Mangaluru: ಟಿಪ್ಪು ಸುಲ್ತಾನ್‌ ಕಟೌಟ್‌ ತೆರವು ಪ್ರಕರಣ; ಕಟೌಟ್‌ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ-DYFI

Mangaluru: ಉಳ್ಳಾಲ ತಾಲೂಕಿನ ಹರೇಕಳದಲ್ಲಿ ಟಿಪ್ಪು ಸುಲ್ತಾನ್‌ ಕಟೌಟ್‌ ತೆರವುಗೊಳಿಸಲು ಕೊಣಾಜೆ ಪೊಲೀಸರು ನೀಡಿದ ನೋಟಿಸ್‌ಗೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಪ್ರತಿಕ್ರಿಯೆ ನೀಡಿದ್ದಾರೆ.

ನಾವು ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆದಿದ್ದೇವೆ. ಪೊಲೀಸರು ನೀವು ಅನುಮತಿ ಪಡೆದಿಲ್ಲ ಎಂದು ಹೇಳುವ ಜೊತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತೆ ಎಂದು ಹೇಳಿದ್ದಾರೆ. ಇಲ್ಲಿ‌ ಅನುಮತಿಯ ಪ್ರಶ್ನೆ ಅಲ್ಲ. ಟಿಪ್ಪು ಫೋಟೋ ಹಾಕಿದ್ದನ್ನು ಬಿಜೆಪಿ ವಿವಾದ ಮಾಡುತ್ತಿದೆ. ವಿವಾದ ಸೃಷ್ಟಿಸಿ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಯತ್ನಿಸುತ್ತಿದೆ. ಅದಕ್ಕೆ ಹೆದರಿದ ಪೊಲೀಸ್ ಇಲಾಖೆ ನಮಗೆ ನೋಟಿಸ್ ನೀಡಿದೆ ಎಂದು ಎಂದು ಸುದ್ದಿಗಾರರೊಂದಿಗೆ ಇಂದು (ಫೆ.19) ಮಾತನಾಡುತ್ತಾ ಹೇಳಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.

ಹಾಗೂ ಮುಂದುವರಿದು, ಟಿಪ್ಪು ಕಟೌಟ್​ ಅನ್ನು ನಾವು ಯಾವುದೇ ಕಾರಣಕ್ಕೂ ತೆರವುಗೊಳಿಸುವ ಪ್ರಶ್ನೆಯಿಲ್ಲ. ಈಗಾಗಲೇ ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆದಿದ್ದೇವೆ. ಟಿಪ್ಪು ಯಾವುದೇ ಕಾರಣಕ್ಕೂ ನಿಷೇಧಿತ, ವಿವಾದಾತ್ಮಕ ವ್ಯಕ್ತಿ ಅಲ್ಲ. ಬಿಜೆಪಿಗೆ ಟಿಪ್ಪು ಸುಲ್ತಾನ್ ಇಷ್ಟ ಇಲ್ಲ ಅಂದ್ರೆ ನಾವು ತೆರವುಗೊಳಿಸುವ ಪ್ರಶ್ನೆಯಿಲ್ಲ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಹ ಟಿಪ್ಪು ಸುಲ್ತಾನ್ ಆಳ್ವಿಕೆ ಮಾಡಿದ್ದಾರೆ. ಈ ನೆಲದಲ್ಲಿ ನಿಂತು ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಹೋರಾಟ ಮಾಡಿದ್ದಾರೆ. ರಾಣಿ ಅಬ್ಬಕ, ಟಿಪ್ಪು ಸುಲ್ತಾನ್ ಇಬ್ಬರನ್ನು ನಮ್ಮ ಸಮ್ಮೇಳನಕ್ಕೆ ಬಳಸಿಕೊಂಡಿದ್ದೇವೆ. ಇಬ್ಬರಿಗೂ ಸಹ ಬಹಳಷ್ಟು ಗೌರವ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾಗಿ ಟಿವಿ9 ವರದಿ ಮಾಡಿದೆ.

 

 

Leave A Reply

Your email address will not be published.