Careless Driver: ರೂಫ್ ಮೇಲೆ ಮಕ್ಕಳನ್ನು ಮಲಗಿಸಿ ಕಾರು ಚಲಾಯಿಸಿದ ವ್ಯಕ್ತಿ! ಚಾಲಕನ ವಿರುದ್ಧ FIR ದಾಖಲು

ವ್ಯಕ್ತಿ ಒಬ್ಬ ಇಬ್ಬರು ಮಕ್ಕಳನ್ನು ಕಾರಿನ ರೂಫ್ ಮೇಲೆ ಮಲಗಿಸಿ ಕಾರು ಚಲಾಯಿಸುತ್ತಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯ ವಿರುದ್ಧ ಬಳಕೆದಾರರು ಆಕ್ರೋಶ ಹೊರಹಾಕಿದ್ದು, ಕಾರು ಚಾಲಕನ ವಿರುದ್ಧ ಗೋವಾದಲ್ಲಿ ಪ್ರಕರಣ ದಾಖಲಾಗಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಕಪ್ಪು ಮಹೀಂದ್ರಾ SVU ವಾಹನವು ಜನಪ್ರಿಯ ಪ್ರವಾಸಿ ಸ್ಥಾನವಾದ ಪರ್ರಾ ಕೊಕೊನೆಟ್ ಟಿ ರಸ್ತೆಯಲ್ಲಿ ಮಕ್ಕಳನ್ನು ರೂಫಿನ (Childres sleeping on roof) ಮೇಲೆ ಮಲಗಿಸಿಕೊಂಡು ಚಲಿಸುತ್ತಿರುವುದನ್ನು ನೋಡಬಹುದು. ಇದರಲ್ಲಿ ಕಾರಿನ ಮೇಲೆ ಮಕ್ಕಳು ನಿದ್ರಿಸುತ್ತಿರುವುದು ಕಂಡುಬರುತ್ತದೆ.

ಒಂದೊಮ್ಮೆ ಯಾವುದಾದರು ಸನ್ನಿವೇಶದಲ್ಲಿ ಏಕಾಏಕಿ ಬ್ರೇಕ್ ಹಾಕಿದಾಗ ಅಥವಾ ಯೂ ಟರ್ನ್ ಮಾಡುವಾಗ ಹೆಚ್ಚು ಕಮ್ಮಿ ಆದರೆ ಏನು ಗತಿ ಎಂದು ಜನರು ಕಾಮೆಂಟ್ ಗಳ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ. ಈ ರೀತಿ ವಾಹನ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಕಾರನ್ನು ನೋಡಿ ಗಾಬರಿಗೊಂಡ ವ್ಯಕ್ತಿಯೋರ್ವ ಚಾಲಕನನ್ನು ತಡೆದು ನಿಲ್ಲಿಸಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಡ್ರೈವರ್ (Car driver) ಅಸಡ್ಡೆಯ ಉತ್ತರವನ್ನು ನೀಡಿದ್ದಾರೆ.

ಮಕ್ಕಳ ರಕ್ಷಣೆ ಮಾಡಬೇಕಾದ ಪೋಷಕರೇ ಈ ರೀತಿ ಬೇಜವಾಬ್ದಾರಿಯ ವರ್ತನೆ ತೋರಿದರೆ ಹೇಗೆ ಎನ್ನುವ ಮೂಲಕ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ ಹಾಗೂ ಇದಕ್ಕಾಗಿ ಕಠಿಣ ಶಿಕ್ಷೆಯನ್ನು ನೀಡಲೇಬೇಕು ಎಂದು ಕೇಳಿದ್ದಾರೆ. ಈ ಸಂಬಂಧ ಗೋವಾ (Goa) ಮಪುಸಾ ತಾನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಡಿಯೋದಲ್ಲಿರುವ ವ್ಯಕ್ತಿಯನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

Leave A Reply

Your email address will not be published.