Crime News: ಊಟ ತಂದುಕೊಟ್ಟಿಲ್ಲ ಎಂದು ಶಾಲಾ ಮಕ್ಕಳನ್ನು ಕೂಡಿ ಹಾಕಿ ಹಿಗ್ಗಾಮುಗ್ಗ ಥಳಿಸಿದ ಶಿಕ್ಷಕಿ

Dharwad: ಮಧ್ಯಾಹ್ನದ ವೇಳೆ ಊಟ ತಂದುಕೊಡದ ಮಕ್ಕಳನ್ನು ಶಿಕ್ಷಕಿಯೋರ್ವರು ಹಿಗ್ಗಾಮುಗ್ಗ ಥಳಿಸಿದ ಆರೋಪವೊಂದು ಕೇಳಿ ಬಂದಿದೆ. ಈ ಕುರಿತು ಪೋಷಕರು ಹಾಗೂ ಮಕ್ಕಳು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: Salary Hike News: ಸರಕಾರಿ ನೌಕರರ ನಿರೀಕ್ಷೆಗೆ ಸಿಕ್ತು ಬಿಗ್‌ ಅಪ್ಡೇಟ್‌; ವೇತನ ಹೆಚ್ಚಳದ ಕುರಿತು ಇಲ್ಲಿದೆ ಮಾಹಿತಿ

ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜುಂಜನಬೈಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಸುಜಾತ ಸುಣಗಾರ ಎಂಬುವವರೇ ಮಕ್ಕಳನ್ನು ಥಳಿಸಿರುವ ಶಿಕ್ಷಕಿ. ಇದೀಗ ಶಾಲೆ ಎದುರು ಪ್ರತಿಭಟನೆ ನಡೆಸಲಾಗಿದೆ.

4 ಮತ್ತು 5 ನೇ ತರಗತಿಯ ಮಕ್ಕಳನ್ನು ಕೊಠಡಿಯಲ್ಲಿ ಕೂಡಿ ಹಾಕಿದ ಶಿಕ್ಷಕಿ ಕೋಲಿನಿಂದ ಮನಬಂದಂತೆ ಥಳಿಸಿದ್ದಾರೆ. ಮಕ್ಕಳು ನೋವು ತಾಳಲಾರದೆ ಕೊಠಡಿಯಿಂದ ಓಡಿ ಬಂದಿದ್ದು, ಕೆಲವರು ಬಿದ್ದು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ನಂತರ ಸ್ಥಳಕ್ಕೆ ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ, ಶಿಕ್ಷಣ ಸಂಯೋಜನರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿಕ್ಷಕಿ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.