Mangaluru : ಕದ್ರಿಪಾರ್ಕ್‌ನಲ್ಲಿ ವಾಕಿಂಗ್‌ ಮಾಡುತ್ತಿದ್ದ ಮಾಜಿ ಶಾಸಕ ಮೊಯಿದಿನ್‌ ಬಾವಾಗೆ ಬೀದಿ ನಾಯಿ ಕಡಿತ

Mangaluru: ಮಾಜಿ ಶಾಸಕ ಮೊಯಿದಿನ್‌ ಬಾವಾ ಅವರ ಮೇಲೆ ಬೀದಿ ನಾಯಿ ದಾಳಿ ಮಾಡಿದ ಘಟನೆಯೊಂದು ಕದ್ರಿ ಪಾರ್ಕ್‌ನಲ್ಲಿ ನಡೆದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Mangaluru: ಮಂಗಳೂರಿನಲ್ಲಿ ಕಾಂಗ್ರೆಸ್‌ ಬೃಹತ್‌ ಸಮಾವೇಶ; ಲೋಕಸಭೆ ಚುನಾವಣೆ ಭರದ ಸಿದ್ಧತೆ; ಟ್ರಾಫಿಕ್‌ ಬದಲಾವಣೆ, ಪಾರ್ಕಿಂಗ್‌ ವಿವರ ಇಲ್ಲಿದೆ

ಕದ್ರಿ ಪಾರ್ಕಿಗೆ ವಾಕಿಂಗ್‌ಗೆಂದು ಬಂದ ಮೊಯಿದಿನ್‌ ಬಾವಾ ಅವರಿಗೆ ಈ ಸಂದರ್ಭದಲ್ಲಿ ಬೀದಿ ನಾಯಿ ದಾಳಿ ಮಾಡಿದ್ದು, ಕಾಲಿಗೆ ಬಲವಾದ ಏಟು ಬಿದ್ದಿದ್ದು, ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಬೀದಿ ನಾಯಿ ದಾಳಿಯ ಪರಿಣಾಮ ಮೊಯಿದಿನ್‌ ಬಾವಾ ಅವರ ಕಾಲಿಗೆ ಬಲವಾದ ಏಟು ಬಿದ್ದಿದ್ದರಿಂದ ಗಾಲಿ ಕುರ್ಚಿಯ ಸಹಾಯ ಪಡೆಯಬೇಕಾಗಿದೆ.

ಕದ್ರಿ ಪಾರ್ಕ್‌ ಸಮೀಪ ಬೀದಿ ನಾಯಿಗಳ ಸಂಖ್ಯೆ ಜಾಸ್ತಿ ಇದ್ದು, ಇಲ್ಲಿ ವಾಕಿಂಗ್‌ಗೆಂದು ಬರುವವರು ಈ ಬೀದಿ ನಾಯಿಗಳ ಭಯದಲ್ಲೇ ಓಡಾಡುವ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಈ ಪಾರ್ಕಿಗೆ ವೃದ್ಧರು, ಮಹಿಳೆಯರು, ಮಕ್ಕಳು ಹೆಚ್ಚಾಗಿ ಬರುತ್ತಿರುವುದರಿಂದ ಜಿಲ್ಲಾಡಳಿತ ಈ ಕುರಿತು ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕೆಂದು ಮೊಯಿದಿನ್‌ಬಾವಾ ಅವರು ಆಗ್ರಹಿಸಿರುವ ಕುರಿತು ವರದಿಯಾಗಿದೆ.

Leave A Reply

Your email address will not be published.