MS Dhoni: ಆಹಾರಕ್ಕಾಗಿ ಪಾಕಿಸ್ತಾನಕ್ಕೆ ಹೋಗಿ ಎಂದ ಧೋನಿ! ಹೀಗ್ಯಾಕಂದ್ರು MSD?

ಆಹಾರ ಪ್ರಿಯರಾಗಿರುವಂತಹ ಟೀಮ್ ಇಂಡಿಯಾದ ಮಾಜಿ ಲೀಡರ್ ಮಹೇಂದ್ರ ಸಿಂಗ್ ಧೋನಿಯವರು ಅತ್ಯುತ್ತಮ ಆಹಾರ ದೊರೆಯುವಂತಹ ರೆಸ್ಟೋರೆಂಟ್ ಗಳಲ್ಲಿ ಆಗಾಗ ಕಾಣಿಸಿಕೊಳ್ಳುವುದುಂಟು. ಆದರೆ ಈಗ ಎಂಎಸ್ ಧೋನಿ ಪಾಕಿಸ್ತಾನದಲ್ಲಿ ದೊರೆಯುವ ಆಹಾರದ ಮೇಲೂ ಒಲವು ತೋರಿದ್ದು, ಅಲ್ಲಿನ ಫುಡ್ ಪದ್ಧತಿಗೂ ಆಕರ್ಷಿತರಾಗಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ.

ಸಾಮಾಜಿಕ ಜಾಲತಾಣದರಲ್ಲಿ ಧೋನಿ ಅವರು ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ CSK ಟೀಮ್ ಲೀಡರ್, ಉತ್ತಮ ಆಹಾರ ಸವಿಯಲು ಪಾಕಿಸ್ತಾನಕ್ಕೆ ಹೋಗಿ ಎಂಬ ಸಲಹೆ ನೀಡುವುದನ್ನು ನೋಡಬಹುದಾಗಿದೆ.

ಈ ವಿಡಿಯೋದಲ್ಲಿ ತನ್ನನ್ನು ಪ್ರಶ್ನಿಸಿದ ಫ್ಯಾನ್ ಗೆ ಉತ್ತರಿಸಿದ ಕ್ರಿಕೆಟಿಗ ಆಹಾರ ಸವಿಯಲು ಪಾಕಿಸ್ತಾನವನ್ನು ಭೇಟಿ ನೀಡಿ ಎಂದು ಹೇಳಿದ್ದಾರೆ. ಆಗ “ನೀವು ಉತ್ತಮ ಆಹಾರವನ್ನು ಸೂಚಿಸಿದರೂ ಕೂಡ ನಾನು ಅಲ್ಲಿಗೆ ಹೋಗುವವನಲ್ಲ. ನಾನು ಆಹಾರಪ್ರಿಯ. ಆದರೆ ಅಲ್ಲಿಗೆ ಹೋಗಲ್ಲ” ಎಂದು ಅಲ್ಲಿದ್ದ ಫ್ಯಾನ್ ಪ್ರತಿಕ್ರಿಯೆ ನೀಡಿದ್ದಾರೆ.

ಇದೀಗ ಮಹೇಂದ್ರ ಸಿಂಗ್ ಧೋನಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದ್ದು, ಇದರ ಕುರಿತು ಪರ ವಿರೋಧ ಅಭಿಪ್ರಾಯಗಳು ಪ್ರಾರಂಭವಾಗಿದೆ. ಕೆಲವರು ಇದರ ಕುರಿತಾಗಿ ಒಳ್ಳೆಯ ಮಾತುಗಳ ಮೂಲಕ ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಈ ಸಲಹೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿಯವರು ಪಾಕಿಸ್ತಾನದ ಆಹಾರದ ರುಚಿಯನ್ನು ಟೇಸ್ಟ್ ಮಾಡಿಯೇ ಇಂತಹ ಸಲಹೆ ಕೊಟ್ಟಿದ್ದಾರೆ ಎಂದು ಹೇಳಬಹುದಾಗಿದೆ. ಏಕೆಂದರೆ 2006ರಲ್ಲಿ ಇಂಡಿಯಾ ಟೀಮ್ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಧೋನಿ ಕೂಡ ಈ ಟೀಮ್ ನಲ್ಲಿ ಇದ್ದರು. ಅಂದು ಎಂಎಸ್ ಧೋನಿ ವಿಕೆಟ್ ಕೀಪರ್ ಬ್ಯಾಟ್ಸ್’ಮ್ಯಾನ್ ಆಗಿ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ರಾಹುಲ್ ದ್ರಾವಿಡ್ ವಹಿಸಿದ್ದರು. ಈ ಪ್ರವಾಸದ ವೇಳೆ MSD ಪಾಕಿಸ್ತಾನದಲ್ಲಿನ ಸ್ಪೆಷಲ್ ಫುಡ್ ಗಳನ್ನು ಸೇವಿಸಿ, ಇಷ್ಟಪಟ್ಟಿರುತ್ತಾರೆ. ಹಾಗಾಗಿ ಪಾಕ್ ಪಾಕ ಪದ್ದತಿಯ ರುಚಿಯನ್ನು ಸವಿಯಲು ಧೋನಿ ಸಲಹೆ ಕೊಟ್ಟಿರಬಹುದು.

Leave A Reply

Your email address will not be published.