Mangaluru: ಭರತ್‌ ಶೆಟ್ಟಿ ಮೇಲೆ ಎಫ್‌ಐಆರ್‌ ಬಗ್ಗೆ ತನಿಖೆ; ಗೃಹ ಸಚಿವ ಪರಮೇಶ್ವರ್‌

Mangaluru: ಮಂಗಳೂರು ಉತ್ತರದ ಶಾಸಕ ಭರತ್‌ ಶೆಟ್ಟಿ ಅವರು ಜೆರೋಸಾ ಶಾಲೆಯ ವಠಾರದಲ್ಲಿ ಇಲ್ಲದಿದ್ದರೂ ಅವರ ಮೇಲೆ ಎಫ್‌ಐಆರ್‌ ಹಾಕಿರುವುದರ ಕುರಿತು ತನಿಖೆ ನಡೆಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

ಇದನ್ನೂ ಓದಿ: Mangaluru: ಆಸ್ಪತ್ರೆಗೆ ದಾಖಲು ಮಾಡಲಾಗಿದ್ದ 6 ತಿಂಗಳ ಗರ್ಭಿಣಿ ಸಾವು

ಬಿಜೆಪಿ ಸದಸ್ಯರು ಇದಕ್ಕೆ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು, ಎಫ್‌ಐಆರ್‌ ದಾಖಲಿಸಿದ ಎಸ್‌ಐ ಅನ್ನು ತತ್‌ಕ್ಷಣವೇ ಅಮಾನತು ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ. ಶಾಲೆಯ ವಿರುದ್ಧ ಪೋಷಕರು ನೀಡಿರುವ ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಬೇಕು ಎಂದು ಆಗ್ರಹ ಮಾಡಿದ್ದಾರೆ. ಇದು ವಾಗ್ವಾದಕ್ಕೆ ಎಡೆ ಮಾಡಿದರ ಕಾರಣ ಸದನವನ್ನು ಮುಂದೂಡಲಾಯಿತು.

ಭರತ್‌ಶೆಟ್ಟಿ ಶಾಲೆಯ ಬಳಿಗೆ ಹೋಗಲಿಲ್ಲ. ನಾನು ಇದರ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಡಿಡಿಪಿಐ ಕಚೇರಿಗೆ ಹೋಗಿ ಹಿಂದೂ ಮಕ್ಕಳನ್ನು ಕ್ರಿಶ್ಚಿಯನ್‌ ಶಾಲೆಗೆ ಸೇರಿಸಬೇಡಿ ಎಂದು ಹೇಳಿಕೆ ಕೊಟ್ಟಿದ್ದಾರೆ. ಪ್ರಚೋದನಕಾರಿ ಹೇಳಿಕೆ ಅಂತ ದೂರಿನಲ್ಲಿ ಸೇರಿಸಿದ್ದಾರೆ ಎಂದರು.

Leave A Reply

Your email address will not be published.