Rahul Gandhi: ಬಜರಂಗ್‌ ಪೂನಿಯಾ ಜತೆ ಕುಸ್ತಿಯಾಡಿದ ರಾಹುಲ್‌ ಗಾಂಧಿ! ಕೊನೆಗೆ ಗೆದ್ದಿದ್ಯಾರು?

Rahul Gandhi:

ಭಾರತೀಯ ಕುಸ್ತಿ ಫೆಡರೇಷನ್‌ (WFI) ಮಾಜಿ ಅಧ್ಯಕ್ಷ‌ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕೇಳಿ ಬಂದ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದಂತೆ ಸಾಕ್ಷಿ ಮಲಿಕ್‌, ಬಜರಂಗ್‌ ಪೂನಿಯಾ ಸೇರಿ ಹಲವರು ಪ್ರಶಸ್ತಿ ಹಿಂತಿರುಗಿಸಿದ್ದರು.‌ಈ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹರಿಯಾಣದಲ್ಲಿ ಬಜರಂಗ್‌ ಪೂನಿಯಾ ಹಾಗೂ ಇನ್ನಿತರ ಕುಸ್ತಿಪಟ್ಟುಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರು ಬಜರಂಗ್ ಪೂರ್ಣಿಮಾ ಜೊತೆ ಕುಸ್ತಿ ಆಡಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸ್ವತಃ ರಾಹುಲ್ ಗಾಂಧಿಯವರೇ ಹಂಚಿಕೊಂಡಿದ್ದಾರೆ.

WFI ವಿವಾದಕ್ಕೆ ಸಂಬಂಧ ಪಟ್ಟಂತೆ ಬಜರಂಗ್‌ ಪೂನಿಯಾ ತಮಗೆ ದೊರೆತ ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸುತ್ತೇನೆಂದು ಘೋಷಣೆ ಮಾಡಿದ್ದಾರೆ. ಹಾಗೆಯೇ ವಿನೇಶ್‌ ಫೋಗಟ್‌ ಕೂಡ ಅರ್ಜುನ ಪ್ರಶಸ್ತಿ ಹಾಗೂ ಖೇಲ್ ರತ್ನ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಘೋಷಿಸಿದ್ದಾರೆ. ದೇಶದಾದ್ಯಂತ ಸುದ್ದಿಯಾಗುತ್ತಿರುವ ಬೆನ್ನಲ್ಲೇ, ರಾಹುಲ್‌ ಗಾಂಧಿ ಹರಿಯಾಣದ ಜಜ್ಜರ್‌ ಜಿಲ್ಲೆಯ ವೀರೇಂದ್ರ ಆರ್ಯ ಅಖಾಡಕ್ಕೆ ಭೇಟಿ ನೀಡಿ ಕುಸ್ತಿಪಟುಗಳೊಂದಿಗೆ ಮುಕ್ತವಾಗಿ ಚರ್ಚಿಸಿದರು. ಹಾಗೂ ಭಜರಂಗ್ ಪೂನಿಯಾ ಜೊತೆ ಕುಸ್ತಿ ಆಡಿದರು.

ಇದರ ಕುರಿತು ಬಜರಂಗ್‌ ಪೂನಿಯಾ ಪ್ರತಿಕ್ರಿಯಿಸಿದ್ದು, “ರಾಹುಲ್‌ ಗಾಂಧಿಯವರು ವೀರೇಂದ್ರ ಆರ್ಯ ಅಖಾಡಕ್ಕೆ ಬಂದು, ಕುಸ್ತಿಪಟುಗಳ ಬಳಿ ಚರ್ಚೆ ನಡೆಸಿದರು. ಕುಸ್ತಿಯ ಬಗೆಗಿನ ಮಾಹಿತಿಯನ್ನು ಪಡೆದು, ಕೆಲಸ ವ್ಯಾಯಾಮ ಹಾಗೂ ಕುಸ್ತಿ ಆಡುತ್ತಾ ನಮ್ಮ ಜೊತೆ ಸಮಯ ಕಳೆದರು. ಅಲ್ಲದೆ, ಕುಸ್ತಿಪಟುವಿನ ದಿನನಿತ್ಯದ ಚಟುವಟಿಕೆ ಹಾಗೂ ಪರಿಶ್ರಮದ ಬಗ್ಗೆ ತಿಳಿದುಕೊಂಡರು” ಎಂದು ಮಾಹಿತಿ ನೀಡಿದರು. ಇದರ ಜೊತೆಗೆ ಕುಸ್ತಿ ಆಡುವ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ, ಕುಸ್ತಿಪಟುಗಳ ಪರಿಶ್ರಮ, ಅವರ ತ್ಯಾಗ ಏನು , ಅವರು ಹೇಗೆ ದೇಶಕ್ಕೆ ಪದಕ ಗೆಲ್ಲುತ್ತಾರೆ ಎಂಬುದರ ಕುರಿತು ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿದ್ದಾರೆ.

Leave A Reply

Your email address will not be published.