Jammu and Kashmir: ಮುಸ್ಲಿಂ ಲೀಗ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ, ಈ ಬಗ್ಗೆ ಅಮಿತ್ ಶಾ ಹೇಳಿದ್ದೇನು?

Jammu and Kashmir: ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ ಮಸರತ್ ಆಲಂ ಬಣ (MLJK-MA) ಸಂಘಟನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿ, ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿರುವುದರಿಂದ ಇದೊಂದು ನಿಷೇಧಿತ ಸಂಘಟನೆ (banned) ಎಂದು ಬುಧವಾರದಂದು ಗೃಹ ಸಚಿವಾಲಯವು ಘೋಷಿಸಿದೆ.

 

ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಿಕೆಯ ಕಾಯ್ದೆಯ ಅಡಿಯಲ್ಲಿ MLJK-MA ಮೇಲೆ ನಿಷೇಧ ಹೇರಿ ಘೋಷಣೆ ಮಾಡಿದ ಗೃಹ ಸಚಿವ ಅಮಿತ್ ಶಾ ಅವರು, “ನರೇಂದ್ರ ಮೋದಿ ಸರಕಾರದ ಸಂದೇಶವು ತೀವ್ರ ಮತ್ತು ಸ್ಪಷ್ಟವಾಗಿದೆ. ರಾಷ್ಟ್ರದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ವಿರುದ್ಧವಾಗಿ ವರ್ತಿಸುವ ಯಾರೇ ಆಗಿದ್ದರೂ ಕೂಡ ಪರಿಣಾಮವನ್ನು ಎದುರಿಸಲೇಬೇಕು” ಎಂದು ಗಂಭೀರವಾಗಿ ಹೇಳಿದರು.

 

ಯುಎಪಿಎ ಅಡಿಯಲ್ಲಿ MLJK-MA ‘ಕಾನೂನುಬಾಹಿರ ಸಂಘ’ ಎಂದು ಘೋಷಿಸಲಾಗಿದ್ದು, ಈ ಸಂಘಟನೆ ಹಾಗೂ ಅದರ ಸದಸ್ಯರು ಜಮ್ಮು ಮತ್ತು ಕಾಶ್ಮೀರದಲ್ಲಿ (Jammu & Kashmira) ಪ್ರತ್ಯೇಕತಾವಾದಿ ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಾ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸಲು ಜನರಿಗೆ ಪ್ರಚೋದನೆ ನೀಡುತ್ತಿದ್ದಾರೆ” ಎಂದು ಶಾ (Amit shah) ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Leave A Reply

Your email address will not be published.