Delhi: ಪೊಲೀಸ್ ವಾಹನದಿಂದ ಹಾರಿ ಗಾಯಗೊಂಡ ಆರೋಪಿ! ಚಿಕಿತ್ಸೆ ಫಲಕಾರಿಯಾಗದೆ ಸಾವು!

ಕಿರುಕುಳದ ಆರೋಪದ ಮೇಲೆ ಬಂಧಿಸಲಾಗಿದ್ದ ಆರೋಪಿಯೊಬ್ಬ ಸಲ್ಲಿಸುತ್ತಿರುವ ಪೊಲೀಸ್ ವಾಹನದಿಂದ ಹಾರಿದ್ದು, ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಈ ಘಟನೆಯು ಈಶಾನ್ಯ ದೆಹಲಿಯ ನ್ಯೂ ಉಸ್ಮಾನ್’ಪುರದಲ್ಲಿ ನಡೆದಿದ್ದು ಆರೋಪಿಯನ್ನು ಪ್ರಮೋದ್ ಎಂದು ಗುರುತಿಸಲಾಗಿದೆ.

 

ಉಸ್ಮಾನ್’ಪುರದಲ್ಲಿ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಪ್ರಮೋದ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆರೋಪಿಯನ್ನು ಬಂಧಿಸಿ, ಪೋಲಿಸ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿರುವ ವೇಳೆ ಕುಡಿದು ಟೈಟ್ ಆಗಿದ್ದಂತಹ ಆತ, ವಾಂತಿ ಬರುತ್ತಿದೆ ಎಂದು ನೆಪ ಹೇಳಿ ಕಿಟಕಿಗೆ ಇಣುಕುವಂತೆ ನಟಿಸಿ, ಅಲ್ಲಿಂದಲೇ ಜಂಪ್ ಮಾಡಿದ್ದಾನೆ.

 

ಚಲಿಸುತ್ತಿರುವ ವಾಹನದಿಂದ ಹಾರಿದ ಕಾರಣ ಆರೋಪಿಗೆ ಗಂಭೀರ ಗಾಯವಾಗಿತ್ತು. ತಕ್ಷಣ ಪೊಲೀಸರು ಗಾಯಾಳು ಆರೋಪಿಯನ್ನು ಆಂಬುಲೆನ್ಸ್ ಮೂಲಕ ಜಿಟಿಬಿ ಆಸ್ಪತ್ರೆಗೆ ಕರೆತಂದರು. ಆದರೆ ಆ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯದ ಕೊರತೆ ಇದ್ದ ಕಾರಣ, ಅಲ್ಲಿ ದಾಖಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಗಾಯಾಳುವನ್ನು ಎಲ್ಎನ್‌ಜೆಪಿ ಆಸ್ಪತ್ರೆಗೆ ಸಾಗಿಸಲಾಯಿತು.

 

ಆದರೆ ಎಲ್ಎನ್‌ಜೆಪಿ ಆಸ್ಪತ್ರೆಯಲ್ಲಿ ಐಸಿಯು ವೆಂಟಿಲೇಟರ್ ಬೆಡ್ಗಳ ಕೊರತೆ ಇದ್ದ ಕಾರಣ ಅಲ್ಲಿಯೂ ಅಡ್ಮಿಟ್ ಮಾಡಲಾಗಲಿಲ್ಲ. ಇದಾದ ಬಳಿಕ ಗಾಯಾಳುವನ್ನು ಆರ್.ಎಂ.ಎಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿಯ ಅಧಿಕಾರಿಗಳು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದರು‌. ಹಾಗಾಗಿ ಗಾಯಾಳು ಆರೋಪಿಯನ್ನು ಕೊನೆಗೆ ಜೆಸಿಪಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು. ಆದರೆ ಅಲ್ಲಿ ಬೆಳಿಗ್ಗೆ 5:45 ಕ್ಕೆ ಗಾಯಾಳು ಆರೋಪಿಯು ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

Leave A Reply

Your email address will not be published.