School Girl Died: ಪದ್ಮಶ್ರೀ ಪುರಸ್ಕೃತ ಹರೆಕಳ ಹಾಜಬ್ಬ ಶಾಲೆಯಲ್ಲಿ ಹೃದಯ ವಿದ್ರಾವಕ ಘಟನೆ : ಶಾಲೆಯ ಕಾಂಪೌಂಡ್ ಗೇಟ್ ಕುಸಿದು ವಿದ್ಯಾರ್ಥಿನಿ ದುರ್ಮರಣ

School Girl Died: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಇದರಿಂದಾಗಿ ಅನೇಕ ಕಡೆ ಗೋಡೆ ಕುಸಿತ ಪ್ರಕರಣಗಳು ದಾಖಲಾಗುತ್ತಿವೆ. ಇದೀಗ ಶಾಲೆಯ ಕಂಪೌಂಡ್ ಗೇಟು ಕುಸಿತದಿಂದಾಗಿ ಬಾಲಕಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಉಳ್ಳಾಲ ತಾಲೂಕಿನ ನ್ಯೂಪಡ್ಪು ಶಾಲೆಯಲ್ಲಿ ನಡೆದಿದೆ.

ಇದನ್ನೂ ಓದಿ: Mangaluru: ಕಂಬಳ ಕ್ಷೇತ್ರದ ಕರ್ಮವೀರರಿಗೂ ವಿಮೆ – ಯಕ್ಷಧ್ರುವ ಪಟ್ಲ ಫೌಂಡೇಶನ್ ಮಹತ್ವದ ಹೆಜ್ಜೆ

ಮೃತ ಬಾಲಕಿಯನ್ನು ನ್ಯೂಪಡ್ಡು ನಿವಾಸಿ ಸಿದ್ದೀಕ್-ಜಮೀಲಾ ದಂಪತಿಯ ಪುತ್ರಿ ಶಾಝಿಯಾ ಬಾನು(7) ಎಂದು ಗುರುತಿಸಲಾಗಿದೆ.

ಈ ಶಾಲೆಯನ್ನು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಪ್ಪ(Harekala Hajabba) ಅವರು ನಿರಂತರ ಶ್ರಮದಿಂದ ನಿರ್ಮಿಸಿದ್ದರು. ಶಾಲಾ ಗೇಟು ನಿರಂತರ ಮಳೆಯಿಂದಾಗಿ ತುಕ್ಕು ಹಿಡಿದಿದ್ದು ಬಾಲಕಿ ಸ್ನೇಹಿತರೊಂದಿಗೆ ಸೇರಿ ಆಟವಾಡುವ ವೇಳೆ ಆಕೆಯ ಮೇಲೆ ಬಿದ್ದು ಬಾಲಕಿ ದುರ್ಮರಣ ಸಂಭವಿಸಿದೆ.

ಸತತ ಮೂರು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಬಿರ ನಡೆಯುತ್ತಿದ್ದಾರೆ. ಇದರಿಂದಾಗಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸ ಬೇಕಾದ ಕಾರಣ ಎಲ್ಲಾ ಮಕ್ಕಳು ಇಸಿಬಿರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಸೋಮವಾರ ಶಾಲೆಯ ಆವರಣದಲ್ಲಿ ಶಾಝಿಯಾ ಬಾನು ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಳು ಇದೇ ವೇಳೆ ಶಾಲೆಯ ಗೋಡೆ ಗೇಟಿನ ಸಮೇತ ಕುಸಿದಿದ್ದು ಅಲ್ಲಿಯೇ ಆಟವಾಡುತ್ತಿದ್ದ ಶಾಝಿಯಾ ಮೇಲೆ ಬಿದ್ದಿದೆ. ಗೇಟ್ ಬಿದ್ದ ರಬಸಕ್ಕೆ ಆಕೆಯ ಕೈ ಮುರಿದಿದ್ದು, ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿತ್ತು, ತಕ್ಷಣ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರಾದರು ಆ ಕಂದಮ್ಮನ ಪ್ರಾಣ ಉಳಿಯಲಿಲ್ಲ.

ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಈ ಮುಂಚೆಯೇ ಹಾಳಾಗಿದ್ದ ಗೋಡೆಯ ಕಾರಣದಿಂದಾಗಿ ಮುಗ್ಧ ಪ್ರಾಣ ಬಲಿಯಾಗಿದೆ.

Leave A Reply

Your email address will not be published.