Puttur: ಕಾರಿನಲ್ಲಿ ತಲ್ವಾರ್‌ ಜೊತೆ ತಿರುಗಾಡುತ್ತಿದ್ದ ನಾಲ್ವರ ಬಂಧನ

Puttur: ಆಯುಧಗಳೊಂದಿಗೆ ತಡ ರಾತ್ರಿ ಅನುಮಾನಸ್ಪದವಾಗಿ ಕಾರಿನಲ್ಲಿ ತಿರುಗಾಡುತ್ತಿದ್ದ ನಾಲ್ವರನ್ನು ಪುತ್ತೂರು ನಗರ ಠಾಣೆ ಪೊಲೀಸರು ಬಂಧಿಸಿರುವ ಘಟನೆಯೊಂದು ನಡೆದಿದೆ. ಹಾಗೂ ಈ ಕುರಿತು ಪ್ರಕರಣ ದಾಖಲಾಗಿದೆ.

ಫೆ.19 ರ ತಡರಾತ್ರಿ ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಜಂಕ್ಷನ್‌ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರೊಂದನ್ನು ಪೊಲೀಸರು ಕಾರನ್ನು ತಪಾಸಣೆ ನಡೆಸಿದಾಗ ಅದರಲ್ಲಿ ತಲ್ವಾರು ಪತ್ತೆಯಾಗಿತ್ತು. ಒಟ್ಟು ನಾಲ್ಕು ಮಂದಿ ಕಾರಿನಲ್ಲಿ ಇದ್ದು, ಅವರನ್ನು ವಶಕ್ಕೆ ವಿಚಾರಣೆ ನಡೆಸಿದ್ದಾರೆ.

ಗೋಳ್ತಮಜಲು ಗ್ರಾಮ, ಬಂಟ್ವಾಳ ನಿವಾಸಿ ಕಿಶೋರ್‌ (36), ಕಬಕ ಗ್ರಾಮ, ಪುತ್ತೂರು ನಿವಾಸಿ ಮನೋಜ್‌ (23), ಕಬಕ ಗ್ರಾಮ ಪುತ್ತೂರು ನಿವಾಸಿ ಆಶಿಕ್‌ (28) ಮತ್ತು ಪಡ್ನೂರು ಗ್ರಾಮ, ಪುತ್ತೂರು ನಿವಾಸಿ ಸನತ್‌ ಕುಮಾರ್‌ (24) ರನ್ನು ಬಂಧನ ಮಾಡಲಾಗಿದೆಯೆಂದು ವರದಿಯಾಗಿದೆ.

Leave A Reply

Your email address will not be published.