Mandya: ಹಾಲು ಉತ್ಪಾದಕರಿಗೆ ಬಿಗ್ ಶಾಕ್! ಲೀಟರ್ ಹಾಲಿನ ಬೆಲೆ ಇಳಿಸಿದ ಮನ್ಮುಲ್

Mandya: ಈಗಾಗಲೇ ರಾಜ್ಯದ ರೈತರು ಮುಂಗಾರು ಮತ್ತು ಹಿಂಗಾರು ಮಳೆ ಇಲ್ಲದೆ ಪರದಾಡುತ್ತಿದ್ದಾರೆ. ಒಂದು ಕಡೆ ಬರಗಾಲವಾದರೆ ಇನ್ನೊಂದೆಡೆ ತಮಿಳನಾಡಿಗೆ ಪ್ರತಿದಿನ ಕಾವೇರಿ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಬೆಳೆಗಳಿಗೆ ಜಲದ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಇದರ ನಡುವೆಯೇ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (Manmul) ನಿರ್ಧಾರ ಅನ್ನದಾತರ ಗಾಯದ ಮೇಲೆ ಬರೆ ಹಾಕಿದಂತಾಗಿದೆ.

 

ಹೌದು, ಇದೀಗ ಹಾಲಿನ ದರ (Milk Price) ಇಳಿಕೆಯಾಗಿ, ಪಶು ಆಹಾರದ ಬೆಲೆ ಏರಿಕೆಯಾಗಿದೆ. ಇದರಿಂದ ಹೈನುಗಾರಿಕೆ ನಂಬಿಕೊಂಡಿರುವ ಮಂಡ್ಯ ರೈತರು ಪ್ರತೀ ಲೀಟರ್ ಹಾಲಿಗೆ 1.50 ರೂ. ಇಳಿಸಿ MANMUL ಆದೇಶ ಹೊರಡಿಸಿದೆ. ಇನ್ನೊಂದೆಡೆ ಪಶು ಆಹಾರದ ಬೆಲೆ ಒಂದು ಚೀಲಕ್ಕೆ 50 ರೂ. ಏರಿಕೆಯಾಗಿದೆ. ಈ ಪರಿಷ್ಕೃತ ದರ ಡಿಸೆಂಬರ್ 1ರಿಂದಲೇ ಜಾರಿಗೆಯಲ್ಲಿತ್ತು. ಈ ಹಿಂದೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ 33.50 ರೂ ನೀಡುತ್ತಿದ್ದ ಮನ್ಮುಲ್ ಇದೀಗ 1.50 ರೂ. ಕಡಿತಗೊಳಿಸಿ 32 ರೂ. ನಿಗದಿ ಮಾಡಿದೆ.

 

ಬರದ ಮಧ್ಯೆಯೂ ಹಾಲಿನ ದರ ಇಳಿಕೆಯಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮನ್ಮುಲ್ ಆಡಳಿತ ಮಂಡಳಿ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ದರ ಹೆಚ್ಚಳ ಮಾಡದೆ ಇದ್ದಲ್ಲಿ, ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.