Crime news: ಕೃಷ್ಣ ರಾಜ ಸಾಗರ ಹಿನ್ನೀರಿನಲ್ಲಿ ಇಬ್ಬರ ಶವ ಪತ್ತೆ! ಕೊಲೆ ಮಾಡಿ ನದಿಗೆಸೆದಿರೋ ಶಂಕೆ!

ಜೋಡಿ ಕೊಲೆ ಮಾಡಿ, ಶವಗಳನ್ನು ಚೀಲದಲ್ಲಿ ತುಂಬಿ ಕಾವೇರಿ ನದಿಗೆ ಎಸೆದು ಹೋಗಿದ್ದು, ಇಬ್ಬರ ಮೃತದೇಹಗಳು ಮೈಸೂರು ಜಿಲ್ಲೆಯ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲೆಪೆಟ್ಲು ಗ್ರಾಮದ ಸಮೀಪದ ಕೆ‌ಆರ್.ಎಸ್ ಹಿನ್ನೀರಿನಲ್ಲಿ ಪತ್ತೆಯಾಗಿದೆ. ತಾಲೂಕಿನ ಮೂಲೆಪೆಟ್ಲು ಬಳಿ ಸಾಗರಕಟ್ಟೆ ಹಿನ್ನೀರಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ ಸ್ಥಿತಿಯಲ್ಲಿ ಎರಡು ಶವಗಳು ಪತ್ತೆಯಾಗಿದೆ. ಸುಮಾರು 25 ರಿಂದ 30 ವರ್ಷ ವಯಸ್ಸಿರಬಹುದೆಂದು ಅಂದಾಜಿಸಲಾದ ಯುವಕರ ಶವಗಳು ಬೇರೆಡೆ ಹತ್ಯೆಗೈದು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಸಾಗರಕಟ್ಟೆ ಹಿನ್ನೀರಿನಲ್ಲಿ ಎಸೆದಿರುವ ಅನುಮಾನ ವ್ಯಕ್ತವಾಗಿದೆ.

 

ಓರ್ವನ ಕೈ ಮೇಲೆ ನಾಗರಾಜನ್ VR POSTER 4B LEGEND ಎಂದು ಅಚ್ಚೆ ಹಾಕಿರುವುದು ಕಂಡು ಬಂದಿದ್ದು, ಇದೇ ರೀತಿ ಬೆಳಗ್ಗೆ ಅದೇ ಸ್ಥಳದಲ್ಲಿ ಪತ್ತೆಯಾಗಿದ್ದ ಮತ್ತೊರ್ವನ ಮೃತದೇಹದ ಎಡ ಕೈಯಲ್ಲಿ ಸೂಪರ್ ಮ್ಯಾನ್ , ಅಮ್ಮ ಎಸ್, ಉಪೇಂದ್ರ, VR46 the doctor Legend ಹಾಗೂ ಬಲಕೈಯಲ್ಲಿ ಸಿಂಹದ ಚಿತ್ರ ಹಾಗೂ ಶಿಲುಬೆ ಚಿತ್ರ ಮತ್ತು ಹೃದಯದ ಒಳಗೆ AM ಎಂದು ಹಚ್ಚೆ ಹಾಕಲಾಗಿತ್ತು.

 

ಈ ಕುರಿತು ಸಾರ್ವಜನಿಕರು ನೀಡಿದ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪಟ್ಟಣದ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂತೋಷ್ , ಪಿಎಸ್ ಐ ಗಳಾದ ಧನರಾಜು, ನಂಜಪ್ಪ ಸಿಬ್ಬಂದಿಗಳಾದ ಜವರೇಶ್, ಮಂಜು, ಧನಂಜಯ, ದೇವರಾಜು ತಂಡ ತಡರಾತ್ರಿ ಒಬ್ಬನ ಶವ ಮೇಲೆಕ್ಕೆತ್ತಿ ತಪಾಸಣೆ ನಡೆಸಿದರು.

 

ಬೆಳ್ಳಂಬೆಳಗ್ಗೆ ಅದೇ ಸ್ಥಳದಲ್ಲಿ ಮತ್ತೊರ್ವನ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ಹಾಗೂ ಹೆಚ್ಚುವರಿ ಎಸ್ಪಿ ನಂದಿನಿ ಮತ್ತು ಡಿವೈಎಸ್ಪಿ ಕರೀಂರಾವತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮೃತರ ಮಾಹಿತಿ ಕಲೆ ಹಾಕಲು ಮುಂದಾಗಿದ್ದು, ಈರ್ವರನ್ನು ಬೇರೆ ಕಡೆ ಕೊಂದು ಬಳಿಕ ಚೀಲದಲ್ಲಿ ಕಟ್ಟಿ ಕಾವೇರಿ ನದಿಗೆ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಮೃತನ ಶವವನ್ನು ಮೈಸೂರಿನ ಕೆ.ಆರ್.ಆಸ್ವತ್ರೆಯ ಹಳೇಶವಗಾರಕ್ಕೆ ಸಾಗಿಸಲಾಗಿದ್ದು, ವಾರಸುದಾರರು ಇದ್ದಲ್ಲಿ ಕೆ.ಆರ್. ನಗರ ಪೊಲೀಸರನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ.

 

ಹಿನ್ನೀರಿನಲ್ಲಿ ಬೆಳಗ್ಗೆ ಪತ್ತೆಯಾದ ಮತ್ತೊರ್ವನ ಶವವನ್ನು ಬೆರಳಚ್ಚು ತಜ್ಞರು, ಎಫ್.ಎಸ್.ಐ.ಎಲ್. ತಂಡ, ಶ್ವಾನದಳ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಮೃತರ ವಾರಸ್ಸುದಾರರು ಪತ್ತೆಯಾದರೇ ಸುಲಭವಾಗಿ ಕೊಲೆಗಡುಕರನ್ನು ಕಂಡು ಹಿಡಿಯಲಾಗವುದು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಪಿ.ಪಿ.ಸಂತೋಷ್ ತಿಳಿಸಿದರು.

Leave A Reply

Your email address will not be published.