Actor Vishal: ಯುವತಿ ಜತೆ ಸುತ್ತಾಡುತ್ತಿದ್ದ ವಿಶಾಲ್, ಮುಸುಕು ಹಾಕ್ಕೊಂಡು ಎಸ್ಕೇಪ್ ಆದ ನಟ!

ನಟ ವಿಶಾಲ್ ವಿಚಾರಕ್ಕಾಗಿ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಪರ್ಸನಲ್ ವಿಚಾರಗಳು ಕೂಡ ಎಷ್ಟೋ ಬಾರಿ ಟ್ರೋಲ್ ಗಳಿಗೆ ಒಳಗಾಗಿದ್ದು ಇದೆ. ವಿಶಾಲ್ ಇದೀಗ ಪುನಃ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ನದಾ ವಿಶಾಲ್ ವರಲಕ್ಷ್ಮಿ ಶರತ್ ಕುಮಾರ್, ಲಕ್ಷ್ಮಿ ಮೆನನ್ ಡೇಟಿಂಗ್ ಎಂಬ ವಿಷಯಕ್ಕೂ ಚರ್ಚೆಯಲ್ಲಿದ್ದರು.

ಅಷ್ಟೇ ಅಲ್ಲದೇ ನಟಿ ಅಭಿನಯ ಜೊತೆ ಮದುವೆಯಾಗುತ್ತಾರೆ ಎಂಬ ಮಾತು ಕೂಡ ಅಲ್ಲಲ್ಲಿ ಕೇಳಿ ಬರುತ್ತಿತ್ತು. ಆದರೆ ಈಗ ಅವರು ನ್ಯೂಯಾರ್ಕ್‌ನಲ್ಲಿ ಅಪರಿಚಿತ ಹುಡುಗಿ ಜತೆ ತಿರುಗಾಡುತ್ತಿದ್ದಾರೆ. ಇದನ್ನು ಗಮನಿಸಿದ ವ್ಯಕ್ತಿ ನಟನ ಬಲಿ ನೀವು ವಿಶಾಲ್ ಅಲ್ವಾ? ಎಂದು ಕೇಳುತ್ತಿದ್ದಂತೆ ಮುಖ ಮುಚ್ಚಿಕೊಂಡು ಹೋಗುವಂತಹ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ.

ಈ ವಿಡಿಯೋಗೆ ಕಾಮೆಂಟಿಕರು ಊಹಾಪೋಹಗಳ ಮಳೆಯನ್ನೇ ಸುರಿಸಿದ್ದಾರೆ. ಕೆಲವರು ಇದು ವಿಶಾಲ್‌ ರವರ ಮುಂದಿನ ಚಿತ್ರದ ಪ್ರಚಾರ ಎಂದರೆ, ಇನ್ನೂ ಕೆಲವರು ಇದು ಸೇಫ್ ವಿಡಿಯೋ ಎಂದಿದ್ದಾರೆ. ಸಾಮಾನ್ಯವಾಗಿ ಎಲ್ಲಾ ವಿಷಯಕ್ಕೂ ಬೇಗ ಸ್ಪಷ್ಟೀಕರಣ ನೀಡುವಂತಹ ವಿಶಾಲ್ ಈ ವಿಷಯದ ಕುರಿತು ಯಾವುದೇ ಪ್ರತ್ಯುತ್ತರ ನೀಡಿಲ್ಲ. ವೈರಲ್ ಆದ ಈ ವಿಡಿಯೊದಲ್ಲಿ, ವಿಶಾಲ್ ಮರೂನ್ ಹೂಡಿ ಮತ್ತು ಜೀನ್ಸ್ ಬಟ್ಟೆ ಧರಿಸಿದ್ದಾರೆ.

ಸೆಪ್ಟೆಂಬರ್ 15ರಂದು ಬಿಡುಗಡೆಯಾದ ನಟ ವಿಶಾಲ್ ಅಭಿನಯದ ಮಾರ್ಕ್ ಆಂಟನಿ ಉತ್ತಮ ಪ್ರದರ್ಶನಗೊಂಡು ಜನ ಮನ್ನಣೆ ಗಳಿಸಿತ್ತು. ಮಾರ್ಕ್ ಆಂಟೋನಿ ಸಿನಿಮಾದಲ್ಲಿ ಎಸ್ ಜೆ ಸೂರ್ಯ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಅಧಿಕ್ ರವಿಚಂದ್ರನ್ ನಿರ್ದೇಶಿಸಿದ್ದು, ಇದರಲ್ಲಿ ಸುನೀಲ್, ಸೆಲ್ವರಾಘವನ್ ಮತ್ತು ರಿತು ಕೂಡ ನಟಿಸಿದ್ದಾರೆ. ವಿಶಾಲ್‌ ಶೀಘ್ರದಲ್ಲೇ ಹರಿ ಡೈರೆಕ್ಷನ್ ನ ‘ರತ್ನಂ’ ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

https://x.com/rameshlaus/status/1739523045403037980?t=MkWQHjUPFYAPGfvfu3rIzg&s=08

Leave A Reply

Your email address will not be published.