Harish Poonja: ಹರೀಶ್ ಪೂಂಜಾ ವಿರುದ್ಧ ಪ್ರಕರಣ ದಾಖಲು; ಹರೀಶ್ ಪೂಂಜಾ ಮನೆಯಲ್ಲಿ ಪೊಲೀಸರು: ಬಂಧನ ಸಾಧ್ಯತೆ

Harish punja: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸುವ ಸಲುವಾಗಿ ಪೊಲೀಸರು ಈಗಾಗಲೇ ಸಿದ್ಧತೆ ನಡೆಸಿದ್ದು, ಅವರ ಮನೆಯ ಬಳಿ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: Cyber Crime: ಸೈಬರ್ ಕಳ್ಳರಿಂದ ಡಿವೈಎಸ್‌ಪಿ ಬ್ಯಾಂಕ್‌ ಖಾತೆಗೆ ಕನ್ನ!ಲಕ್ಷ ಲಕ್ಷ ಹಣ ಟ್ರಾನ್ಸ್ಫರ್!

ಬೆಳಗ್ಗೆ 11 ಗಂಟೆಗೆ ಪೊಲೀಸ್ ಅಧಿಕಾರಿಗಳು ಗರ್ಡಾಡಿಯಲ್ಲಿರುವ ಶಾಸಕ ಹರೀಶ್ ಪೂಂಜಾ ಅವರ ಮನೆಗೆ ಆಗಮಿಸಿದ್ದು, ವಿಷಯ ತಿಳಿದ ಬೆಂಬಲಿಗರು ಸಹ ಅವರ ಮನೆಯ ಬಳಿ ಬಂದಿದ್ದು ಬಳಿಕ ಹರೀಶ್ ಪೂಂಜಾ ಅವರ ಬಂಧನವನ್ನು ವಿರೋಧಿಸಿದ್ದಾರೆ.

ಇದನ್ನೂ ಓದಿ: Thirupathi Trip: ತಿರುಪತಿಗೆ ಹೋಗುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್! ಇಲ್ಲಿದೆ ಫುಲ್ ಡೀಟೇಲ್ಸ್

ರಾಜ್ಯದಲ್ಲಿರುವ ಗೂಂಡಾ ಸರ್ಕಾರ, ಅಮಾಯಕ ಜನರನ್ನು ಹಿಂಸಿಸುತ್ತಿದೆ, ಅನ್ಯಾಯವಾದಾಗ ಕೇಳಲು ಹೋದ ನಮ್ಮ ಶಾಸಕರ ಮೇಲೆಯೇ ಎಫ್ಐಆರ್ ದಾಖಲಿಸಿದ್ದಾರೆ. ಹೀಗೆ ಅನ್ಯಾಯಕ್ಕೊಳಗಾದವರ ಪರ ಧ್ವನಿ ಎತ್ತುವವರನ್ನು ಈ ಕಾಂಗ್ರೆಸ್ ಸರ್ಕಾರ ಧ್ವನಿ ಅಡಗಿಸುವ ಕೆಲಸ ಮಾಡುತ್ತಿದೆ. ಈ ರೀತಿ ನ್ಯಾಯ ಕೇಳಲು ಹೋದ ಜನಪ್ರತಿನಿಧಿಗಳನ್ನು ಬಂಧಿಸುವುದು ನಿಜಕ್ಕೂ ಹೇಯ ಕೃತ್ಯ. ಒಂದು ವೇಳೆ ಹರೀಶ್ ಪೂಂಜಾ ಅವರನ್ನು ಬಂಧಿಸಿದರೆ ಅದರ ಪರಿಣಾಮ ಕೆಟ್ಟದಾಗಿರುತ್ತದೆ. ನಾವುಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಬೆಂಬಲಿಗರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಬಂಧಿಸಲು ಕಾರಣವೇನು :

ಅಕ್ರಮ ಕಲ್ಲು ಕೋರೆಯನ್ನು ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಶಾಸಕ ಹರೀಶ್ ಪೂಂಜಾ ಆಪ್ತ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್‌ ಶೆಟ್ಟಿ ಅವರನ್ನು ಮೇ 18ರಂದು‌ ಪೊಲೀಸರು ರಾತ್ರಿ ವೇಳೆ ಬಂಧಿಸಿದ್ದು, ಶಾಸಕ ಹರೀಶ್ ಪೂಂಜಾ ರಾತ್ರಿಯೇ ಠಾಣೆಗೆ ಬಂದು ಬಂಧಿತರನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದ್ದರು.

ಆದರೆ ಇದಕ್ಕೆ ಪೊಲೀಸರು ಒಪ್ಪದೇ ಇದ್ದಾಗ ಪೊಲೀಸರ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನಮ್ಮದು ಸರ್ಕಾರ ಬರುತ್ತದೆ ಆಗ ನಿಮ್ಮನ್ನು ನೋಡ್ಕೋತೀನಿ ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇದಾದ ಮೇಲೆ ಪೊಲೀಸ್ ಠಾಣೆಯಲ್ಲಿ ದೊಡ್ಡ ನಾಟಕ ನಡೆದಿದ್ದು, ಬಂದಿತರನ್ನು ಬಿಡುವವರೆಗೂ ನಾನು ಈ ಜಾಗದಿಂದ ಕದಲುವುದಿಲ್ಲ ಎಂದು ಠಾಣೆಯ ನೆಲದ ಮೇಲೆ ಕುಳಿತು ಹರೀಶ್ ಪೂಂಜಾ ಪ್ರತಿಭಟಿಸಿದ್ದಾರೆ.

ಇದೇ ವೇಳೆ ಹರೀಶ್ ಪೂಂಜಾ ಮಾಧ್ಯಮಗಳೊಂದಿಗೆ ಮಾತನಾಡಿ ಪೊಲೀಸರು ತಡರಾತ್ರಿ ಶಶಿರಾಜ್‌ ಶೆಟ್ಟಿ ಅವರ ಮನೆಗೆ ನುಗ್ಗಿ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿದ್ದ ಶಾಸಕರು, ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದು, ನಾನು ನನ್ನ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸುವ ಸಾಧ್ಯತೆ ಇದೆ.

Leave A Reply

Your email address will not be published.