Cleaning tips: ಏನೇ ಮಾಡಿದ್ರೂ ಕನ್ನಡಿ ಮೇಲಿನ ಕಲೆ ಹೋಗ್ತಿಲ್ವ? ಹೀಗೆ ಮಾಡಿದ್ರೆ ಮಿರರ್ ಫಳಫಳ ಹೊಳೆಯುತ್ತೆ!

Cleaning tips: ನಾವು ಸಾಮಾನ್ಯವಾಗಿ ಆಗಾಗ ಮನೆಯ ಪೀಠೋಪಕರಣಗಳು,ಸ್ಕ್ರೀನ್ಗಳು, ಟೈಲ್ಸ್ ಹೀಗೆ ಇತ್ಯಾದಿ ವಸ್ತುಗಳನ್ನು ಸ್ವಚ್ಛಗೊಳಿಸುತ್ತಲೇ ಇರುತ್ತೇವೆ. ಆದರೆ ಮನೆಯ ಮೂಲೆಯಲ್ಲಿ ಬಿದ್ದಿರುವ ಕನ್ನಡಿ (Mirror) ಹಾಗೂ ಕಿಟಕಿ ಗಾಜುಗಳನ್ನು ಸ್ವಚ್ಚಗೊಳಿಸಲು ಮರೆತು ಬಿಡುತ್ತೇವೆ. ಹಲವು ಬಾರಿ ನಾವು ಎಷ್ಟೇ ಪ್ರಯತ್ನ ಪಟ್ಟು ಸ್ವಚ್ಛಗೊಳಿಸಿದರೂ ಕನ್ನಡಿಯ ಮೇಲಿನ ಕಲೆಗಳು ಹೋಗುವುದೇ ಇಲ್ಲ.ಇದರಿಂದ ಕನ್ನಡಿಯಲ್ಲಿ ಮುಖ ಸ್ಪಷ್ಟವಾಗಿ ಕಾಣುವುದಿಲ್ಲ. ಹಾಗಾಗಿ ನಿಮ್ಮ ಮನೆಯಲ್ಲಿರುವ ಹಳೆಯ ಕೊಳಕಾಗಿರುವ ಕನ್ನಡಿಯನ್ನು ಅಥವಾ ಕಿಟಕಿ ಗಾಜುಗಳನ್ನು ಹೇಗೆ ಸುಲಭವಾಗಿ ಸ್ವಚ್ಛಗೊಳಿಸುವುದು ಎಂಬುದನ್ನು ಇಲ್ಲಿ ತಿಳಿಸಲಿದ್ದೇವೆ.

 

ಕೆಲವರು ಮಾರುಕಟ್ಟೆಯಲ್ಲಿ ಸಿಗುವಂತಹ ಮಿರರ್ ಕ್ಲೀನರ್ ಗಳನ್‌ನು ಕನ್ನಡಿ ಸ್ವಚ್ಛಗೊಳಿಸಲು ಉಪಯೋಗಿಸುತ್ತಾರೆ. ಆದರೆ ಇದು ತುಂಬಾನೆ ಕಾಸ್ಟ್ಲಿ ಆಗಿರುತ್ತದೆ. ಹಾಗಾಗಿ ಕನ್ನಡಿಯನ್ನು ಸ್ವಚ್ಛವಾಗಿಡಲು ಅಗ್ಗವಾಗಿ ದೊರಕುವ ಹಾಗೂ ಉತ್ತಮ ಕ್ಲೀನರ್ (Cleaner) ಯಾವುದು ಎಂಬುವುದರ ಬಗ್ಗೆಗಿನ ಕೆಲವು ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ.

 

1.ಟಾಲ್ಕಮ್ ಪೌಡರ್ (Talcum Powder) : ಟಾಲ್ಕಮ್ ಪೌಡರ್ ಉಪಯೋಗಿಸಿ ನೀವು ಕನ್ನಡಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಬಹುದು. ಇದರಿಂದ ಕನ್ನಡಿಯಲ್ಲಿ ಕಲೆ ಉಳಿಯುವುದಿಲ್ಲ. ಕನ್ನಡಿಯ ಮೇಲೆ ಟಾಲ್ಕಮ್ ಪೌಡರ್ ನ್ನು ಹಾಕಿ ಸ್ವಲ್ಪ ಹೊತ್ತು ಬಿಡಿ. ಬಳಿಕ ಅದನ್ನು ಮುಟ್ಟದೇ ಡಸ್ಟರ್ನಿಂದ ಅಥವಾ ಮೃದು ಬಟ್ಟೆಯಿಂದ ಸ್ವಚ್ಛಗೊಳಿಸಿ.

 

2.ನ್ಯೂಸ್ ಪೇಪರ್ (News Paper): ಕನ್ನಡಿಯನ್ನು ಅಥವಾ ಗಾಜನ್ನು ಸ್ವಚ್ಛಗೊಳಿಸಲು ನೀವು ಬಟ್ಟೆಯ ಬದಲಿಗೆ ನ್ಯೂಸ್ ಪೇಪರ್ ಬಳಸಬಹುದು. ಇದರಿಂದ ಕನ್ನಡಿ ಕ್ಲೀನ್ ಆಗುವ ಜೊತೆಗೆ ಗಾಜಿನ ಮೇಲೆ ಸಂಗ್ರಹವಾದ ತೇವಾಂಶವನ್ನು ತೆಗೆಯಲು ಸುಲಭವಾಗುತ್ತದೆ.

 

3.ಉಪ್ಪು (Salt): ಕನ್ನಡಿ ಹೊಳೆಯುವಂತೆ ಮಾಡಬೇಕೆಂದರೆ ಉಪ್ಪನ್ನು ಒಂದು ಬಾಟಲಿ ನೀರಿಗೆ ಹಾಕಿ. ನಂತರ ಈ ಮಿಶ್ರಣವನ್ನು ಕನ್ನಡಿಗೆ ಸ್ಪ್ರೇ ಮಾಡಿ. ಹೀಗೆ ಸ್ವಚ್ಛಗೊಳಿಸಿದರೆ, ಮೀರರ್ ಶುಭ್ರವಾಗಿ ಲಕ-ಲಕ ಎಂದು ಹೊಳೆಯುವುದರಲ್ಲಿ ಸಂಶಯವಿಲ್ಲ.

 

4.ನಿಂಬೆ ರಸ (lemon) : ನಿಂಬೆ ರಸವು ಶುಚಿತ್ವದ ಗುಣವನ್ನು ಹೊಂದಿದೆ.‌ ಹಾಗಾಗಿ ನಿಂಬೆರಸವನ್ನು ಸ್ವಲ್ಪ ನೀರಿನಲ್ಲಿ ಮಿಶ್ರಣ ಮಾಡಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ನಂತರ ಇದನ್ನು ಕನ್ನಡಿಯ ಮೇಲೆ ಸ್ಪ್ರೇ ಮಾಡಿ. ಬಳಿಕ ಫೈಬರ್ ಟವೆಲ್ ಮೂಲಕ ಒರೆಸಿ. ಆಗ ಕನ್ನಡಿಯ ಮೇಲಿನ ಕಲೆಗಳು ಸಂಪೂರ್ಣ ಮಾಯವಾಗುತ್ತದೆ.

 

5.ಬಿಳಿ ವಿನೆಗರ್ (White vinegar): ಕನ್ನಡಿ ತುಂಬಾ ಕೊಳಕಾಗಿದ್ದರೆ, ಬೆಚ್ಚಗಿನ ನೀರಿಗೆ ಒಂದು ಟೀ ಚಮಚ ಬಿಳಿ ವಿನೆಗರ್ ಅನ್ನು ಸೇರಿಸಿ, ಬಾಟಲಿಯಲ್ಲಿ ಮಿಶ್ರಣ ಮಾಡಿ.‌ ನಂತರ ಇದನ್ನು ಗಾಜಿನ ಮೇಲೆ ಸಿಂಪಡಿಸಿ. ಬಳಿಕ ಕಾಗದದಿಂದ ಕನ್ನಡಿಯನ್ನು ಸ್ವಚ್ಛಗೊಳಿಸಿ. ಹೀಗೆ ಮಾಡಿದರೆ ನಿಮ್ಮ ಕನ್ನಡಿ ಕ್ಲೀನ್ ಮಾಡುವ ಸಂದರ್ಭದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ‌.

Leave A Reply

Your email address will not be published.