Suicide in America: ಅಮೆರಿಕದಲ್ಲಿ ಮತ್ತೊಂದು ಭಾರತೀಯ ಕುಟುಂಬ ಸಾವಿಗೆ ಶರಣು

Suicide in America: ಅಮೆರಿಕಾದಲ್ಲಿ ಇನ್ನೊಂದು ಭಾರತೀಯ ಕುಟುಂಬವೊಂದು ಸಾವಿಗೆ ಶರಣಾಗಿರುವ ಘಟನೆ ನಡೆದಿದೆ. ಮಲೆಯಾಳಿ ಕುಟುಂಬವೊಂದು ಇಬ್ಬರು ಮಕ್ಕಳಿದ್ದು, ನಾಲ್ವರ ಕುಟುಂಬ ತಮ್ಮ ಮನೆಯಲ್ಲಿಯೇ ಸಾವಿಗೀಡಾಗಿದ್ದಾರೆ. ತಂದೆ ತಾಯಿ ಮೊದಲಿಗೆ ತಮ್ಮ ಮಕ್ಕಳನ್ನು ಕೊಂದಿದ್ದು ನಂತರ ತಾವೂ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನಂದ್‌ ಸುಜಿತ್‌ ಹೆನ್ರಿ (42), ಪತ್ನಿ ಆಲಿಸ್‌ ಪ್ರಿಯಾಂಕಾ ಬೆಂಜಿಗರ್‌ (40) ಮತ್ತು ಅವರ ಅವಳಿ ಮಕ್ಕಳಾದ ನೋಹ್‌ ಮತ್ತು ನೀಥಾನ್‌ (4) ಸಾವು ಕಂಡಿದ್ದಾರೆ.

ಸ್ನಾನಗೃಹದಕ್ಕು ದಂಪತಿಯ ಶವಗಳು ಪತ್ತೆಯಾಗಿದ್ದು, ಇಬ್ಬರ ಮೈಮೇಲೆ ಗುಂಡಿನ ಗಾಯಗಳಿದ್ದವು. ಬಾತ್‌ರೂಂನಿಂದ ಲೋಡ್‌ ಮಾಡಲಾದ 9 ಎಂಎಂ ಪಿಸ್ತೂಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಕ್ಕಳಿಗೆ ವಿಷವುಣಿಸಿ ಕೊಂದಿದ್ದಾರೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ. ಮನೆಯಲ್ಲಿ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ. ಮಕ್ಕಳ ಶವ ಬೆಡ್‌ರೂಂ ನಲ್ಲಿ ಪತ್ತೆಯಾಗಿದೆ. ಸಾವಿಗೇನು ಕಾರಣ ಎಂದು ಇನ್ನೂ ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ದಂಪತಿಗಳು ಸ್ಯಾಟ್‌ ಮಾಟಿಯೋದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದು, ಚೆನ್ನಾಗಿಯೇ ಇದ್ದ ಕುಟುಂಬದಲ್ಲಿ ಏನಾಯಿತು ಎಂದು ತಿಳಿದಿಲ್ಲ ಎಂದು ನೆರೆಹೊರೆಯವರು ಹೇಳಿದ್ದಾರೆ.

Leave A Reply

Your email address will not be published.