Viral Video: ಕುದುರೆಯನ್ನೇರಿ ಹೊರಟ ಝೋಮ್ಯಾಟೋ ಡೆಲಿವರಿ ಬಾಯ್! ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಝೋಮ್ಯಾಟೋ ಏಜೆಂಟ್ ಓರ್ವ ಕುದುರೆಯನ್ನೇರಿಕೊಂಡು ಫುಡ್ ಡೆಲಿವರಿಗೆ ಹೊರಟಿರುವ ವಿಡಿಯೋವೊಂದು ವೈರಲ್ ಆಗ್ತಾ ಇದೆ. ಪೆಟ್ರೋಲ್ ಬೆಲೆ ಹೆಚ್ಚಾಗಿದೆ ಎಂದು ಕೊರಗುವ ಡೆಲಿವರಿ ಬಾಯ್ಸ್ ಗಳಿಗೆ ಇದೊಂದು ಒಳ್ಳೆಯ ಐಡಿಯಾ ಎನ್ನಬಹುದು. ಅದರಿಂದ ಟ್ರಾಫಿಕ್ ನ ಸಮಸ್ಯೆಯೂ ಇಲ್ಲ. ಪೆಟ್ರೋಲ್ಗಾಗಿ ಕ್ಯೂ ನಿಲ್ಲುವ ಅವಶ್ಯಕತೆಯೂ ಇರುವುದಿಲ್ಲ. ಸಮಯದ ಜೊತೆ ಹಣದ ಉಳಿತಾಯವು ಆಗುತ್ತೆ ಅನ್ನೋದು ಕಾಮೆಂಟ್ ತಜ್ಞರ ಅಭಿಪ್ರಾಯ.

 

ಕುದುರೆಯನ್ನೇರಿ ಹೊರಟಿರುವ ಝೋಮ್ಯಾಟೋ ಹುಡುಗನ ವಿಡಿಯೋ ಹೈದರಾಬಾದ್ ನಲ್ಲಿ ನಡೆದಿದ್ದು ಎನ್ನಲಾಗಿದೆ. ಈ ವೈರಲ್ ವಿಡಿಯೋ ದಲ್ಲಿ ಕೆಂಪು ಬಣ್ಣದ ಝೋಮ್ಯಾಟೋ ಟಿ-ಶರ್ಟ್ ಹಾಕಿಕೊಂಡು, ಕೆಂಪು ಬ್ಯಾಗಿನ ಜೊತೆ ಕುದುರೆಯ ಮೇಲೆ ಯುವಕ ಸವಾರಿ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಇದರಲ್ಲಿ ಇಂಪಿರಿಯಲ್ ಹೋಟೆಲ್ನ ಪಕ್ಕದಲ್ಲಿರುವ ಚಂಚಲಗುಡಕ್ಕೆ ಡೆಲಿವರಿ ಬಾಯ್ ಸಾಗುತ್ತಿರುವುದು ಕಂಡು ಬರುತ್ತದೆ.

 

ವಿವಾದದಲ್ಲಿರುವ ಹಿಟ್ ಅಂಡ್ ರನ್ ಕಾನೂನನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಟ್ರಕ್ ಚಾಲಕರ ಕಾರಣದಿಂದ ಪೆಟ್ರೋಲ್ ದೊರೆಯುವುದು ಕಷ್ಟಕರವೆನಿಸಿದೆ. ಹಾಗಾಗಿ ಹೈದರಾಬಾದ್ ನಗರದ ಪೆಟ್ರೋಲ್ ಬಂಕ್ಗಳಲ್ಲಿ ಇಂಧನಕ್ಕಾಗಿ ವಾಹನಗಳು ಕ್ಯೂ ನಿಂತಿರುವುದನ್ನು ನೋಡಬಹುದಾಗಿದೆ. ಮೊದಲೇ ಫುಡ್ ಡೆಲಿವರಿ ಆರ್ಡರ್ ಮಾಡಿದವರಿಗೆ ಹಸಿವಿನ ಕಾರಣದಿಂದಾಗಿ ಬೇಗ ಸಿಟ್ಟು ಬರುತ್ತದೆ. ಇದರಿಂದ ಝೋಮ್ಯಾಟೋ ಏಜೆಂಟ್ ಗಳು ತೊಂದರೆ ಅನುಭವಿಸಿದ ಅದೆಷ್ಟೋ ಉದಾಹರಣೆಗಳಿವೆ.

 

ಹಾಗಾಗಿ ಪೆಟ್ರೋಲ್ ಬಂಕ್ ಎದುರು ಕಾಯುವ ಸಮಸ್ಯೆಯನ್ನು ತಪ್ಪಿಸಿ, ಸರಿಯಾದ ಸಮಯದಲ್ಲಿ ಫುಡ್ ಡೆಲಿವರಿ ಮಾಡಲು ಈ ಯುವಕ ಚಾಣಾಕ್ಷತೆಯನ್ನು ತೋರಿದ್ದಾನೆ. ಈತ ಕುದುರೆಯ ಮೇಲೆ ಸಾಗುತ್ತಿರುವ ಸಂದರ್ಭದಲ್ಲಿ ದಾರಿಹೋಕರು ಕೇಳಿದ ಪ್ರಶ್ನೆಗೆ “ಪೆಟ್ರೋಲ್ ನಹೀ ಮಿಲಾ ಭಾಯ್. ತೀನ್ ಘಂಟೆ ಲೈನ್ ಮೆ ಖಡಾರಹಾ. ಝೋಮಾಟೋ ಸೇ ನಿಕಲ್ ಗಯಾ.. ಪೆಟ್ರೋಲ್ ನಹೀ ಮಿಲಾ. (ಪೆಟ್ರೋಲ್ ಇರಲಿಲ್ಲ. ನಾನು ಮೂರು ಗಂಟೆ ಕಾಲ ಸರದಿಯಲ್ಲಿ ಕಾಯುತ್ತಿದ್ದೆ. ನಾನು ಆರ್ಡರ್ ತೆಗೆದುಕೊಂಡು ಹೋದರೂ ಪೆಟ್ರೋಲ್ ಪಡೆಯಲು ಸಾಧ್ಯವಾಗಲಿಲ್ಲ) ಎಂದು ಉತ್ತರಿಸುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ವಿಡಿಯೋ ಇಲ್ಲಿದೆ ನೋಡಿ…

https://x.com/umasudhir/status/1742354352105460058?t=Oqpd5CselWe6Tt7PO1PdVw&s=08

Leave A Reply

Your email address will not be published.