Mangaluru: ಆಸ್ಪತ್ರೆಗೆ ದಾಖಲು ಮಾಡಲಾಗಿದ್ದ 6 ತಿಂಗಳ ಗರ್ಭಿಣಿ ಸಾವು

Mangaluru: ಆಸ್ಪತ್ರೆಗೆ ದಾಖಲಾಗಿದ್ದ ಆರು ತಿಂಗಳ ಗರ್ಭಿಣಿಯೊಬ್ಬರು ಸಾವಿಗೀಡಾದ ಘಟನೆಯೊಂದು ಮಂಗಳೂರು ಲೇಡಿಗೋಶನ್‌ ಆಸ್ಪತ್ರೆಯಲ್ಲಿ ನಡೆದಿದೆ.

ಇದನ್ನೂ ಓದಿ: Robbery: ಮನೆ ಮಲೀಕನಿಗೆ ಖಾರದಪುಡಿ ಎರಚಿ ನಗ,ನಗದು ದೋಚಿದ ದುಷ್ಕರ್ಮಿಗಳು, ಓರ್ವ ಸೆರೆ

ತೆಂಕಕಜೆಕಾರು ನಿವಾಸಿ ವಸಂತ ಅವರ ಪತ್ನಿ ಸುಜಾತ ಎಂಬುವವರೇ ಮೃತ ಗರ್ಭಿಣಿ. ಸುಜಾತ ಅವರ ಮಗುವಿಗೆ ಹೃದಯ ಸಂಬಂಧಿ ತೊಂದರೆ ಇದೆ ಎಂಬ ಕಾರಣದಿಂದ ಇವರನ್ನು ಫೆ.12ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಸುಜಾತಾ ಅವರಿಗೆ ಮದುವೆಯಾಗಿ 10 ವರ್ಷಗಳ ನಂತರ ತಾಯಿಯಾಗುತ್ತಿರುವ ಖುಷಿಯಲ್ಲಿದ್ದಾಗಲೇ ಇದೀಗ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತ ಹೊಂದಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.