Chikkamagaluru: ಮುತ್ತು ತಂದ ಕುತ್ತು; ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌, ಏನಿದು ಘಟನೆ?

ಪ್ರೀತಿಸುತ್ತೇನೆಂದು ಹೇಳಿ ಅಪ್ರಾಪ್ತೆಯನ್ನು ಎಳೆದೊಯ್ದು ಮುತ್ತಿಟ್ಟ ಪ್ರಕರಣದಲ್ಲಿ ಇದೀಗ ವ್ಯಕ್ತಿಯೋರ್ವನಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ.ದಂಡ ವಿಧಿಸಿ ಹೈಕೋರ್ಟ್‌ ಆದೇಶಿಸಿದೆ.

ಇದನ್ನೂ ಓದಿ: Current Bill ಜಾಸ್ತಿ ಬರ್ತಾ ಇದ್ಯಾ? ಹೀಗೆ ಮಾಡಿದ್ರೆ ಸಾಕು ಎಲ್ಲವೂ ಫ್ರೀ ಫ್ರೀ!

ಕಾಫಿ ಎಸ್ಟೇಟ್‌ ಕೂಲಿ ಕಾರ್ಮಿಕನಿಗೆ ಲೈಂಗಿಕ ದೌರ್ಜನ್ಯದ ಆರೋಪದಡಿ ಈ ಶಿಕ್ಷೆಯನ್ನು ಕೋರ್ಟ್‌ ವಿಧಿಸಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದ ಪ್ರತಾಪ್‌ (28) ಎಂಬಾತನೇ ಈ ಶಿಕ್ಷೆಗೊಳಗಾದವ. ಈ ಘಟನೆ ನಡೆದ ಸಂದರ್ಭ ಆರೋಪಿಗೆ 18 ವರ್ಷ.

ಘಟನೆ ವಿವರ: ಅ.26, 2014 ರಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪ್ರಾಪ್ತೆಯನ್ನು ಹಿಡಿದು, ಶೌಚಾಲಯಕ್ಕೆ ಎಳೆದೊಯ್ದಿದ್ದು, ನಾನು ನಿನ್ನನ್ನು ಪ್ರೀತಿ ಮಾಡುತ್ತಿದ್ದು, ನೀನೂ ನನ್ನನ್ನು ಪ್ರೀತಿಸುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದು, ನಂತರ ಸಂತ್ರಸ್ತೆಯನ್ನು ಕೆಳಗೆ ಕೆಡವಿ, ಕೆನ್ನೆ, ಕತ್ತಿನ ಭಾಗಕ್ಕೆ ಮುತ್ತಿಟ್ಟು, ಎದೆ ಸ್ಪರ್ಧಿಸಿ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಿದ್ದ. ಸಂತ್ರಸ್ತೆ ಆತನ ಕೈಯಿಂದ ಹೇಗೋ ತಪ್ಪಿಸಿ ಮನೆ ಸೇರಿದ್ದಳು. ಆಕೆಯ ತಂದೆ ನಂತರ ಚಿಕ್ಕಮಗಳೂರಿನ ಬಾಲೂರು ಠಾಣೆಗೆ ದೂರು ನೀಡಿದ್ದರು.

ಚಿಕ್ಕಮಗಳೂರು ಪೋಕ್ಸೋ ವಿಶೇಷ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿ 2017ರ ಜ.30 ರಂದು ಆದೇಶ ಮಾಡಿತ್ತು. ನಂತರ ಪೊಲೀಸರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆರೋಪಿ ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿ, ಪ್ರತಾಪ್‌ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

Leave A Reply

Your email address will not be published.