Post Office Scheme: ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ತಿಂಗಳಿಗೆ 10ಸಾವಿರ ಗಳಿಸಿ

Post Office Scheme: ಅಂಚೆ ಕಚೇರಿಯ ಹೊಸ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ, ನಿಮ್ಮ ಹಣ ಸುರಕ್ಷಿತವಾಗಿರುವುದರ ಜೊತೆಗೆ ಪ್ರತಿ ತಿಂಗಳು ಸಮಾರು 10 ಸಾವಿರ ರೂ. ತನಕ ಆದಾಯ ಪಡೆಯಬಹುದಾಗಿದೆ.

ಇದನ್ನೂ ಓದಿ: Mangaluru: ಶ್ರೀರಾಮನ ನಿಂದನೆ ವಿರುದ್ಧ ಧ್ವನಿಯೆತ್ತಿದ್ದ ಪೋಷಕಿಗೆ ದುಬೈ, ಕತಾರ್‌, ಸೌದಿಯಿಂದ ಬೆದರಿಕೆ ಕರೆ

ಬಹುತೇಕ ಮಂದಿ ಹೂಡಿಕೆ ಮಾಡುವಾಗ ಅಧಿಕ ರಿಟರ್ನ್ಸ್ ಅನ್ನು ಗಮನದಲ್ಲಿ ಇಟ್ಟುಕೊಂಡರೆ, ಇತರರು ನಮ್ಮ ಹಣ ಸುರಕ್ಷಿತವಾಗಿದ್ದರೆ ಸಾಕು ಎನ್ನುತ್ತಾರೆ. ಭಾರತದಲ್ಲಿ ಯಾವುದೇ ರಿಸ್ಕ್ ಇಲ್ಲದೆ ಹೂಡಿಕೆ ಮಾಡಬಹುದಾದಂತಹ ತಾಣವೆಂದರೆ ಅದು ಅಂಚೆ ಕಚೇರಿ. ಅಂಚೆ ಕಚೇರಿಯ ಉಳಿತಾಯ ಯೋಜನೆ ಅಡಿ ಹೂಡಿಕೆ ಮಾಡಿದ್ರೆ ನಿಮ್ಮ ಹಣಕ್ಕೆ ಯಾವುದೇ ಅಪಾಯವಿರುವುದಿಲ್ಲ. ಇಲ್ಲಿ ಮಾಡಿದ ಹೂಡಿಕೆ ಶೇ.100ರಷ್ಟು ಸುರಕ್ಷಿತವಾಗಿರುತ್ತದೆ. ಇದಕ್ಕೆ ಕಾರಣ ಅಂಚೆ ಕಚೇರಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಬೆಂಬಲವಿರುತ್ತದೆ. ನಮ್ಮ ಹಣಕ್ಕೆ ಸರ್ಕಾರದ ರಕ್ಷಣೆ ಇರುವ ಕಾರಣ ಇಲ್ಲಿ ಹಣ ಕಳೆದುಕೊಳ್ಳುವ ಭಯವಿಲ್ಲ. ಇದೇ ಕಾರಣಕ್ಕೆ ಭಾರತದಲ್ಲಿ ಇಂದಿಗೂ ಅಂಚೆ ಕಚೇರಿ ಹೂಡಿಕೆ ಯೋಜನೆಗಳು ಜನರ ಮೆಚ್ಚುಗೆ, ನಂಬಿಕೆ ಗಳಿಸಿವೆ. ಹೂಡಿಕೆ ಮಾಡಲ ಬಯಸಿದರೆ,ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್) ಉತ್ತಮ ಆಯ್ಕೆ.

 

ಈ ಯೋಜನೆಯಲ್ಲಿ ನಿವೃತ್ತಿ ಹೊಂದಿದ ಬಳಿಕ ಪ್ರತಿ ತಿಂಗಳು ನಿಗದಿತ ಆದಾಯ ಕೂಡ ಸಿಗುತ್ತದೆ. ಇನ್ನು ನೀವು ನಿಮ್ಮ ಸಂಗಾತಿಯ ಜೊತೆಗೆ ಪಿಒಎಂಐಎಸ್ ಜಂಟಿ ಖಾತೆ ಸಹ ಓಪನ್ ಮಾಡಿಸಬಹುದು. ಈ ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡಿದರೆ ನಿವೃತ್ತಿ ಬಳಿಕ ಪ್ರತಿ ತಿಂಗಳು ನಿಶ್ಚಿತ ಆದಾಯವನ್ನು ಪಡೆಯಬಹುದು. ಪ್ರಸ್ತುತ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ವಾರ್ಷಿಕ ಶೇ.7.4ರಷ್ಟು ಬಡ್ಡಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 5,000ರೂ. ನಿಂದ 9,250ರೂ. ತನಕ ನಿಶ್ಚಿತ ಆದಾಯ ಗಳಿಸುವ ಸಾಧ್ಯತೆ ಇದೆ.

 

ಅಂಚೆ ಇಲಾಖೆಯು. ತನ್ನ ಮಾಸಿಕ ಆದಾಯ ಯೋಜನೆಯಲ್ಲಿ (ಪಿಒಎಂಐಎಸ್) ನೀವು 9 ಲಕ್ಷ ರೂ. ಹೂಡಿಕೆ ಮಾಡಿದರೆ ಪ್ರತಿ ತಿಂಗಳು 5,550ರೂ. ಪಡೆಯಬಹುದು. ನಿಮ್ಮ ಸಂಗಾತಿ ಜೊತೆಗೆ ಸೇರಿ 15ಲಕ್ಷ ರೂ. ಹೂಡಿಕೆ ಮಾಡಿದರೆ ನಿಮಗೆ ತಿಂಗಳಿಗೆ 9,250ರೂ. ಬಡ್ಡಿ ಸಿಗುತ್ತದೆ. ನೀವು ಹೂಡಿಕೆ ಮಾಡಿದ ಒಂದು ತಿಂಗಳಲ್ಲೇ ಹಣ ಪಡೆಯಬಹುದು. ಮೆಚ್ಯೂರಿಟಿ ಅವಧಿ ಮುಗಿದ ಬಳಿಕ ಪ್ರಧಾನ ಮೊತ್ತವನ್ನು ವಿತ್ ಡ್ರಾ ಮಾಡಬಹುದು ಕೂಡ.

 

ವಯಸ್ಕರು, 10 ವರ್ಷದ ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು. ಮಕ್ಕಳಿಗೆ 18 ವರ್ಷ ತುಂಬಿದ ಮೇಲೆ ಅವರ ಹೆಸರಿಗೆ ಬದಲಾವಣೆ ಮಾಡಬಹುದು.

 

ನಿಮಗೆ ಹತ್ತಿರವಿರುವ ಅಂಚೆ ಇಲಾಖೆಗೆ ತೆರಳಿ, ಉಳಿತಾಯ ಖಾತೆ ತೆರೆಯಿರಿ.ನಂತರ ಎಂಐಎಸ್ ಖಾತೆ ತೆರೆಯಲು ಅರ್ಜಿ ಭರ್ತಿ ಮಾಡಿಕೊಡಿ. ನಂತರ ಫೋಟೋ ಜೊತೆಗೆ ಗುರುತು ದೃಢೀಕರಣ ಹಾಗೂ ಕೆವೈಸಿ ದಾಖಲೆಗಳನ್ನು ನೀಡಿ. ಆ ಬಳಿಕ ಹಣ ನೀಡಿದ್ರೆ ಎಂಐಎಸ್ ಖಾತೆ ಪ್ರಾರಂಭವಾಗುತ್ತದೆ. ನೀವು ಅಂಚೆ ಇಲಾಖೆಯ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದರೂ ಅದರ ಬಡ್ಡಿ ಉಳಿತಾಯ ಖಾತೆಗೆ ಬಂದು ಬೀಳುತ್ತದೆ.

 

ಈ ಯೋಜನೆಯಲ್ಲಿ ಇಡಬಹುದಾದ ಠೇವಣಿಯ ಮಿತಿಯನ್ನು ಹಿಂದಿನ ವರ್ಷದ ಬಜೆಟ್ ನಲ್ಲಿ ಹೆಚ್ಚಳ ಮಾಡಲಾಗಿದೆ. ಈ ಯೋಜನೆಯಲ್ಲಿ ಒಂದೇ ಖಾತೆ ಹೊಂದಿರೋರಿಗೆ ಗರಿಷ್ಠ ಠೇವಣಿ ಮಿತಿಯನ್ನು 4.5ಲಕ್ಷ ರೂ.ನಿಂದ 9ಲಕ್ಷ ರೂ.ಗೆ ಹೆಚ್ಚಿಗೆ ಮಾಡಲಾಗಿದೆ. ಜೊತೆಗೆ ಜಂಟಿ ಖಾತೆಯಲ್ಲಿ 9ಲಕ್ಷ ರೂನಿಂದ 15 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

 

ಎಂಇಎಸ್ ಖಾತೆಯನ್ನು ಓಪನ್ ಮಾಡಿದ 5 ವರ್ಷಗಳ ನಂತರ ಕ್ಲೋಸ್ ಮಾಡಬಹುದು. ಸಂಬಂಧಿಸಿದ ಅಂಚೆ ಇಲಾಖೆಗೆ ಅಗತ್ಯವಿರುವ ಅರ್ಜಿ ಹಾಗೂ ಪಾಸ್ ಪುಸ್ತಕ ಸಲ್ಲಿಕೆ ಮಾಡುವ ಮೂಲಕ ಖಾತೆಯನ್ನು ಕ್ಲೋಸ್ ಮಾಡಬಹುದು. ಒಂದು ವೇಳೆ ಖಾತೆ ಮೆಚ್ಯುರ್ ಆಗುವ ಮುನ್ನ ಖಾತೆದಾರ ಸಾವನ್ನಪ್ಪಿದರೆ ಆತ ಅಥವಾ ಆಕೆಯ ನಾಮಿನಿ ಅಥವಾ ಕಾನೂನುಬದ್ದ ಉತ್ತರಾಧಿಕಾರಿಗೆ ಹಣವನ್ನು ರೀಫಂಡ್ ಮಾಡಲಾಗುವುದು. .

ಒಂದು ವೇಳೆ ನೀವು 3 ವರ್ಷಗಳೊಳಗೆ ಹಣ ವಿತ್ ಡ್ರಾ ಮಾಡಲು ಬಯಸಿದ್ದಲ್ಲಿ ,ಠೇವಣಿ ಮೊತ್ತದ ಮೇಲೆ ಶೇ.2ರಷ್ಟು ದಂಡ ವಿಧಿಸಲಾಗುತ್ತದೆ. ಇನ್ನು ಮೂರು ವರ್ಷಗಳ ಬಳಿಕ ನೀವು ನಿಮ್ಮ ಹಣವನ್ನು ಕೇವಲ ಶೇ.1ರಷ್ಟು ಕಡಿತದ ಜೊತೆಗೆ ವಿತ್ ಡ್ರಾ ಮಾಡಬಹುದಾಗಿದೆ.

Leave A Reply

Your email address will not be published.