Puttur: ವಿದ್ಯಾರ್ಥಿನಿಯರಿಗೆ ಚುಡಾಯಿಸುತ್ತಿದ್ದ ಯುವಕರ ಬಂಧನ

Puttur: ಪುತ್ತೂರಿನ ಕುರಿಯ ಎಂಬಲ್ಲಿ ಶಾಲಾ ಹೆಣ್ಣು ಮಕ್ಕಳಿಗೆ ಅಪರಿಚಿತ ವ್ಯಕ್ತಿಗಳು ಕಿರುಕುಳ ನೀಡಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

 

ಶಾಲಾ ಮಕ್ಕಳು ಶಾಲೆಗೆ ಹೋಗುವ ಸಂದರ್ಭದಲ್ಲಿ ಈ ಕಿರುಕುಳ ನಡೆದಿರುವ ಕುರಿತು ವರದಿಯಾಗಿದೆ. ಶಾಲೆಗೆ ಹೋಗುವ ವಿದ್ಯಾರ್ಥಿನಿಗಳ ಕೈಯನ್ನು ಹಿಡಿದು ಎಳೆದು ಅಸಭ್ಯ ರೀತಿಯಲ್ಲಿ ವರ್ತಿಸಿರುವುದಾಗಿ ಸ್ಥಳೀಯರು ಆರೋಪ ಮಾಡಿದ್ದಾರೆ. ಈ ರೀತಿಯ ಘಟನೆ ಈ ಹಿಂದೆ ಕೂಡಾ ನಡೆದಿತ್ತು. ಈ ಭಾರಿ ನಮ್ಮ ಬಳಿ ದಾಖಲೆ ಇದ್ದುದರಿಂದ ನಾವು ಆರೋಪಿಗಳನ್ನು ಹಿಡಿದೆವು. ಹಾಗೂ ಈ ರೀತಿಯ ಘಟನೆಗಳು ನಡೆಯಬಾರದು ಎಂದು ನಾವು ಹೇಳುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

 

ಕಳೆದ ಕೆಲವು ತಿಂಗಳುಗಳಿಂದ ಇದೇ ರೀತಿ ಶಾಲಾ ಹೆಣ್ಣುಮಕ್ಕಳಿಗೆ ಅಪರಿಚಿತ ವ್ಯಕ್ತಿಗಳು ಕಿರುಕುಳ ನೀಡುತ್ತಿರುವ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು ಎಂದು ಸ್ಥಳೀಯರು ಮಾಧ್ಯಮಕ್ಕೆ ತಿಳಿಸಿದ್ದರು.

Leave A Reply

Your email address will not be published.