Actress Meena: ಎರಡನೇ ಮದುವೆ ಬಗ್ಗೆ ಬಾಯ್ಬಿಟ್ಟ ಬಹುಭಾಷಾ ನಟಿ! ಸಿನಿಮಾ ತಾರೆ ಮೀನಾ ಹೇಳಿದ್ದೇನು?

ದಕ್ಷಿಣ ಭಾರತದ ನಾಲ್ಕು ಭಾಷೆಗಳ ನಟನೆಯಲ್ಲಿ ಬ್ಯುಸಿಯಾಗಿದ್ದಂತಹ ಬಹುಭಾಷಾ ತಾರೆ ಮೀನಾ (Actress Meena) ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಜನಪ್ರಿಯರಾದವರು. ಬಿಡುವಿಲ್ಲದೆ ಸಿನಿಮಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಇವರು ಕನ್ನಡದ ಅತ್ಯುತ್ತಮ ಚಿತ್ರಗಳಾದ ಪುಟ್ನಂಜ, ಸ್ವಾತಿಮುತ್ತು ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳ ಮೇಲೆ ಹೆಚ್ಚಿನ ಒಲವು ತೋರಿದ ಇವರು ಹಿಂದಿ ಭಾಷೆಯ ಒಂದೇ ಚಿತ್ರದಲ್ಲಿ ನಟಿಸಿದ್ದರು.

 

ಇತ್ತೀಚೆಗೆ ಯೂಟ್ಯೂಬ್ (Youtube) ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಮೀನಾ, ಹಲವು ಸಂಗತಿಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಪತಿ ವಿದ್ಯಾಸಾಗರ್ (Vidyasagar) ಹಾಗೂ ಆಕೆಯ ಎರಡನೇ ಮದುವೆಯ ಕುರಿತಾಗಿ ಅನೇಕ ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ಹಿಂದೆ ನಟಿ ಮೀನಾ ಹಾಗೂ ಪತಿ ವಿದ್ಯಾಸಾಗರ ಮಧ್ಯೆ ಬಿರುಕು ಮೂಡಿದೆ, ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಬಗ್ಗೆ ಇಬ್ಬರಿಗೂ ಅವರ ಪೋಷಕರು ಕರೆ ಮಾಡಿ ಪ್ರಶ್ನಿಸಿದ ಬಗ್ಗೆ ಈ ಸಂದರ್ಶನದಲ್ಲಿ ನೆನಪಿಸಿಕೊಂಡರು. “ನಿಜವಾಗಿಯೂ ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಬಿರುಕು ಮೂಡಿಲ್ಲ ನಾವಿಬ್ಬರು ಅನ್ಯೋನ್ಯದಿಂದ ಇದ್ದೆವು” ಎನ್ನುತ್ತಾ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

 

ಹಾಗೆಯೇ, ತನ್ನ ನೋವನ್ನು ಹಂಚಿಕೊಂಡ ನಟಿ “ವಿದ್ಯಾಸಾಗರ್‌ಗೆ ಶ್ವಾಸಕೋಶದ ಕಸಿ ಮಾಡಿಸಬೇಕಿತ್ತು. ಅದಕ್ಕೆ ಸಂಬಂಧಿಸಿದ ಸಿಧ್ಧತೆಗಳು ನಡೆಯುತ್ತಿದ್ದವು. ವಿದೇಶಕ್ಕೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದೆವು. ಆದರೆ, ನಾನು ಅಲ್ಲಿಗೆ ಹೋದರೂ ಕೆಲವು ಸಮಯ ಕಾಯಲೇಬೇಕಿತ್ತು. ಅಷ್ಟರಲ್ಲೇ ಊಹಿಸಿಕೊಳ್ಳುವುದಕ್ಕೆ ಅಸಾಧ್ಯವಾದದ್ದು ನಡೆದೇ ಹೋಯ್ತು. ಈಗಷ್ಟೇ ನಾನು ಆ ನೋವಿನಿಂದ ಹೊರಬರುತ್ತಿದ್ದೇನೆ” ಎನ್ನುತ್ತಾ ತನ್ನ ಗಂಡನ ಸಾವಿನ ಕುರಿತಾಗಿ ಬೇಸರ ವ್ಯಕ್ತಪಡಿಸಿದರು.

 

ಇತ್ತೀಚಿಗೆ ಮೀನಾ ಪತಿ ವಿದ್ಯಾಸಾಗರ್ ನಿಧನದ ಬಳಿಕ ಆಕೆಯ ಎರಡನೇ ಮದುವೆಯ (2nd marriage) ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದೆ. ಕೆಲವರ ಹೆಸರು ಈಕೆಯ ಜೊತೆ ತಳುಕು ಹಾಕಿಕೊಂಡಿದ್ದು, ಈ ವದಂತಿಯ ಬಗ್ಗೆ ಮೀನಾ ಸಂದರ್ಶನದಲ್ಲಿ ತನ್ನ ಬೇಸರ ಹೊರಹಾಕಿದ್ದಾರೆ. ಈ ಕುರಿತು ಮಾತನಾಡುತ್ತಾ ನಟಿ, “ವಿದ್ಯಾಸಾಗರ್ ನಿಧನರಾದ ಕೆಲವೇ ತಿಂಗಳ ಬಳಿಕ ನಾನು 2ನೇ ಮದುವೆಯಾಗುತ್ತೇನೆ ಎಂದು ಪ್ರಚಾರವಾಗಿತ್ತು. ನಾನು ಹೀರೋ ಧನುಷ್’ರನ್ನು ಮದುವೆಯಾಗುತ್ತೇನೆ ಎಂದು ಸುದ್ದಿ ಹಬ್ಬಿಸಿದ್ದರು. ರಾಜಕಾರಣಿ, ಹಿರಿಯ ಸ್ಟಾರ್ ನಟ, ಉದ್ಯಮಿಗಳ ಜೊತೆ ನನ್ನ ಮದುವೆಯ ಕುರಿತಾಗಿ ಬರೆದಿದ್ದಾರೆ. ಪ್ರೀತಿಯಲ್ಲಿ ಬಿದ್ದಿದ್ದೇನೆ ಅಂತ ಕೂಡ ವದಂತಿ ಹಬ್ಬಿಸಿದ್ದರು. ಆದರೆ ಅದು ಸತ್ಯವೋ ಸುಳ್ಳೋ ಅನ್ನೋದನ್ನು ಅರಿತುಕೊಳ್ಳದೆ ಅನ್ನುವ ಬಗ್ಗೆ ವಿಮರ್ಶಿಸದೆ ಈ ರೀತಿ ಅಪಪ್ರಚಾರ ಮಾಡುವುದು ಸರಿಯಲ್ಲ. ಇದರಿಂದಾಗಿ ನನ್ನ ಕುಟುಂಬಕ್ಕೆ ಬಹಳಷ್ಟು ತೊಂದರೆ ಉಂಟಾಗಿದೆ” ಎಂದು ತನ್ನ ದುಗುಡವನ್ನು ಹಂಚಿಕೊಂಡರು.

ಇದನ್ನು ಓದಿ: Ranbir Kapoor: ಬಾಲಿವುಡ್ ನಟನಿಗೆ ಕಂಟಕವಾದ ವೈರಲ್ ವಿಡಿಯೋ! ರಣಬೀರ್ ಕಪೂರ್ ವಿರುದ್ಧ ಕೇಸ್ ದಾಖಲು!

ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಮೀನಾ, ದಕ್ಷಿಣ ಭಾರತದ ಎಲ್ಲಾ ಭಾಷೆಗಳನ್ನು ನಾಯಕಿಯಾಗಿ ಮಿಂಚಿದವರು. ತಮಿಳು ತೆಲುಗು ಸ್ಟಾರ್ ನಟರ ಜೊತೆ ಅಭಿನಯಿಸಿ ಜನಮನ್ನಣೆ ಗಳಿಸಿದವರು. ಆದರೆ, ತನ್ನ ಮದುವೆಯ ನಂತರ ನಟಿಸುವುದನ್ನು ಕಡಿಮೆ ಮಾಡಿದ್ದ ಇವರು, ತನ್ನ ಮಗಳ ಜನನದ ಬಳಿಕ ಕೊಂಚ ಗ್ಯಾಪ್ ಕೊಟ್ಟು ಮತ್ತೆ ಸಿನಿಮಾಗಳಲ್ಲಿ ಅಭಿನಯಿಸಲು ಆರಂಭಿಸಿದರು. ಆದರೆ, ಗಂಡನ ನಿಧನದ ಬಳಿಕ ಹಬ್ಬಿದ ವದಂತಿಗಳ ಬಗ್ಗೆ ತನ್ನ ನೋವನ್ನು ಹೊರ ಹಾಕಿದ್ದಾರೆ.

Leave A Reply

Your email address will not be published.