Salary Hike News: ಸರಕಾರಿ ನೌಕರರ ನಿರೀಕ್ಷೆಗೆ ಸಿಕ್ತು ಬಿಗ್‌ ಅಪ್ಡೇಟ್‌; ವೇತನ ಹೆಚ್ಚಳದ ಕುರಿತು ಇಲ್ಲಿದೆ ಮಾಹಿತಿ

Salary Increase: ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಮೋದಿ ಸರಕಾರ ಬಹು ದೊಡ್ಡ ಉಡುಗೊರೆಯನ್ನು ನೀಡಿದೆ. ಈ ಬಾರಿಯ ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳದ ನಿರೀಕ್ಷೆ ಇದೆ. ಪ್ರತಿ ಅರ್ಧ ವರ್ಷಕ್ಕೊಮ್ಮೆ ಕೇಂದ್ರ ಸರಕಾರ ಎರಡು ಬಾರಿ ಡಿಎ ಹೆಚ್ಚಳ ಮಾಡುತ್ತದೆ. ಈ ಬಾರಿ ಮಾರ್ಚ್‌ನಲ್ಲಿ ಆಗಲಿರುವ ಸಾಧ್ಯತೆ ಇದೆ.

ಶೇ. 4 ರಷ್ಟು ತುಟ್ಟಿಭತ್ಯೆಯನ್ನು ಈ ಬಾರಿ ಹೆಚ್ಚಿಸಬಹುದು. ಫಿಟ್‌ಮೆಂಟ್‌ ಅಂಶದಲ್ಲಿಯೂ ಹೆಚ್ಚಳ ಮಾಡಬಹುದು ಎಂದು ಮೂಲಗಳು ತಿಳಿಸಿದೆ. ಇದೆಲ್ಲ ಸಂಭವಿಸಿದರೆ ಸರಕಾರಿ ನೌಕರರಿಗೆ ವೇತನದಲ್ಲಿ ಭಾರೀ ಹೆಚ್ಚಳವಾಗುವುದು.

ಫಿಟ್‌ಮೆಂಟ್‌ ಅಂಶವನ್ನು 2.60 ಶೇ.ದಿಂದ ಶೇ.3ಕ್ಕೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತದೆ. ಫಿಟ್‌ಮೆಂಟ್‌ ಅಂಶದಲ್ಲಿ ಹೆಚ್ಚಳವಾದರೆ ಕನಿಷ್ಠ ಮೂಲ ವೇತನ ಹೆಚ್ಚಿದೆ. ಆದರೆ ಸರಕಾರ ಈ ಕುರಿತು ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಈ ಕುರಿತು ಚರ್ಚೆ ನಡೆಯುತ್ತಿದೆ ಎಂದು ಮಾಧ್ಯಮದಲ್ಲಿ ಹೇಳಲಾಗಿದೆ.

Leave A Reply

Your email address will not be published.