Ramanagara: ವ್ಯಕ್ತಿಯನ್ನು ಸರಪಳಿಯಲ್ಲಿ ಬಂಧಿಸಿ ಜೀತಕ್ಕಿಟ್ಟ ಮಾಲೀಕ, ಕಾರ್ಮಿಕನ ರಕ್ಷಣೆಗೆ ಮುಂದಾದ ಪೊಲೀಸರು

ರಾಮನಗರದ ಮೆಹಬೂಬ್ ನಗರದ ಸಿಲ್ಕ್ ಫ್ಯಾಕ್ಟರಿಯ ಮಾಲೀಕನೊಬ್ಬ ಕಾರ್ಮಿಕನ ಕಾಲಿಗೆ ಸರಪಳಿ ಹಾಕಿ ಜೀತಕ್ಕೆ ನೇಮಿಸಿಕೊಂಡ ಅಮಾನವೀಯ ಘಟನೆಯೊಂದು ನಡೆದಿದೆ. ಮುಂಗಡವಾಗಿ ಹಣ ಪಡೆದಿದ್ದ ಕಾರಣಕ್ಕಾಗಿ ಇಂತಹ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.

ಕಾರ್ಖಾನೆಯಲ್ಲಿ ತನ್ನ ಕಾಲಿಗೆ ಸರಪಳಿ ಹಾಕಿಸಿಕೊಂಡು ಜೀತಕ್ಕೆ ಸಿಲುಕಿದ್ದ ಕಾರ್ಮಿಕನನ್ನು ವಸೀಂ (24) ಎಂದು ಗುರುತಿಸಲಾಗಿದ್ದು, ಆತ ಕಾರ್ಖಾನೆಯ ಮಾಲೀಕನಿಂದ ಮುಂಗಡವಾಗಿ 1.50 ಲಕ್ಷ ರೂ. ಸಾಲವನ್ನು ತೆಗೆದುಕೊಂಡಿದ್ದ. ಇದಾದ ನಂತರ ಒಂದು ತಿಂಗಳು ಅನಿವಾರ್ಯ ಕಾರಣಗಳಿಂದಾಗಿ ಆತ ಕೆಲಸಕ್ಕೆ ರಜೆ ಹಾಕಿದ್ದ. ಈ ಕಾರಣದಿಂದಾಗಿ ಕೋಪಗೊಂಡ ಮಾಲೀಕ ಇದೇ ಕಾರಣಕ್ಕೆ ಆತನನ್ನು ತನ್ನ ವಶದಲ್ಲಿಟ್ಟು ಜೀತದಾಳಿನಂತೆ ಕೆಲಸ ಮಾಡಿಸುತ್ತಿದ್ದ.

ಒಂಬತ್ತು ದಿನಗಳಿಂದ ಕಾರ್ಮಿಕನ ಕಾಲಿಗೆ ಸರಪಳಿ ಹಾಕಲಾಗಿದ್ದು, ಆತನಿಂದ ಹೀನಾಯವಾಗಿ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು. ಇದರ ಮಾಹಿತಿ ತಿಳಿದ ರಾಮನಗರ ಟೌನ್ ಪೊಲೀಸರು ಸ್ಥಳಕ್ಕೆ ತೆರಳಿ ಕಾರ್ಮಿಕ ವಸೀಮ್ ನನ್ನು ರಕ್ಷಿಸಿದ್ದಾರೆ. ವಸೀಂ ತಿಂಗಳ ಹಿಂದೆಯಷ್ಟೇ ಕಾರ್ಖಾನೆಗೆ ಕೆಲಸಕ್ಕೆ ಸೇರಿಸಿಕೊಂಡಿದ್ದ. ಈ ಸಂಬಂಧ ಕಾರ್ಖಾನೆಯ ಮಾಲೀಕ ಸಯ್ಯದ್ ಇಸಾಮ್ ಮತ್ತು ಮೇಲ್ವಿಚಾರಕ ಸಯ್ಯದ್ ಅಮ್ಜದ್ ವಿರುದ್ಧ ಪ್ರಕರಣ ದಾಖಲಾಗಿದೆ.

Leave A Reply

Your email address will not be published.