Viral News: 3 ವರ್ಷದ ಮಗಳ ಸ್ತ್ರೀ ಸುನ್ನತಿ ಮಾಡಿಸಿದ ತಾಯಿ! ಕೋರ್ಟ್‌ ನೀಡಿತು ಕಠಿಣ ಶಿಕ್ಷೆ

ಸ್ತ್ರೀ ಸುನ್ನತಿಗಾಗಿ ಮಹಿಳೆಯೋರ್ವರು ತನ್ನ ಮಗಳನ್ನು ಕೀನ್ಯಾಗೆ ಕರೆದುಕೊಂಡು ಹೋಗಿ ಸುನ್ನತಿ ಮಾಡಿಸಿದ ಘಟನೆಯೊಂದು ನಡೆದಿದ್ದು, ಇದೀಗ ಬ್ರಿಟನ್‌ ಮಹಿಳೆಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಇದೀಗ ಮಹಿಳೆಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಘಟನೆ ಲಂಡನ್‌ನಲ್ಲಿ ನಡೆದಿದೆ. ಲಂಡನ್‌ನ 40 ವರ್ಷದ ಮಹಿಲೆ ಅಮೀನಾ ನೂರ್‌ ಅವರು ತನ್ನ ಮೂರು ವರ್ಷದ ಹೆಣ್ಣು ಮಗುವನ್ನು ಕೀನ್ಯಾಗೆ ಕರೆದೊಯ್ದು ಯೋನಿ ಚೇದನ ಅಥವಾ ಸ್ತ್ರೀ ಸುನ್ನತಿ ಮಾಡಿದಾಕೆ. ಕೀನ್ಯಾದ ಖಾಸಗಿ ಮನೆಯಲ್ಲಿ ಈಕೆ ಈ ಪ್ರಕ್ರಿಯೆನ್ನು ನಡೆಸಿದ್ದು, ಇದೀಗ ಈಕೆಗೆ ಕೋರ್ಟ್‌ ಶಿಕ್ಷೆ ವಿಧಿಸಿದೆ.

 

ಒಲ್ಡ್‌ ಬೈಲೇಯಲ್ಲಿರುವ ನ್ಯಾಯಾಲಯ ಈಕೆಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸ್ತ್ರೀ ಸುನ್ನತಿ ನಿರ್ವಹಿಸಲು ಸಹಾಯ ಮಾಡಿದ ಮೊದಲ ಶಿಕ್ಷೆಗೆ ಒಳಗಾದ ಮಹಿಳೆ ಈಕೆ ಎಂದು ವರದಿಯಾಗಿದೆ. ಈ ಪದ್ಧತಿಯನ್ನು ಧರ್ಮ, ಸಂಪ್ರದಾಯ ಎಂದು ಮಾಡಲಾಗಿದೆ. ಬಾಲ್ಯದಲ್ಲಿ ನಾನು ಕೂಡಾ ಅನುಭವಿಸಿದ ಪ್ರಕ್ರಿಯೆ ಇದಾಗಿತ್ತು ಎಂದು ಮಹಿಳೆ ನ್ಯಾಯಾಲಯಕ್ಕೆ ಹೇಳಿದ್ದಾಳೆ.

 

ಇದೊಂದು ಭಯಾನಕ, ಅಸಹ್ಯಕರ ಅಪರಾಧ. ಇದು ಸಂತ್ರಸ್ತೆಯ ಜೀವನವನ್ನು ಸರಿಪಡಿಸಲಾಗದಷ್ಟು ಹಾನಿ ಮಾಡಿದೆ. ಆಫ್ರೀಕಾದ ರಾಷ್ಟ್ರಗಳಾದ ಸೋಮಲಿಯಾ ಹಾಗೂ ಕೀನ್ಯದಲ್ಲಿ ಇದು ಆಚರಣೆಯಲ್ಲಿದೆ ಎಂದು ಹೇಳಿದ್ದಾರೆ ನ್ಯಾಯಾಧೀಶರು. ಸಂಪ್ರದಾಯದ ಹೆಸರಲ್ಲಿ ಕ್ರೌರ್ಯಕ್ಕೆ ಒಳಗಾದ ಮಗುವಿಗೆ ಒಂದು ವರ್ಷ. ಕಾನೂನಾತ್ಮಕ ಕಾರಣ ಹಾಗೂ ವೈದ್ಯಕೀಯ ಪರೀಕ್ಷೆಯ ಕಾರಣದಿಂದ ಮಗುವಿನ ಗುರುತನ್ನು ಬಹಿರಂಗಪಡಿಸುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

 

ಪುರುಷರಿಗೆ ಮಾಡುವ ಸುನ್ನತ್‌ ಕುರಿತು ನೀವು ಕೇಳಿರಬಹುದು. ಇದು ಮುಸ್ಲಿಂ ಸಮುದಾಯದಲ್ಲಿ ಆಚರಣೆಯಲ್ಲಿದೆ. ಇದು ಅವರ ಧಾರ್ಮಿಕ ಆಚರಣೆಯ ಭಾಗ. ಪುಟ್ಟ ಮಗುವಿರುವಾಗಲೇ ಗಂಡು ಮಕ್ಕಳ ಜನನಾಂಗದ ತುದಿಯ ಚರ್ಮವನ್ನು ಕತ್ತರಿಸಲಾಗುತ್ತದೆ. ಇದನ್ನು ಸುನ್ನತಿ ಎಂದು ಕರೆಯಲಾಗುತ್ತದೆ. ಸ್ತ್ರೀ ಸುನ್ನತಿ ಅತ್ಯಂತ ಭಯಾನಕ ಮತ್ತು ನೋವಿನಿಂದ ಕೂಡಿದ್ದು, ಅದು ಅನುಭವಿಸಿದ ಮಹಿಳೆಯೇ ತನ್ನ ಕಂದನನ್ನು ಈ ನರಕಕ್ಕೆ ದೂಡಿದ್ದು. ಈ ಆಚರಣೆ ನಿಜಕ್ಕೂ ಭಯಾನಕ ಎಂದು ಹೇಳಬಹುದು. ಇದನ್ನು ಮಾಡಿಸಿಕೊಂಡ ಸಂತ್ರಸ್ತೆ ತಮ್ಮ ಜೀವನದುದ್ದಕ್ಕೂ ಅದರ ನೋವನ್ನು ಸಹಿಸಬೇಕು. ಇದು ಕ್ರೂರತೆ ಮಾತ್ರವಲ್ಲ ಸಮಾಜ ವಿರೋಧಿ ಕೂಡಾ ಹೌದು. ಭಾರತದಲ್ಲಿ ಕೂಡಾ ಈ ಪದ್ಧತಿ ಆಚರಣೆಯಲ್ಲಿದೆ ಎಂದರೆ ನೀವು ನಂಬುತ್ತೀರ? ಹೌದು, ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ಮಹಿಳೆಯರು ಇನ್ನೂ ಈ ಸಂಪ್ರದಾಯವನ್ನು ಆಚರಿಸುತ್ತಾರೆ.

 

ಪುರುಷರ ಸುನ್ನತಿಯಂತೆ ಇದುವೇ ಎಂದು ನೀವು ಭಾವಿಸಬೇಡಿ. ಇದು ಅತ್ಯಂತ ಭಯಾನಕ. 100 ಪಟ್ಟು ಹೆಚ್ಚು ಅಪಾಯಕಾರಿ. ಇದು ಮಹಿಳೆಯರ ಆರೋಗ್ಯದ ಮೇಲೆ ಒಮ್ಮೆಲೇ ಪರಿಣಾಮ ಬೀರುವುದಿಲ್ಲ. ಆದರೆ ನಂತರ ಅನೇಕ ಕಾಯಿಲೆಗಳನ್ನು ಪಡೆಯುತ್ತಾರೆ.

 

ಸ್ತ್ರೀ ಸುನ್ನತಿ, ಡೈಮ್-ಉಲ್-ಇಸ್ಲಾಂ (Daim ul Islam) ಎಂಬ ಧಾರ್ಮಿಕ ಪುಸ್ತಕವನ್ನು ಆಧರಿಸಿದ್ದು, ಇದರಲ್ಲಿ, ಕ್ಲಿಟೋರಿಸ್ ನ ಮೇಲ್ಭಾಗವನ್ನು ತೆಗೆದುಹಾಕಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ, ಸಂಪೂರ್ಣ ಹೊರ ಯೋನಿಯನ್ನು ತೆಗೆದುಹಾಕಲಾಗುತ್ತದೆ ಎಂದು ವರದಿಯಾಗಿದೆ. ಇದು ವೈದ್ಯರ ಮೇಲ್ವಿಚಾರಣೆಯಲ್ಲಿ ಮಾಡುವುದಿಲ್ಲ. ಇದು ಮಾಡಿದ ನಂತರ ಯಾವುದೇ ವೈದ್ಯಕೀಯ ಸೌಲಭ್ಯ ನೀಡಲಾಗುವುದಿಲ್ಲ. ಸ್ತ್ರೀ ಸುನ್ನತಿ ಅನೇಕ ಹಾನಿಯನ್ನು ಮಾತ್ರ ಉಂಟು ಮಾಡುತ್ತದೆ. ಆದರೆ ಪುರುಷ ಸುನ್ನತಿಯಲ್ಲಿ ಗಂಡಸರಿಗೆ ಆರೋಗ್ಯ ಪ್ರಯೋಜನಗಳಿದೆ.

Leave A Reply

Your email address will not be published.