Bantwala: ಕೆಲಸ ಸಿಗದ ಖಿನ್ನತೆ; ನೇತ್ರಾವತಿ ನದಿಗೆ ಹಾರಿದ ಪುತ್ತೂರಿನ ಯುವಕ, ಸ್ಥಳೀಯ ಯುವಕರಿಂದ ರಕ್ಷಣೆ

Bantwala: ಓದಿದ್ದರೂ ಕೆಲಸ ಸಿಗದ ಚಿಂತೆಯಲ್ಲಿ ಪುತ್ತೂರಿನ ಯುವಕನೋರ್ವ ಪಾಣೆಮಂಗಳೂರಿನ ನೇತ್ರಾವತಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಕಾರಣ, ಈ ಸಂದರ್ಭದಲ್ಲಿ ಸ್ಥಳೀಯರು ಯುವಕನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆಯೊಂದು ನಡೆದಿದೆ.

ನಿಶ್ಚಿತ್‌ (25) ಎಂಬಾತನೇ ಪಾಣೆಮಂಗಳೂರಿನಲ್ಲಿ ನೇತ್ರಾವತಿಗೆ ಹಾರಲು ಯತ್ನಿಸಿದ ಯುವಕ. ಇವರು ಪುತ್ತೂರಿನ ಆನಂದ ಎಂಬುವವರ ಪುತ್ರ.

ನಿಶ್ಚಿತ್‌ ಎಂ.ಎಸ್‌.ಡಬ್ಲ್ಯೂ ಪದವೀಧರನಾಗಿದ್ದ. ಸೂಕ್ತ ಉದ್ಯೋಗಕ್ಕಾಗಿ ಅರಸಿದರೂ ಲಭಿಸದ ಹಿನ್ನಲೆಯಲ್ಲಿ ಮಾನಸಿಕ ಖಿನ್ನತೆಗೊಳಗಾಗಿ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ವರದಿಯಾಗಿದೆ.

ಈತ ನದಿಗೆ ಹಾರಲು ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಈತನ ಚಲನವಲನಗಳನ್ನು ಗಮನಸಿದ ಸ್ಥಳೀಯ ನಿವಾಸಿ ಯುವಕರು ಸಕಾಲದಲ್ಲಿ ಕಾರ್ಯಪ್ರವೃತ್ತರಾಗಿ ನಿಶ್ಚಿತ್‌ನನ್ನು ಆತ್ಮಹತ್ಯೆಯ ದವಡೆಯಿಂದ ಪಾರು ಮಾಡಿ ಕೂಡಲೇ 112 ಗೆ ಕರೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

Leave A Reply

Your email address will not be published.