Interview: ಸಂದರ್ಶನದಲ್ಲಿ ಪಾಸ್‌ ಆದ ಖುಷಿಗೆ ಬಾತ್‌ರೂಂಗೆ ಹೋದ ಯುವಕ! ಹೊರಬಂದ ಕೂಡಲೇ ಕೆಲಸ ಕಳೆದುಕೊಂಡ

ಒಬ್ಬ ಹುಡುಗನಿಗೆ ಒಳ್ಳೆಯ ಕೆಲಸ ದೊರಕಿತ್ತು. ಕೆಲಸ ದೊರಕಿದ ಖುಷಿಗೆ ಆತ ಸೀದಾ ಟಾಯ್ಲೆಟ್‌ಗೆ ಹೋಗಿದ್ದ. ಆದರೆ ಹೊರ ಬರುವಷ್ಟರಲ್ಲಿ ಆ ಕೆಲಸ ಆತನ ಕೈಯಿಂದ ತಪ್ಪಿ ಹೋಗಿದೆ. ಅರೆ ಇದೇನಾಯ್ತು ಎಂದು ನೀವು ಯೋಚನೆ ಮಾಡುತ್ತಿದ್ದೀರಾ? ಹೌದು, ಯುವಕ ಕೆಲಸ ಸಿಕ್ಕ ಕೂಡಲೇ ಮಾಡಿದ ಒಂದು ಸಣ್ಣ ತಪ್ಪು ಆತ ಒಂದೊಳ್ಳೆ ಕೆಲಸ ಕಳೆದುಕೊಳ್ಳುವ ರೀತಿ ಮಾಡಿದೆ.

 

ಆತ ಇಂಟರ್‌ವ್ಯೂಗೆಂದು ಹೋಗಿದ್ದು, ಸಂದರ್ಶನವೆಲ್ಲ ಮುಗಿದ ಮೇಲೆ ನಿಮ್ಮ ಕೆಲಸ ಕನ್ಫರ್ಮ್‌ ಎಂದು ಅಲ್ಲಿದ್ದವರು ಹೇಳಿದ್ದಾರೆ. ಈ ಖುಷಿಯಲ್ಲಿ ಯುವಕ ಬಾತ್‌ರೂಂ ಗೆ ಹೋಗಿದ್ದಾನೆ. ಆತ ಹೇಳಿರುವ ಪ್ರಕಾರ, ವೀಕೆಂಡ್‌ ಆಗಿದ್ದರಿಂದ ಪಾರ್ಟಿ ಮೂಡ್‌ನಲ್ಲಿದ್ದರಿಂದ ನಾನು ಸುಮಾರು ಪಾನೀಯ ಕುಡಿದಿದ್ದಾರೆ. ಹೊಟ್ಟೆತುಂಬಾ ಊಟ ಮಾಡಿದ್ದೆ. ಇಂಟರ್‌ವ್ಯೂಹ ಸಂದರ್ಭದಲ್ಲಿಯೂ ನಾನು ಕಾಫಿ ಕುಡಿದಿದ್ದೆ ಎಂದು ಯುವಕ ಹೇಳಿದ್ದಾನೆ. ಅದಕ್ಕೂ ಇದಕ್ಕೂ ಏನು ಲಿಂಕ್‌ ಎಂದು ನೀವು ಯೋಚನೆ ಮಾಡ್ತಾ ಇದ್ದೀರಾ? ಖಂಡಿತ ಲಿಂಕ್‌ ಇದೆ.

 

ಸಂದರ್ಶನ ಮುಗಿಸಿದ ಯುವಕ ಬಾತ್‌ರೂಂ ಗೆ ಹೋಗಿದ್ದು, ಟಾಯ್ಲೆಟ್‌ ಮಾಡಿ ವಾಪಾಸು ಬಂದಿದ್ದಾರೆ. ಇತ್ತ ಪೇಪರ್‌ ವರ್ಕ್‌ ಕೂಡಾ ನಡೆಯುತ್ತಿತ್ತು. ಇದೇ ವೇಳೆ ಟಾಯ್ಲೆಟ್‌ ಕ್ಲೀನ್‌ ಮಾಡೋಕೆಂದು ಮಹಿಳೆಯೊಬ್ಬರು ಬಾತ್‌ರೂಂಗೆ ಹೋಗಿದ್ದಾರೆ. ಆ ಮಹಿಳೆ ಕೋಪದಿಂದ ಹೊರಬಂದಿದ್ದು, ಜೋರಾಗಿ ಕಿರುಚಾಡಿದ್ದಾಳೆ. ಆಡ್ಮಿನ್‌ ಗೆ ದೂರು ನೀಡಿದ್ದಾಳೆ. ಶೌಚಾಲಯಕ್ಕೆ ಹೋದ ಯುವಕ ಫ್ಲಶ್‌ ಮಾಡಿರಲಿಲ್ಲ. ಇದನ್ನೇ ಅಡ್ಮಿನ್‌ಗೆ ಮಹಿಳೆ ತಿಳಿಸಿದ್ದಾಳೆ.

 

ಅಲ್ಲಿ ನಾನೊಬ್ಬನೇ ಇದ್ದಿದ್ದು. ನಾನೇ ಫ್ಲಶ್‌ ಮಾಡದವನು ಎಂದು ಎಲ್ಲರಿಗೂ ತಿಳಿದಿತ್ತು. ಆದರೆ ಯಾರೂ ನನ್ನನ್ನು ಕೇಳಲಿಲ್ಲ. ನನ್ನ ಪೇಪರ್‌ ವರ್ಕ್‌ ಮುಗಿಸಿ ಹೊರಟೆ. ಆದರೆ ಹೊರ ಬಂದ ನಂತರ ನನಗೆ ಮತ್ತೆ ಕರೆ ಬಂದಿಲ್ಲ ಎಂದು ಯುವಕ ಹೇಳಿಕೊಂಡಿದ್ದಾನೆ. ಈ ಪೋಸ್ಟ್‌ ಇದೀಗ ವೈರಲ್‌ ಆಗಿದ್ದು, ನೆಟಿಜನ್‌ಗಳನ್ನು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Leave A Reply

Your email address will not be published.