Mangaluru: ಹಣ ಹಾಗೂ ಮೊಬೈಲ್ ಕದ್ದ ಎಂದು ಆರೋಪಿಸಿ ಪುಣಚದ ಯುವಕನಿಗೆ ಚಾಕುವಿನಿಂದ ಹಲ್ಲೆ

Mangaluru: ಒಂದು ಸಾವಿರ ರೂ ಹಣ ಹಾಗೂ ಮೊಬೈಲ್ ಕದ್ದಿದ್ದಾನೆಂದು ಆರೋಪಿಸಿ ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಇರಿದ ಘಟನೆ ಮಂಗಳೂರು ನಗರದ ಸೆಂಟ್ರಲ್ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.

ಇದನ್ನೂ ಓದಿ: Accident News: ಶಿರಾಡಿ ಘಾಟಿಯ ಬಳಿ ಭೀಕರ ರಸ್ತೆ ಅಪಘಾತ : ತಾಯಿ ಮಗನ ದುರಂತ ಸಾವು

ಕೇರಳ ಕೊಲ್ಲಂ ಮೂಲದ ಆರೋಪಿ ಮೊಹಮ್ಮದ್ ನೌಫಾಲ್(21) ಭಾನುವಾರ ಸಂಜೆ ತನ್ನ ಸ್ನೇಹಿತ ಅನಾಸ್ ಜೊತೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಳಿ ಸಚಿನ್‌ನನ್ನು(31) ಭೇಟಿಯಾಗಿ ಎಲ್ಲರೂ ರಾತ್ರಿ ಊಟ ಮಾಡಿ ರೈಲ್ವೆ ನಿಲ್ದಾಣದ ಸಮೀಪ ಮಲಗಿದ್ದರು.

ಇದನ್ನೂ ಓದಿ: High school Student death: ಟಿಸಿ ಕೊಡದಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಆದರೆ ಸೋಮವಾರ ನೌಫಾಲ್ ಬಳಿ ಇದ್ದ ಮೊಬೈಲ್ ಹಾಗೂ 1000 ರೂ ಹಣ ಕಳ್ಳತನವಾಗಿತ್ತು, ಈ ಕಳ್ಳತನವನ್ನು ಸಚಿನ್ ಮಾಡಿದ್ದಾನೆ ಎಂದು ಶಂಕಿಸಿ ಮುಹಮ್ಮದ್‌ ನೌಫಾಲ್ ಸಚಿನ್ ಜೊತೆ ಜಗಳವಾಡಿದ್ದಾನೆ.

ಇದ್ದಕ್ಕಿದ್ದಂತೆ ಇಬ್ಬರ ನಡುವೆ ವಾಗ್ವಾದ ಹೆಚ್ಚಾಗಿದ್ದು, ಇದರಿಂದ ಕೋಪಗೊಂಡ ನೌಫಾಲ್ ಜೇಬಿನಿಂದ ಚಾಕು ತೆಗೆದು ನೇರವಾಗಿ ಸಚಿನ್ ಹೊಟ್ಟೆಗೆ ಇರಿದಿದ್ದಾನೆ. ಚಾಕು ಇರಿತದಿಂದ ಗಂಭೀರವಾಗಿ ಕಳೆದುಕೊಂಡ ಸಚಿನ್ ನನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ನವೀನ್ ಅಪಾಯದಿಂದ ಪಾರಾಗಿದ್ದಾನೆ.

ನವೀನನ್ನು ಇರಿದ ಆರೋಪದ ಮೇಲೆ ನೌಫಾಲ್‌ನನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

Leave A Reply

Your email address will not be published.