Honey trap: ಬಾಸ್ ಕ್ವಾಟ್ಲೆ ಸಹಿಸಲಾಗದ ಉದ್ಯೋಗಿಗಳು, ರಿಲೀಸ್ ಮಾಡೇಬಿಟ್ರು ಆತನ ಬೆತ್ತಲೆ ಫೋಟೋಸ್!

Honey trap case: ಜನರ ಪ್ರಕಾರ ಬಾಸ್ ಎಂದರೆ ಕಾರಣವಿಲ್ಲದೆ ಬೈಯ್ಯುವವನು, ಎಷ್ಟೇ ಕೆಲಸ ಮಾಡಿದರೂ ಅದರಲ್ಲಿ ತಪ್ಪು ಹುಡುಕುವವನು, ತನ್ನ ಬಾಯಿಯ ಚಪಲಕ್ಕಾದರೂ ಉದ್ಯೋಗಿಗಳ ಮೇಲೆ ಕ್ಷಣಕ್ಷಣಕ್ಕೂ ರೇಗುವವನು ಎಂಬ ಭಾವನೆ ಇದೆ. ಹೆಚ್ಚಿನ ಬಾಸ್’ಗಳು ಕೂಡ ಇದೇ ರೀತಿಯ ವರ್ತನೆ ತೋರುತ್ತಾರೆ. ಹಾಗಾಗಿ ಬಾಸ್ ಅನ್ನು ಪತ್ನಿಗೆ ಹೋಲಿಸುವವರು ಕೂಡ ಇದ್ದಾರೆ. ಹೀಗೆ ಇಬ್ಬರು ಉದ್ಯೋಗಿಗಳು ಗುಜರಾತ್ ನಲ್ಲಿ ಕ್ವಾಟ್ಲೆ ನೀಡುತ್ತಿದ್ದ ಹಾಗೂ ತನಗೆ ತೋಚಿದ ರೀತಿಯಲ್ಲಿ ವರ್ತಿಸುತ್ತಿದ್ದ ಕಂಪನಿ ಬಾಸ್ (Boss) ನ ಬೆತ್ತಲೆ ಫೋಟೋಗಳನ್ನು ವೈರಲ್ ಮಾಡುವ ಮುಖೇನ ಆತನ ವಿರುದ್ಧ ತಮ್ಮ ರಿವೆಂಜ್ (revenge) ತೀರಿಸಿಕೊಂಡಿರುವ ಘಟನೆಯೊಂದು ನಡೆದಿದೆ.

ಗುಜರಾತಿನ ವಡೋದರದಲ್ಲಿರುವ ಕಂಪನಿಯ ಇಬ್ಬರು ಮಹಿಳಾ ಉದ್ಯೋಗಿಗಳು (employees) ಬಾಸ್ ನ್ನು ಹನಿಟ್ರ್ಯಾಪ್ (honey trap) ಮಾಡುವ ಮೂಲಕ ಆತನ ಮಾನವನ್ನು ಬೀದಿಗೆಳೆದಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಬಾಸ್ ನೀಡುತ್ತಿದ್ದ ಕಿರಿಕಿರಿಯನ್ನು ಸಹಿಸಲಾಗದೆ ಮಹಿಳಾ ಉದ್ಯೋಗಿಯೊಬ್ಬರು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಪ್ರತಿಕ್ಷಣವೂ ಕಾಟ ಕೊಟ್ಟ ಬಾಸಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಯೋಚಿಸಿದ ಆಕೆಯು ತನ್ನ ಸಹೋದ್ಯೋಗಿ ಜೊತೆ ಸೇರಿಕೊಂಡು ಹನಿ ಟ್ರ್ಯಾಪ್ ಮಾಡಿದ್ದಾರೆ. ಬಾಸ್’ನಿಂದಲೇ ಆತನ ಬೆತ್ತಲೆ ಫೋಟೋಗಳನ್ನು ತೆಗೆದುಕೊಂಡು ಅವುಗಳನ್ನು ಆತನ ಪತ್ನಿಗೆ ಸೆಂಡ್ ಮಾಡಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಅಪ್ಲೋಡ್ ಮಾಡಿದ್ದಾರೆ.

ಆಫೀಸ್’ ನಲ್ಲಿ ಕಿರಿಕಿರಿ ಮಾಡುತ್ತಿದ್ದ ತಮ್ಮ ಬಾಸ್’ಗೆ ತಕ್ಕ ಪಾಠ ಕಲಿಸಲು ತೀರ್ಮಾನಿಸಿದ ಈರ್ವರು ಇನ್ಸ್ಟಾಗ್ರಾಮ್ ನಲ್ಲಿ ಹುಡುಗಿಯರ ಹೆಸರಿನಲ್ಲಿ ಎರಡು ಫೇಕ್ (fake id) ಖಾತೆಗಳನ್ನು ಓಪನ್ ಮಾಡಿದ್ದಾರೆ. ಇದಾದ ನಂತರ ಆ ಫೇಕ್ ಅಕೌಂಟ್ ಗಳಿಂದ ಬಾಸ್ ಜೊತೆ ರೋಮ್ಯಾಂಟಿಕ್ ಆಗಿ ಚಾಟ್ ಮಾಡಿದ್ದಾರೆ‌ ಫೇಕ್ ಅಕೌಂಟ್ಗಳು ಎಂಬ ಅರಿವಿಲ್ಲದ ಬಾಸ್ ಹುಡುಗಿಯರನ್ನು ಪಟಾಯಿಸಿದ ಖುಷಿಯಲ್ಲಿ ಯುವತಿಯರು ಕೇಳಿದ ಹಾಗೆ ತನ್ನ ಬೆತ್ತಲೆ ಫೋಟೋಗಳನ್ನು ಸೆಂಡ್ ಮಾಡಿದ್ದಾನೆ. ಈ ಸಂದರ್ಭದಕ್ಕಾಗಿ ಕಾದು ಕುಳಿತಿದ್ದ ಯುವತಿಯರು ಫೊಟೋ ಸಿಗುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಹಾಗೂ ಕಚೇರಿಯ ಎಚ್’ಆರ್’ಗೆ ಸೆಂಡ್ ಮಾಡುವ ಮೂಲಕ ಆತನ ಮರ್ಯಾದೆಯನ್ನು ತೆಗೆದಿದ್ದಾರೆ.

ಕಳೆದ ಮೂರು ತಿಂಗಳಿಂದ ಆ ಉದ್ಯೋಗಿಗಳು ತಮ್ಮ ಬಾಸ್ ಗೆ ಬ್ಲಾಕ್ ಮೇಲ್ ಮಾಡಿದ್ದು, ಆತನ ಹೆಂಡತಿಗೆ ಹಾಗೂ ಸೋಶಿಯಲ್ ಮೀಡಿಯಾಗೆ ಸೆಂಡ್ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು. ಮೊದಮೊದಲು ಮರ್ಯಾದೆಗೆ ಹೆದರಿ ಸುಮ್ಮನೆ ಕುಳಿತಿದ್ದ ಬಾಸ್ ಇವರ ಕಿರುಕುಳ ತಾಳಲಾಗದೆ, ಮನನೊಂದು ಸೈಬರ್ ಕ್ರೈಂ ಗೆ ದೂರು ನೀಡಿದ್ದಾನೆ. ಈ ಕುರಿತು ತನಿಖೆ ಕೈಗೊಂಡ ಪೊಲೀಸರಿಗೆ, ಆ ಫೋಟೋಗಳನ್ನು ಅಪ್ಲೋಡ್ ಮಾಡಿದ್ದು ಆತನ ಉದ್ಯೋಗಿಗಳೇ ಎಂದು ತಿಳಿದುಬಂದಿದೆ. ತಮ್ಮ ಬಾಸ್ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೃತ್ಯ ಎಸಗಿರುವುದಾಗಿ ಯುವತಿಯರು ಬಾಯ್ಬಿಟ್ಟಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

Leave A Reply

Your email address will not be published.