Intresting News: ಟ್ರಕ್ ಓಡಿಸುತ್ತಲೇ ವ್ಲಾಗ್ ಮಾಡುವ ಚಾಲಕ! ಚಾನೆಲ್’ನಲ್ಲಿ 1.21 ಮಿಲಿಯನ್ ಚಂದಾದಾರರು! ಈತನ ಕಂಟೆಂಟ್ಸ್ ಹೇಗಿರುತ್ತೆ ಗೊತ್ತಾ?

ಯೂಟ್ಯೂಬ್ ಮಾಧ್ಯಮದಲ್ಲಿ ಕಂಟೆಂಟ್ ಕ್ರಿಯೇಟ್ ಮಾಡಿ ಹಣ ಗಳಿಸುವವರು ಸಾವಿರಾರು ಮಂದಿ ಇದ್ದಾರೆ. ಆದರೆ ವಿಡಿಯೋಗಳಿಂದ ಆದಾಯ ಗಳಿಸುವುದು ಸುಲಭದ ಮಾತಲ್ಲ. ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ವ್ಲಾಗ್ (YouTube Vlogs) ಮಾಡುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಕಂಟೆಂಟ್ ಕ್ರಿಯೇಟರ್ಸ್’ಗಳ (Content creators) ಮಧ್ಯೆ ಪೈಪೋಟಿ ಹೆಚ್ಚಾಗಿದೆ.

ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ದಿನನಿತ್ಯದ ಕೆಲಸವನ್ನು ಮಾಡುತ್ತಲೇ ವ್ಲಾಗ್ ಮಾಡಿ ಜನಪ್ರಿಯರಾಗಿದ್ದಾರೆ. ರಾಜೇಶ್ (Rajesh) ಎಂಬ ಯೂಟ್ಯೂಬ್ ವ್ಲಾಗರ್ ಟ್ರಕ್ ಓಡಿಸಿಕೊಂಡು ದಿನನಿತ್ಯದ ವಿಡಿಯೋಗಳನ್ನು ಮಾಡುತ್ತಾರೆ. ಇದೀಗ ತನ್ನದೇ ಚಾನಲ್’ನಲ್ಲಿ ಒಂದು ಮಿಲಿಯನ್’ಗೂ ಹೆಚ್ಚು ಸಬ್’ಸ್ಕ್ರೈಬರ್’ಗಳನ್ನು (Subscibers) ಪಡೆದಿರುವ ಇವರು ವ್ಲಾಗ್ ನಿಂದಲೇ ಉತ್ತಮ ಆದಾಯ ಪಡೆಯುತ್ತಾರೆ. ಟ್ರಕ್ ಚಾಲಕರಾಗಿರುವ ಇವರು ಡ್ರೈವರ್ (Truck driver) ಗಿಂತ ಹೆಚ್ಚಾಗಿ ಯೌಟ್ಯೂಬ್ ವ್ಲಾಗರ್ ಆಗಿಯೇ (Famous) ಹೆಸರುವಾಸಿಯಾಗಿದ್ದಾರೆ.

ತಾನು ಹೊಟ್ಟೆಪಾಡಿಗಾಗಿ ದುಡಿಯುತ್ತಿರುವ ಟ್ರಕ್ ಚಾಲನೆಯ ನಿಮಿತ್ತ ವಾಹನವನ್ನು ಡ್ರೈವ್ ಮಾಡುತ್ತಾ ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣಿಸುವ ರಾಜೇಶ್, ದಾರಿಯಲ್ಲಿ ಹೋಗುವ ಸಂದರ್ಭದಲ್ಲಿ ಆ ಊರಿನಲ್ಲಿರುವ ರುಚಿರುಚಿಯಾದ ಆಹಾರ ಹಾಗೂ ಪ್ರಕೃತಿಯ ಸೊಬಗಿನ (Nature vlogs) ಬಗ್ಗೆ ವ್ಲಾಗ್ ಮಾಡುತ್ತಾರೆ. ಇಷ್ಟೇ ಅಲ್ಲದೆ ಟ್ರಕ್ ನಲ್ಲಿ ತಮ್ಮ ದಿನಚರಿ (Daily vlogs) ಯಾವ ರೀತಿ ಇರುತ್ತದೆ. ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಹೇಗಿರುತ್ತದೆ. ಈ ರೀತಿ ಹೆಚ್ಚಿನ ವೀಡಿಯೋಸ್’ಗಳನ್ನು ರಾಜೇಶ್’ರವರು ಅಪ್ಲೋಡ್ ಮಾಡುತ್ತಾರೆ. ಇದರ ಜೊತೆಗೆ ವಿಶೇಷವಾದ ಅಡುಗೆ, ವಿಶೇಷವಾದ ಆಹಾರ ಹೇಗೆ ಮಾಡಲಾಗುತ್ತದೆ ಮುಂತಾದ ಫುಡ್ ವ್ಲಾಗ್ (Food vlogs) ವಿಡಿಯೋಗಳು ಅತಿ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.

ʼಡೈಲಿ ವ್ಲಾಗ್ಸ್‌ ಆಫ್‌ ಇಂಡಿಯನ್‌ ಟ್ರಕ್‌ ಡ್ರೈವರ್‌ʼ (Daily vlogs of Indian truck driver) ಎಂಬ ಹೆಸರಿನಲ್ಲಿ ಜನಪ್ರಿಯವಾಗಿರುವ ಇವರ ಯೂಟ್ಯೂಬ್ ಚಾನೆಲ್ 1.21 ಮಿಲಿಯನ್‌ ಗೂ ಅಧಿಕ ಚಂದಾದಾರರನ್ನು ಹೊಂದಿದೆ. ಹಾಗೂ ಇವರ ಇನ್’ಸ್ಟಾಗ್ರಾಮ್ (Instagram) ಅಕೌಂಟ್ 4.12 ಲಕ್ಷ ಹಿಂಬಾಲಕರನ್ನು (Followers) ಪಡೆದಿದೆ.

Leave A Reply

Your email address will not be published.