Kerala news: ರೂಮ್ ಬಾಗಿಲು ಲಾಕ್ ಮಾಡಿ ನಿದ್ರೆಗೆ ಜಾರಿದ 2 ವರ್ಷದ ಮಗು : ಕಂಗಾಲಾದ ಪೋಷಕರು : ಬೀಗ ಮುರಿದು ಮಗುವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

Kerala news: ಎರಡು ವರ್ಷದ ಮಗುವೊಂದು ರೂಮ್ ಬಾಗಿಲು ಹಾಕಿಕೊಂಡು ಮಲಗಿದ್ದು, ರೂಮ್ ಒಳಗೆ ಹೋಗಲಾರದೆ ಭಯಭೀತರಾದ ಕುಟುಂಬಸ್ಥರು ಕೊನೆಗೆ ಅಗ್ನಿಶಾಮಕದಳದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದು, ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮಗುವನ್ನು ರಕ್ಷಿಸಿರುವ ಘಟನೆ ಕೇರಳದ ಕಂಜಿರಪಲ್ಲಿಯಲ್ಲಿ ನಡೆದಿದೆ.

ಇದನ್ನೂ ಓದಿ: Kerala news: ರೂಮ್ ಬಾಗಿಲು ಲಾಕ್ ಮಾಡಿ ನಿದ್ರೆಗೆ ಜಾರಿದ 2 ವರ್ಷದ ಮಗು : ಕಂಗಾಲಾದ ಪೋಷಕರು : ಬೀಗ ಮುರಿದು ಮಗುವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಮಗು ರೂಂ ಲಾಕ್ ಮಾಡಿಕೊಂಡು ಬೆಡ್‌ ಮೇಲೆ ಹತ್ತಿ ಮಲಗಿತ್ತು. ಆದರೆ ಎಷ್ಟು ಹೊತ್ತಾದರೂ ಬಾಗಿಲು ತೆರೆಯದೇ ಇದ್ದಾಗ ಮನೆಯವರು ಗಾಬರಿಗೊಂಡಿದ್ದಾರೆ.

ಆದರೂ ರಾತ್ರಿಯವರೆಗೆ ಬಾಗು ಬಾಗಿಲು ತೆಗೆಯಲು ಪ್ರಯತ್ನಿಸಿದ್ದು, ಅದು ಪ್ರಯೋಜನಕ್ಕೆ ಬರದೇ ಇದ್ದಾಗ, ಮಗುವಿನ ತಂದೆ ಕಂಜಿರಪಲ್ಲಿಯಲ್ಲಿರುವ ಅಗ್ನಿಶಾಮಕ ದಳದ ಕಚೇರಿಗೆ ತೆರಳಿ ಮಾಹಿತಿ ನೀಡಿದ್ದು, ಇದರಿಂದ ತಕ್ಷಣ ಎಚ್ಚೆತ್ತ ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾಧಿಕಾರಿ ನೌಫಲ್ ಪಿಎ ನೇತೃತ್ವದಲ್ಲಿ ಅಧಿಕಾರಿಗಳು ರೂಮ್ ಬೀಗ ಮುರಿದು ಒಳ ಹೊಕ್ಕಾಗ ಎಲ್ಲರಿಗೂ ಅಚ್ಚರಿ ಎಂಬಂತೆ ಮಗು ಗಾಢವಾಗಿ ನಿದ್ರಿಸುತ್ತಿತ್ತು. ಬಳಿಕ ಮಗುವಿನ ತಾಯಿ ಮಗುವನ್ನು ಎತ್ತಿಕೊಂಡು ಮುದ್ದಾಡಿದ್ದಾರೆ.

ಇದನ್ನೂ ಓದಿ: Accident News: ಶಿರಾಡಿ ಘಾಟಿಯ ಬಳಿ ಭೀಕರ ರಸ್ತೆ ಅಪಘಾತ : ತಾಯಿ ಮಗನ ದುರಂತ ಸಾವು

ಹಿಂದಿನ ದಿನ ಇದೇ ರೀತಿಯಾಗಿ ಎರಡುವರೆ ವರ್ಷದ ಮಗು ರೂಮ್ನಲ್ಲಿ ಬಾಗಿಲು ಹಾಕಿಕೊಂಡಿತ್ತು ಆಗಲು ಸಹ ಅಗ್ನಿಶಾಮಕ ಸಿಬ್ಬಂದಿ ಬೀಗ ಹೊಡೆದು ಮಗುವನ್ನು ರಕ್ಷಿಸಿದ್ದರು.

Leave A Reply

Your email address will not be published.