Beauty Tips: ಕಾಂತಿಯುಕ್ತ ಚರ್ಮದ ಜೊತೆಗೆ ಕೆಂಪಾದ ತುಟಿ ನಿಮ್ಮದಾಗಬೇಕಾ? ಹಾಗಾದ್ರೆ ಈ ಮನೆಮದ್ದನ್ನು ಹೀಗೆ ಯೂಸ್ ಮಾಡಿ!

Beauty Tips: ದಾಳಿಂಬೆಯು ಚರ್ಮಕ್ಕೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡುವ ಉತ್ತಮ ಗುಣವನ್ನು ಹೊಂದಿದೆ. ಹಾಗಾಗಿ ದಾಳಿಂಬೆಯನ್ನು ಫೇಸ್ ಮಾಸ್ಕ್ (Face mask) ಮಾಡಿ ಉಪಯೋಗಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ದಾಳಿಂಬೆ ಫೇಸ್ ಪ್ಯಾಕ್ ಸ್ಕಿನ್ ಟೋನ್ ಸುಧಾರಿಸುವಂತೆ ಮಾಡಿ ಚರ್ಮದ ಕಾಂತಿ ಹೆಚ್ಚಿಸುತ್ತದೆ.

ದಾಳಿಂಬೆಯ ರಸ (Pomegranate Juice) ದಲ್ಲಿರುವ ತೇವಗೊಳಿಸುವ ಶಕ್ತಿಯು ನಿಮ್ಮ ಚರ್ಮವನ್ನು ಬೆಳಗಿನಿಂದ ಆಳವಾಗಿ ಶುದ್ಧೀಕರಿಸುವ ಮೂಲಕ ಕಾಂತಿಯನ್ನು ಹೆಚ್ಚಿಸುತ್ತದೆ. ದಾಳಿಂಬೆಯಿಂದ ಮಾಡಿದಂತಹ ಫೇಸ್ ಮಾಸ್ಕ್ ಮುಖದ ಚರ್ಮವನ್ನು (skin care) ತಂಪಾಗಿಡುತ್ತದೆ ಹಾಗೂ ದಾಳಿಂಬೆ ಬೀಜಗಳಲ್ಲಿರುವ ಪೋಷಕಾಂಶಯುಕ್ತ ದ್ರವವು ಹೊರ ಚರ್ಮವನ್ನು ಉತ್ತಮಗೊಳಿಸಲು ಸಹಾಯಕವಾಗಿದೆ. ಹಾಗಾದ್ರೆ, ದಾಳಿಂಬೆಯ ಫೇಸ್ ಮಾಸ್ಕ್ ಅನ್ನು ತಯಾರಿಸುವುದು ಹೇಗೆ? ಮತ್ತು ಇದನ್ನು ಅನ್ವಯಿಸುವ ರೀತಿ ಯಾವುದು ಎಂಬ ಉಪಯುಕ್ತ ಮಾಹಿತಿ (Useful information) ಇಲ್ಲಿದೆ ನೋಡಿ.

ಪ್ರಪ್ರಥಮವಾಗಿ ಮುಖವನ್ನು ದಾಳಿಂಬೆ ರಸದ ಮೂಲಕ ಕ್ಲೀನ್ ಮಾಡಬೇಕಾಗುತ್ತದೆ. ಅದಕ್ಕಾಗಿ ದಾಳಿಂಬೆ ರಸಕ್ಕೆ ನಿಂಬೆರಸದ ಕೆಲವು ಹನಿಗಳನ್ನು ಸೇರಿಸಬೇಕು. ನಂತರ ಮಿಶ್ರಣ ಮಾಡಿ, ಇದನ್ನು ಮುಖಕ್ಕೆ ಹಚ್ಚಬೇಕು. ಆದ ನಂತರ 10 ರಿಂದ 15 ನಿಮಿಷಗಳ ಕಾಲ ಹಾಗೆ ಬಿಡಬೇಕು. ಇದು ನಿಮ್ಮ ಮುಖದಲ್ಲಿರುವ ತಪ್ಪಾದ ಕಲೆಗಳನ್ನು ತೆಗೆದುಹಾಕುವಲ್ಲಿ ಸಹಾಯಕವಾಗಿದೆ. ಇದು ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಇದನ್ನು ಮುಖಕ್ಕೆ ಹಚ್ಚಿದ ಹತ್ತು ನಿಮಿಷಗಳ ಬಳಿಕ ನಿಮ್ಮ ಮುಖವನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ.

ನಂತರ ದಾಳಿಂಬೆ ಹಣ್ಣಿನ ಬೀಜಗಳನ್ನು ಚೆನ್ನಾಗಿ ಬಿಡಿಸಬೇಕು. ನಂತರ ಈ ಬೀಜಗಳನ್ನು ಮಿಕ್ಸಿಯಲ್ಲಿ ರುಬ್ಬಿ ಈ ರಸವನ್ನು ಕಡಲೆ ಹಿಟ್ಟು ಅಲೋವೆರಾ ಜೆಲ್ ಹಾಗೂ ಹಾಲಿನ ಜೊತೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಈಗ ಫೇಸ್ ಮಾಸ್ಕ್ ರೆಡಿಯಾಗಿರುತ್ತದೆ. ಬಳಿಕ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು 20 ರಿಂದ 25 ನಿಮಿಷಗಳ ವರೆಗೆ ಕಾಯಬೇಕು. ಈ ರೀತಿ ದಾಳಿಂಬೆ ಫೇಸ್ ಮಾಸ್ಕನ್ನು (Face moisturizer) ಅಳವಡಿಸಿಕೊಂಡ ನಂತರ ಮುಖವನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಬಹುದು.

ದಾಳಿಂಬೆ ರಸವನ್ನು ತುಟಿಗೆ ಹಚ್ಚುವುದರಿಂದ ಇದು ನ್ಯಾಚುರಲ್ ಆಗಿ ತುಟಿಗಳನ್ನು ಕೆಂಪಾಗಿಸುತ್ತದೆ. ಈ ಫೇಸ್ ಮಾಸ್ಕನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ಕೆನ್ನೆ ಹಾಗೂ ತುಟಿಗಳು ಮೃದುವಾಗಿ ಇರುತ್ತದೆ. ಫೇಸ್ ಮಾಸ್ಕ್ ಹಚ್ಚಿದ ನಂತರ ಚೆನ್ನಾಗಿ ಸ್ಕ್ರಬ್ ಮಾಡಿ. ಹೀಗೆ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ.

Leave A Reply

Your email address will not be published.