Accident News: ಶಿರಾಡಿ ಘಾಟಿಯ ಬಳಿ ಭೀಕರ ರಸ್ತೆ ಅಪಘಾತ : ತಾಯಿ ಮಗನ ದುರಂತ ಸಾವು

Accident News: ಶಿರಾಡಿ ಘಾಟಿಯ(Shiradi Ghat) ಬಳಿ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು, ಇದೀಗ ಬೆಂಗಳೂರಿನಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಇನೋವಾ ಕಾರೊಂದು(innova car) ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತಕ್ಕೆ ತುತ್ತಾದ ಪರಿಣಾಮ ಕಾರಿನಲ್ಲಿದ್ದ ತಾಯಿ-ಮಗ ಮೃತಪಟ್ಟ ಘಟನೆ ನಡೆದಿದೆ.

ಇದನ್ನೂ ಓದಿ: High school Student death: ಟಿಸಿ ಕೊಡದಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಇಂದು ಮುಂಜಾನೆ ಇನೋವಾ ಕಾರಿನಲ್ಲಿ(innova car) ಒಂದೇ ಕುಟುಂಬದ ಸದಸ್ಯರು ಬೆಂಗಳೂರಿನಿಂದ ಮಂಗಳೂರಿನೆಡೆಗೆ ಪ್ರಯಾಣ ಬೆಳೆಸಿದ್ದರು, ಆದರೆ ಶಿರಾಡಿಘಾಟಿಯ ಬಳಿ ಕಾರು ಅಪಘಾತಕ್ಕೀಡಾಗಿದ್ದು ಕಾರಿನಲ್ಲಿದ್ದ ತಾಯಿ ಮಗ ಸಾವನ್ನಪ್ಪಿದ್ದು ಕಾರಿನಲ್ಲಿದ್ದ ಇತರರಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Siddaramaiah: ಸಿದ್ದರಾಮಯ್ಯ ಪ್ರಧಾನಿ ಅಭ್ಯರ್ಥಿ ?!

ಈ ದುರ್ಘಟನೆಯಲ್ಲಿ ಮೃತಪಟ್ಟವರನ್ನು ಪಾಣೆಮಂಗಳೂರು ಬೊಂಡಾಲದ ಶಬ್ಬಿರ್ ಎಂಬವರ ಪತ್ನಿ ಸಫಿಯಾ(50) ಹಾಗೂ ಅವರ ಮಗ ಮೊಹಮ್ಮದ್ ಶಫೀಕ್(20) ಎಂದು ಗುರುತಿಸಲಾಗಿದೆ.

ಈ ಪ್ರಕರಣ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರಿನಲ್ಲಿದ್ದವರ ಪೈಕಿ ಮೂವರು ಮಕ್ಕಳು ಸಹ ಪ್ರಯಾಣಿಸುತ್ತಿದ್ದರು, ಅವರಿಗೂ ಸಹ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ

ನಿನ್ನೆ ತಾನೇ ಬೆಂಗಳೂರಿನಲ್ಲಿ ಸಂಬಂಧಿಕರ ಮದುವೆ ಔತಣಕೂಟ ಸಮಾರಂಭದಲ್ಲಿ ಭಾಗವಹಿಸಿ, ವಾಪಸ್ಸಾಗುವ ವೇಳೆ ಈ ದುರಂತ ಸಂಭವಿಸಿದೆ.

Leave A Reply

Your email address will not be published.