Shimogga Marriage: ಪ್ರೀತಿ ಮದುವೆ ಹೆಸರಲ್ಲಿ ಗಂಡನಿಗೆ ಮೋಸ ಮಾಡಿ, ಹಣ,ಒಡವೆಯೊಂದಿಗೆ ಪರಾರಿಯಾದ ಮಾಯಗಾತಿ; ಮೋಸಗಾತಿ ವಿರುದ್ಧ ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಅಲೆಯುತ್ತಿರುವ ಯುವಕ

Shimogga: ಇತ್ತೀಚೆಗೆ ಮದುವೆ ಸಂಬಂಧಿತ ವಿಷಯದಲ್ಲಿ ಮೋಸ ಹೋಗುವ ಅನೇಕ ಯುವಕರನ್ನು ನೀವು ಕೇಳಿರಬಹುದು. ಅಂತಹುದೇ ಒಂದು ಘಟನೆ ಇದೀಗ ನಡೆದಿದ್ದು, ಯುವಕ ಇದೀಗ ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ.

 

ಚೇತನ್‌ ಎಂಬಾತ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ತನ್ನ ಮದುವೆ ಕುರಿತು ದೂರು ದಾಖಲು ಮಾಡಿದ್ದಾನೆ. ತಾನು ಪ್ರೀತಿಸಿ ಮದುವೆಯಾಗಿದ್ದ ಯುವತಿ ಇದೀಗ ತನ್ನ ಬಳಿ ಇದ್ದ ಒಡವೆಯನ್ನು ಹೊತ್ತೊಯ್ದಿರುವುದಾಗಿ ದೂರು ದಾಖಲು ಮಾಡಿದ್ದಾನೆ.

 

ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡಿಕೊಂಡಿದ್ದ ಈತನಿಗೆ ಆ ಸಮಯದಲ್ಲಿ ಈ ಯುವತಿಯ ಪರಿಚಯವಾಗಿತ್ತು. ನಂತರ ಪರಿಚಯ ಪ್ರೀತಿಗೆ ತಿರುಗಿ ಮನೆಯವರನ್ನು ಒಪ್ಪಿಸಿ ಯುವಕ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ. ಆ ಸಂದರ್ಭದಲ್ಲೇ ಯುವತಿ ತನ್ನ ವರಸೆ ಬದಲಿಸಿದ್ದಳು. ನಾವು ಊರಿನಲ್ಲಿ ಮನೆ ಕಟ್ಟುತ್ತಿದ್ದು, ಮನೆ ಕಟ್ಟುವರೆಗೆ ತನ್ನ ಅಪ್ಪ ನನ್ನ ಮದುವೆ ಒಪ್ಪುವುದಿಲ್ಲ, ಮನೆ ಕಟ್ಟೋಕೆ ನಿನ್ನ ಬಳಿ ಹಣ ಇದ್ದರೆ ಕೊಡು ಎಂದು ಕೇಳಿದ್ದು, ಆಮೇಲೆ ಬೇಗ ಮದುವೆಯಾಗುವ ಎಂದು ಕೇಳಿದ್ದಳಂತೆ. ಆದರೆ ಚೇತನ್‌ ಬಳಿ ಹಣ ಇಲ್ಲದ ಕಾರಣ ಆಕೆ ಬ್ಯಾಂಕ್‌ವೊಂದರಲ್ಲಿ ಚೇತನ್‌ ಹೆಸರಿನಲ್ಲಿ ಹತ್ತುಲಕ್ಷ ಲೋನ್‌ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

 

ಮನೆ ನಿರ್ಮಾಣ ಆಗುತ್ತಿದ್ದಾಗೆ ಯುವತಿ ಹೊಸ ವರಸೆ ತೆಗೆದಿದ್ದು, ನನ್ನ ಅಪ್ಪ ಮದುವೆಗೆ ಒಪ್ಪುತ್ತಿಲ್ಲ ನೀವೇ ಎಲ್ಲಾ ಮದುವೆ ಖರ್ಚು ಮಾಡಿ ಮದುವೆ ಮಾಡಿ ಎಂದು ಹೇಳಿ ಮದುವೆಗೆ ಒಪ್ಪಿಸಿದ್ದಳು. ಇನ್ನು ಪ್ರೀತಿಸಿದ ಯುವತಿಯ ಕೈ ಹಿಡಿಯಲಯ ಯುವಕ ಅಲ್ಲಿ ಇಲ್ಲಿ ಸಾಲ ಮಾಡಿ ಮದುವೆ ಮಾಡಿಕೊಂಡಿದ್ದ. ಆದರೆ ಮದುವೆಯಾದ ಎರಡೇ ತಿಂಗಳು ಚೆನ್ನಾಗಿದ್ದ ಯುವತಿ ಆ ಬಳಿಕ ಏಕಾಏಕಿ ಬೇರೆ ಯುವಕನ ಜೊತೆ ಮದುವೆಯಾಗಿರುವ ಫೋಟೋ ತೋರಿಸಿ ನಿನ್ನ ಜೊತೆ ಇರಲು ಇಷ್ಟವಿಲ್ಲ, ಅಲ್ಲದೇ ಮನೆಯಲ್ಲಿದ್ದ ಒಡವೆ ಸುಮಾರು ಆರು ಲಕ್ಷ ಹಣ ತೆಗೆದುಕೊಂಡು ಎಸ್ಕೇಪ್‌ ಆಗಿದ್ದಾಳೆ.

 

ಇದೀಗ ಯುವಕ ಹಿರಿಯರ ಸಮ್ಮುಖದಲ್ಲಿ ಆಕೆಯ ಕುಟುಂದ ಜೊತೆ ರಾಜಿ ಪಂಚಾಯಿತಿಗೆ ನಡೆಸಿದ್ದಾನೆ. ಆದರೆ ಈ ಸಂದರ್ಭ ನೀವು ಕೆಳ ಜಾತಿಯವರು. ನಮ್ಮ ಮನೆಗೆ ಬಂದರೆ ಕೊಲೆ ಮಾಡುವುದಾಗಿ ಯುವತಿ ಪೋಷಕರು ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ. ಇದೀಗ ಯುವಕ ತನಗಾದ ಅನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಮೊದಲನೇ ಮದುವೆ ಮುಚ್ಚಿಟ್ಟು ನನ್ನನ್ನು ಎರಡನೇ ಮದುವೆಯಾಗಿದ್ದಲ್ಲದೇ, ಮನೆ ನಿರ್ಮಾಣ, ಮದುವೆ ಖರ್ಚು, ಒಡವೆ ಅಂತ ಲಕ್ಷಾಂತರ ರೂಪಾಯಿ ತೆಗೆದುಕೊಂಡಿದ್ದಾಳೆ ಎಂದು ಆರೋಪ ಮಾಡಿದ್ದಾನೆ.

Leave A Reply

Your email address will not be published.