Loksabha Election: ಮಂಗಳೂರಿನಿಂದ ಲೋಕಸಭೆಗೆ ಬಿ ರಮಾನಾಥ ರೈ ಸ್ಪರ್ಧೆ?! ಬಿಗ್‌ ಅಪ್ಡೇಟ್‌ ನೀಡಿದ ಮಾಜಿ ಸಚಿವ

Lok Sabha Election 2024: ಲೋಕಸಭಾ ಚುನಾವಣೆ ಇನ್ನೇನು ಹತ್ತಿರ ಬರುತ್ತಿದ್ದಂತೆ ಎಲ್ಲಾ ಪಕ್ಷಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳ ಹೆಸರು ಮುನ್ನಲೆಗೆ ಬರುತ್ತಿದೆ. ಇದೀಗ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಅವರು ಕೂಡಾ ಲೋಕಸಭೆಗೆ ಸ್ಪರ್ಧಿಸಲು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಪರೋಕ್ಷವಾಗಿ ತಮ್ಮ ಇಂಗಿತವನ್ನು ಹೇಳಿದ್ದಾರೆ.

ಇದನ್ನೂ ಓದಿ: Black Clothes: ಶುಭ ಸಮಾರಂಭಗಳಲ್ಲಿ ಕಪ್ಪು ಬಟ್ಟೆಯನ್ನು ಏಕೆ ಧರಿಸುವುದಿಲ್ಲ? ಧಾರ್ಮಿಕ ಕಾರಣದ ಜೊತೆಗೆ ವೈಜ್ಞಾನಿಕ ಕಾರಣ ಏನಿದೆ?

ಮಂಗಳೂರಿನಲ್ಲಿ ಇಂದು ಬೃಹತ್‌ ಕಾಂಗ್ರೆಸ್‌ ಸಮಾವೇಶ ನಡೆಯಲಿರುವ ಸ್ಥಳಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಾ, ಮುಂದಿನ ಲೋಕಸಭಾ ಚುನಾವಣೆಯ ಅಭ್ಯರ್ಥಿಯ ಘೋಷಣೆ ಈ ಸಮಾವೇಶದಲ್ಲಿ ಮಾಡುವುದಿಲ್ಲ. ಈ ನಿರ್ಧಾರವನ್ನು ಹೈಕಮಾಂಡ್‌ ತೆಗೆದುಕೊಳ್ಳಲಿದೆ. ಸರ್ವೇ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ, ನಾನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ. ಈ ಬಾರಿ ಲೋಕಸಭಾ ಚುನಾವಣೆಗೆ ಅವಕಾಶ ದೊರೆತಲ್ಲಿ ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ.

 

ಇನ್ನು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಮತೀಯವಾದಕ್ಕೆ ಪುಷ್ಠಿ ಕೊಡುವ ಕ್ಷೇತ್ರ. ಆ ಕಾರಣಕ್ಕಾಗಿ ಇಲ್ಲಿ ನಿರಂತರವಾಗಿ ಮತೀಯವಾದಿ ಪಕ್ಷ ಗೆಲ್ಲುತ್ತಿದೆ. ಆದರೆ ಈ ಬಾರಿ ಆ ರೀತಿ ನಡೆಯಲ್ಲ. ಮತೀಯವಾದ ಅನ್ನೋದು ಒಂದು ಸೀಸನಲ್ ಜ್ವರ ಇದ್ದ ಹಾಗೆ. ಕಾಲ ಕ್ರಮೇಣ ಆ ಜ್ವರ ಕಡಿಮೆಯಾಗುತ್ತೆ. ದಕ್ಷಿಣ ಕನ್ನಡದಲ್ಲೂ ಇದೇ ಪರಿಸ್ಥಿತಿ ಆಗಲಿದೆ. ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಆದರೆ ಪ್ರತಿಬಾರಿಯೂ ಈ ತಂತ್ರ ನಡೆಯಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು ಎಂದು ನ್ಯೂಸ್‌ 18 ವರದಿ ಮಾಡಿದೆ.

Leave A Reply

Your email address will not be published.