Charmadi: ಧರ್ಮಸ್ಥಳಕ್ಕೆ ಹೊರಟ ಕಾರು ಇಪ್ಪತ್ತು ಅಡಿ ಆಳಕ್ಕೆ ಬಿದ್ದು ಜಖಂ; ಪ್ರಯಾಣಿಕರು ಪಾರು

Dharmasthala: ಧರ್ಮಸ್ಥಳಕ್ಕೆಂದು ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಇಪ್ಪತ್ತು ಅಡಿ ಹೊಳೆಗೆ ಬಿದ್ದಿರುವ ಘಟನೆಯೊಂದು ಚಾರ್ಮಾಡಿ ಘಾಟ್‌ನ ಮಲಯ ಮಾರುತ ಬಳಿ ಸೋಮವಾರ ಸಂಭವಿಸಿರು ಕುರಿತು ವರದಿಯಾಗಿದೆ.

ಇದನ್ನೂ ಓದಿ: Mercury Transit in Kumbh: ಫೆಬ್ರವರಿ 20 ರಂದು ಕುಂಭ ರಾಶಿಯಲ್ಲಿ ಬುಧ ಸಂಕ್ರಮಣ! ಈ 3 ರಾಶಿಯವರಿಗೆ ಭಾಗ್ಯವೋ ಭಾಗ್ಯ

ಕಾರು ಚಿತ್ರದುರ್ಗದಿಂದ ಧರ್ಮಸ್ಥಳಕ್ಕೆ ಹೊರಟಿತ್ತು. ನಾಲ್ವರು ಈ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅದೃಷ್ಟವಶಾನ್‌ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಪ್ಪತ್ತು ಅಡಿ ಕೆಳಗೆ ಬಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ. ಈ ಘಟನೆ ಮೂಡಿಗೆರೆ ತಾಲ್ಲೂಕಿನ ಬಣಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave A Reply

Your email address will not be published.