Suhani Bhatnagar: ‘ದಂಗಲ್‌ʼ ಚಿತ್ರ ಖ್ಯಾತಿಯ ಸುಹಾನಿ ಭಟ್ನಾಗರ್‌ ನಿಧನ; 19 ರ ಹರೆಯದಲ್ಲೇ ಸಾವು

Suhani Bhatnagar Death: ‘ದಂಗಲ್’ ಚಿತ್ರದಲ್ಲಿ ಬಬಿತಾ ಫೋಗಟ್ ಅವರ ಬಾಲ್ಯದ ಪಾತ್ರವನ್ನು ನಿರ್ವಹಿಸಿದ ಹುಡುಗಿ ಸುಹಾನಿ ಭಟ್ನಾಗರ್ ನಿಧನರಾಗಿರುವ ಕುರಿತು ವರದಿಯಾಗಿದೆ. ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರದಲ್ಲಿ ನಟಿಸಿದ್ದಾರೆ. ಕೇವಲ 19 ವರ್ಷದಲ್ಲೇ ಸಾವು ಕಂಡಿದ್ದು, ನಿಜಕ್ಕೂ ಆಘಾತಕಾರಿ. ವರದಿಯ ಪ್ರಕಾರ, ಸುಹಾನಿ ಸ್ವಲ್ಪ ಸಮಯದ ಹಿಂದೆ ಅಪಘಾತಕ್ಕೊಳಗಾಗಿದ್ದು, ಇದರಿಂದ ಆಕೆಯ ಕಾಲು ಮುರಿತವಾಗಿದ್ದು. ಚಿಕಿತ್ಸೆಯ ಸಮಯದಲ್ಲಿ ತೆಗೆದುಕೊಂಡ ಕೆಲವೊಂದು ಔಷಧಿಗಳ ರಿಯಾಕ್ಷನ್‌ನಿಂದ ಸಾವು ಸಂಭವಿಸಿದೆ ಎನ್ನಲಾಗಿದೆ. ಆಕೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದೀರ್ಘಕಾಲ ದಾಖಲಿಸಲಾಗಿತ್ತು.

ಇದನ್ನೂ ಓದಿ: Rishab Shetty: ಕಾಂತಾರ 2 ರಲ್ಲಿ ದೈವಾರಾಧನೆ ಇದ್ದರೆ ಉಗ್ರ ಹೋರಾಟ; ರಿಷಬ್‌ ಶೆಟ್ಟಿಗೆ ಖಡಕ್‌ ಎಚ್ಚರಿಕೆ

ಸುಹಾನಿ ಭಟ್ನಾಗರ್ ಸಾವು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಕೇವಲ 19 ನೇ ವಯಸ್ಸಿನಲ್ಲಿ ಅವರ ನಿಧನದಿಂದ ಎಲ್ಲರೂ ದುಃಖಿತರಾಗಿದ್ದಾರೆ. ದೈನಿಕ್ ಭಾಸ್ಕರ್ ಅವರ ವರದಿಯ ಪ್ರಕಾರ, ಸುಹಾನಿ ಅವರ ಅಂತ್ಯಕ್ರಿಯೆಯನ್ನು ಇಂದು ಅಂದರೆ ಶನಿವಾರದಂದು ಫರಿದಾಬಾದ್‌ನ ಅಜ್ರೌಂಡಾ ಸ್ಮಶಾನದಲ್ಲಿ ಮಾಡಲಾಗುತ್ತದೆ.

ಇವರು ‘ಬಾಪು ಸೆಹತ್ ಕೆ ಲಿಯೇ ಹನಿಕಾಕ್’ ಹಾಡಿನಲ್ಲಿ ಕೂಡಾ ನಟಿಸಿದ್ದರು.

Leave A Reply

Your email address will not be published.