Robbery: ಮನೆ ಮಾಲೀಕನಿಗೆ ಖಾರದಪುಡಿ ಎರಚಿ ನಗ,ನಗದು ದೋಚಿದ ದುಷ್ಕರ್ಮಿಗಳು, ಓರ್ವ ಸೆರೆ

Chikkamagaluru News: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಹೆಬ್ಬಾರಟ್ಟಿ ಗ್ರಾಮದಲ್ಲಿ ಗುರುವಾರ ರಾತ್ರಿ 8 ಗಂಟೆಗೆ ನಾಲ್ವರ ಅಪರಿಚತರ ತಂಡವೊಂದು ಮನೆ ಮಾಲೀಕನಿಗೆ ಖಾರದ ಪುಡಿ ಎರಚಿ ಕುತ್ತಿಗೆಗೆ ಲಾಂಗ್‌ ಇಟ್ಟು ಮನೆಯಲ್ಲಿ ನಗ, ನಗದನ್ನು ದೋಚಿರುವ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: Business Tips: ಜ್ಯೂಸ್ ವ್ಯಾಪಾರದಿಂದ ತಿಂಗಳಿಗೆ ರೂ.1.5 ಲಕ್ಷ ಆದಾಯವಂತೆ! ಇಲ್ಲಿದೆ ನೋಡಿ ಬಿಸಿನೆಸ್ ಟಿಪ್ಸ್

ಸುಮಾರು ಐದು ಲಕ್ಷದ ನಗದು, 30ಗ್ರಾಂ ಮಾಂಗಲ್ಯ ಸರವನ್ನು ಹೊತ್ತೊಯ್ದ ಘಟನೆ ನಡೆದಿದೆ. ಅಪರಿಚತ ಯುವಕರ ತಂಡವು ಹೆಬ್ಬಾರಟ್ಟಿ ಅನಂತ ಹೆಬ್ಬಾರ್‌ ಎಂಬುವವರ ಮನೆಯ ಮೇಲೆ ದಾಳಿ ನಡೆಸಿ ಈ ಕೃತ್ಯ ಎಸಗಿದ್ದಾರೆ. ಈ ವೇಳೆ ತಡೆಯಲು ಬಂದ ಕಾರ್ಮಿಕ ಮಾಣಿ ಭಟ್ಟ ಎಂಬವರ ಕೈಗೆ ಹರಿತವಾದ ಆಯುಧದಿಂದ ಗಂಭೀರ ಹಲ್ಲೆ ಮಾಡಿದ್ದಾರೆ. ಕಾರ್ಮಿಕ ಈ ಸಂದರ್ಭದಲ್ಲಿ ಬೊಬ್ಬೆ ಹೊಡೆದಿದ್ದರಿಂದ ಅಕ್ಕ ಪಕ್ಕದ ಜನ ಸೇರುತ್ತಿದ್ದಂತೆ ಮೂವರು ಕಾರಿನಲ್ಲಿ ಪರಾರಿಯಾಗಿದ್ದು, ಓರ್ವ ಅರಮನೆ ತಲಗೂರು ಎಂಬ ಗ್ರಾಮದ ಅರಣ್ಯದಲ್ಲಿ ಅವಿತು ಕೂತಿದ್ದು, ಆತನನ್ನು ಸ್ಥಳೀಯರು ಪತ್ತೆಯಾಗಿದ್ದು, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.