Poorest Country in the world: ವರ್ಲ್ಡ್‌ ಬ್ಯಾಂಕ್‌ನಿಂದ ವಿಶ್ವದ ಅತ್ಯಂತ ಬಡ ದೇಶ ಘೋಷಣೆ

Poorest Country in the world: ಜಗತ್ತಿನಲ್ಲಿರುವ ಒಟ್ಟು 197 ದೇಶಗಳಲ್ಲಿ ಅಭಿವೃದ್ಧಿ ಹೊಂದದ ಮತ್ತು ಬಡತನದಲ್ಲಿರುವ ಹಲವಾರು ದೇಶಗಳಿವೆ. ಈ ದೇಶಗಳಲ್ಲಿ, ವಿಶ್ವಬ್ಯಾಂಕ್‌ನಿಂದ ವಿಶ್ವದ ಅತ್ಯಂತ ಬಡ ದೇಶ ಎಂದು ಪರಿಗಣಿಸಲ್ಪಟ್ಟ ದೇಶವನ್ನು ಗುರುತಿಸಿದೆ. ಬನ್ನಿ ಹಾಗಾದರೆ ಆ ದೇಶ ಯಾವುದು, ತಿಳಿಯೋಣ.

 

ವಿಶ್ವದ ಅತ್ಯಂತ ಬಡ ದೇಶ ಬುರುಂಡಿ. IMF ಮತ್ತು ವಿಶ್ವ ಬ್ಯಾಂಕ್ ಈ ದೇಶವನ್ನು 2023 ರಲ್ಲಿ ವಿಶ್ವದ ಅತ್ಯಂತ ಬಡ ದೇಶ ಎಂದು ಪರಿಗಣಿಸಿವೆ. ಬುರುಂಡಿಯ ಜನಸಂಖ್ಯೆಯ 85 ಪ್ರತಿಶತದಷ್ಟು ಜನರು ಬಡತನ ರೇಖೆಯ ಕೆಳಗೆ ವಾಸಿಸುತ್ತಿದ್ದಾರೆ. ಇಲ್ಲಿ ಜನರಿಗೆ ದಿನಕ್ಕೆ ಎರಡು ಹೊತ್ತಿನ ಊಟವೂ ಸಿಗುವುದಿಲ್ಲ. ಇಲ್ಲಿನ ಪ್ರತಿ ಮೂವರಲ್ಲಿ ಒಬ್ಬರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ.

 

ಇಲ್ಲಿಯ ಜನರು ಮೂಲಭೂತ ಸೌಕರ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. 12 ಮಿಲಿಯನ್ ಜನಸಂಖ್ಯೆ ಹೊಂದಿರುವ ಈ ದೇಶದ ಜನರ ವಾರ್ಷಿಕ ಆದಾಯ ವರ್ಷಕ್ಕೆ 180 ಡಾಲರ್. ಅಂದರೆ ಇಲ್ಲಿ ಒಬ್ಬ ವ್ಯಕ್ತಿ ವರ್ಷಕ್ಕೆ ಸುಮಾರು 14 ಸಾವಿರ ರೂ. ಈ ಮೊದಲು ಬುರುಂಡಿ ದೇಶ ಹೀಗಿರುತ್ತಿರಲಿಲ್ಲ. ಈ ದೇಶವನ್ನು ಬ್ರಿಟನ್ ಮತ್ತು ಅಮೆರಿಕ ಆಳುತ್ತಿತ್ತು. 1991ರಲ್ಲಿ ಸ್ವತಂತ್ರವಾದ ಈ ದೇಶದಲ್ಲಿ ಒಂದಷ್ಟು ಕಾಲ ಜನ ನೆಮ್ಮದಿಯಿಂದ ಬದುಕುತ್ತಿದ್ದರು. ಅನಂತರ ಈ ದೇಶದಲ್ಲಿ ಜನಾಂಗೀಯ ಸಂಘರ್ಷ ಮತ್ತು ಅಸ್ಥಿರತೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿತು. ಈ ದೇಶದಲ್ಲಿ 9 ವರ್ಷಗಳ ಕಾಲ ಜನಾಂಗೀಯ ಸಂಘರ್ಷವಿತ್ತು, ನಂತರ ರಾಜಕೀಯ ಅಸ್ಥಿರತೆ ಈ ದೇಶದ ಆರ್ಥಿಕತೆಯನ್ನು ಹಾಳುಮಾಡಿತು ಮತ್ತು ಕ್ರಮೇಣ ಈ ದೇಶವು ಬಡತನದ ಉತ್ತುಂಗವನ್ನು ತಲುಪಿತು. ಈಗ ವಿಶ್ವದ ಅತ್ಯಂತ ಬಡ ದೇಶ ಎಂದು ಘೋಷಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Leave A Reply

Your email address will not be published.