತ್ಮಹತ್ಯೆಗೆ ಶರಣಾದ ಘಟನೆಯೊಂದು ನಡೆದಿದೆ. ಪತಿಯು ಸಾಯುವ ಮುನ್ನ ಫೋನಿನಲ್ಲಿ 2 ನಿಮಿಷ ಪತ್ನಿಯ ಧ್ವನಿ ಕೇಳಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆಯು ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಮಹಾರಾಷ್ಟ್ರದ ಡೊಂಬಿವಿಲಿ ನಿವಾಸಿಯಾಗಿದ್ದ ಸುಧಾಕರ್ ಯಾದವ್ ಹಾಗೂ ಆತನ ಹೆಂಡತಿ ಸಂಜನಾ ಯಾದವ್ ನಡುವೆ ಸಣ್ಣ ವಿಷಯಕ್ಕೆ ದೊಡ್ಡದಾಗಿ ಜಗಳ ನಡೆದಿತ್ತು. ಇದರಿಂದ ಮನನೊಂದ ಸಂಜನಾ ಡಿಸೆಂಬರ್ 19ರಂದು ಗಂಡನ ಮನೆ ತೊರೆದು ತನ್ನ ಸಹೋದರಿಯ ಗೃಹದಲ್ಲಿ ವಾಸವಿದ್ದಳು.

ಈ ಘಟನೆ ನಡೆದ ಮರುದಿನ, ಡಿಸೆಂಬರ್ 20ರಂದು ಬೆಳಗ್ಗೆ ಸುಮಾರು 10 ಗಂಟೆಗೆ ಸುಧಾಕರ್ ಸಂಜನಾಗೆ ಫೋನ್ ಮಾಡಿ ನನಗೆ ನಿನ್ನ ಜೊತೆ ಮಾತಾಡಬೇಕು, ಎರಡು ನಿಮಿಷ ನಿನ್ನ ಧ್ವನಿ ಕೇಳ್ಬೇಕು ಅನಿಸ್ತಿದೆ ಎಂದು ಹೇಳಿದ್ದಾನೆ. ಈ ವೇಳೆ ಕುರ್ಲಾಗೆ ಕೆಲಸದ ನಿಮಿತ್ತ ತೆರಳುತ್ತಿದ್ದ ಸಂಜನಾಳ ಜೊತೆ ಸುಧಾಕರ್ 2 ನಿಮಿಷ ಮಾತನಾಡಿದ್ದಾನೆ. ಆ ಬಳಿಕ ಆತ ಫೋನ್ ಕಾಲ್ ಕಟ್ ಮಾಡಿದ್ದ. ನಂತರ ತನ್ನ ಪತ್ನಿಗೆ ವಾಟ್ಸಪ್‌ನಲ್ಲಿ ತಾನು ಆತ್ಮಹತ್ಯೆಗೆ ಸಿದ್ಧನಾಗಿ ನಿಂತಿರುವ ಫೋಟೋವನ್ನು ಕಳಿಸಿದ್ದಾನೆ. ಫೋಟೋ ನೋಡಿ ಗಾಬರಿಗೊಂಡ ಸಂಜನಾ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಹಾಗೆಯೇ ಗಂಡನ ಮನೆಯ ಪಕ್ಕದ ಮನೆಯಲ್ಲಿ ಇದ್ದವರಿಗೆ ಕರೆ ಮಾಡಿ ಮನೆಯನ್ನೊಮ್ಮೆ ಪರಿಶೀಲಿಸುವಂತೆ ಹೇಳಿದ್ದಾಳೆ. ನೆರೆಮನೆಯವರು ಬಂದು ಮನೆ ಬಾಗಿಲು ಬಡಿದರೂ ಕೂಡ ಆತ ಡೋರ್ ಓಪನ್ ಮಾಡಲಿಲ್ಲ. ನಂತರ ಅವರು ಬಾಗಿಲು ಒಡೆದು ನೋಡಿದ ಸಂದರ್ಭದಲ್ಲಿ ಸುಧಾಕರ್ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆಯು ಡೊಂಬಿವಿಲಿಯ ವಿಷ್ಣುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆತ್ಮಹತ್ಯೆಯ ನಿಖರ ಕಾರಣ ಪತ್ತೆ ಮಾಡಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave A Reply

Your email address will not be published.